ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೂರು ದಿನ ಮೊಬೈಲ್ ಎಸ್ಎಂಎಸ್ ಬಂದ್

By Mahesh
|
Google Oneindia Kannada News

Babri row: Govt bans bulk SMS, MMS till Sep 25
ನವದೆಹಲಿ, ಸೆ.23: ಅಯೋಧ್ಯೆಯ ಬಾಬ್ರಿ ಮಸೀದಿ ಹಾಗೂ ರಾಮಜನ್ಮಭೂಮಿ ತೀರ್ಪಿನ ಹಿನ್ನೆಲೆಯಲ್ಲಿ ಸಗಟು ಎಸ್‌ಎಂಎಸ್ ಹಾಗೂ ಎಂಎಂಎಸ್‌ಗಳನ್ನು ಮೂರು ದಿನಗಳ ಕಾಲ ತಕ್ಷಣದಿಂದಲೇ ಜಾರಿಗೆ ಬರುವಂತೆ ನಿಷೇಧಿಸಿ ಕೇಂದ್ರ ಸರ್ಕಾರ ಬುಧವಾರ ಆದೇಶ ಹೊರಡಿಸಿದೆ.

ಗೃಹ ಸಚಿವಾಲಯದೊಡನೆ ಸಮಾಲೋಚಿಸಿ ನಡೆಸಿದ ಮಾಹಿತಿ ತಂತ್ರಜ್ಞಾನ ಹಾಗೂ ದೂರ ಸಂವಹನ ಸಚಿವಾಲಯವು ಈ ಆದೇಶ ನೀಡಿದೆ. 'ತಕ್ಷಣದಿಂದಲೇ ಮುಂದಿನ 72 ಗಂಟೆಗಳ ಕಾಲ ಎಲ್ಲ ಸೇವಾ ವಲಯಗಳಲ್ಲಿ ಎಲ್ಲ ಸಗಟು ಎಸ್‌ಎಂಎಸ್ ಹಾಗೂ ಎಂಎಂಎಸ್‌ಗಳನ್ನು ನಿಷೇಧಿಸುವಂತೆ ದೇಶದ ಎಲ್ಲ ಟೆಲಿಕಾಂ ಸೇವಾದಾರರಿಗೆ ಸೂಚನೆ ನೀಡಲಾಗಿದೆ'. ಎಂದು ಆದೇಶದಲ್ಲಿ ಹೇಳಲಾಗಿದೆ.

ರಾಜ್ಯ ಸರ್ಕಾರಗಳಿಗೆ ಸೂಚನೆ: ಆಯಾ ರಾಜ್ಯ ಸರ್ಕಾರಗಳು ಬಲ್ಕ್ ಎಸ್ಎಂಎಸ್ ಬಗ್ಗೆ ಬಗ್ಗೆ ನಿಗಾ ವಹಿಸಬೇಕು. ಊಹಾಪೋಹ ಸುದ್ದಿಗಳು, ಪ್ರಚೋದನಾಕಾರಿ ಸಂದೇಶ ಕಳಿಸುವವರನ್ನು ಬಂಧಿಸಿ ಕ್ರಮ ಕೈಗೊಳ್ಳಲು ರಾಜ್ಯ ಸರ್ಕಾರಗಳಿಗೆ ಸೂಚಿಸಲಾಗಿದೆ.

ಕೆಲವು ಮೊಬೈಲ್ ಗಳಲ್ಲಿ ಈಗಾಗಲೇ ಈ ಬಲ್ಕ್ ಎಸ್ಎಂಸ್ ಸೇವೆ ಸೆ.22 ರ ರಾತ್ರಿಯಿಂದಲೇ ಬಂದ್ ಆಗಿದೆ. ಶುಕ್ರವಾರ ಸೆ.24 ರಂದು ಬಾಬ್ರಿ ಮಸೀದಿ ರಾಮಮಂದಿರಕ್ಕೆ ಸಂಬಂಧಿಸಿದಂತೆ ಅಲಹಾಬಾದ್ ಹೈ ಕೋರ್ಟ್ ತೀರ್ಪು ನೀಡುವ ಹಿನ್ನೆಲೆಯಲ್ಲಿ ಮೊಬೈಲ್ ಸಂದೇಶ ಬಂದ್ ಕ್ರಮವನ್ನು ಕೈಗೊಳ್ಳಲಾಗಿದೆ.

ಈ ರೀತಿ ನಿಷೇಧ ಇದೇ ಮೊದಲು: 72 ಗಂಟೆಗಳ ಕಾಲ ಎಸ್ಎಂಎಸ್ ಹಾಗೂ ಎಂಎಂಎಸ್ ಗಳಿಗೆ ನಿಷೇಧ ಹೇರಿರುವುದು ಇದೇ ಮೊದಲು ಎನ್ನಲಾಗಿದೆ. ಮೊಬೈಲ್ ಸಂದೇಶ ಬಂದ್ ನಿಂದಾಗಿ ಮೊಬೈ ಲ್ ಕಂಪೆನಿಗಳು ಕೋಟ್ಯಾಂತರ ರು ನಷ್ಟ ಅನುಭವಿಸಲಿವೆ. ದಿನವೊಂದಕ್ಕೆ ಕನಿಷ್ಠ 3 ಕೋಟಿ ರು ನಷ್ಟ ಆಗಲಿದೆ ಎಂದು ಪ್ರಮುಖ ಟೆಲಿಕಾಂ ಸಂಸ್ಥೆಯ ವಕ್ತಾರರು ಹೇಳಿದ್ದಾರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X