ಬಾಬ್ರಿ ಭಯ ಬಿತ್ತುತ್ತಿರುವ ಭಯಗ್ರಸ್ಥ ಸರಕಾರ

BS Yeddyurappa
ಸೆಪ್ಟೆಂಬರ್ 24ರಂದು ಅಯೋಧ್ಯೆ ಭೂವಿವಾದದ ತೀರ್ಪು ಹೊರಬೀಳುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಸೆ.24 ಮತ್ತು 25ರಂದು ಶಾಲಾ ಕಾಲೇಜುಗಳಿಗೆ ರಜಾ ಘೋಷಿಸಿದೆ. ಅಲಹಾಬಾದ್ ಹೈಕೋರ್ಟ್ ತೀರ್ಪು ಇನ್ನೂ ಹೊರಬಿದ್ದಿಲ್ಲ, ಸೆ.24ರಂದೇ ತೀರ್ಪು ಬರುವುದಾ? ಗೊತ್ತಿಲ್ಲ. ತೀರ್ಪು ಮಂದೂಡಲು ಸುಪ್ರೀಂ ಕೋರ್ಟಿನಲ್ಲಿ ಅರ್ಜಿ ಸಲ್ಲಿಸಲಾಗಿದೆ. ಅದು ಇನ್ನೂ ವಿಚಾರಣೆಗೆ ಬರಬೇಕಿದೆ. ಸುಪ್ರೀಂ ಕೋರ್ಟ್ ಎರಡೂ ಧಾರ್ಮಿಕ ಪಂಗಡಗಳ ಸಂಧಾನಕ್ಕೆ ಸಮ್ಮತಿಸುವುದಾ? ಅದೂ ಗೊತ್ತಿಲ್ಲ. ಪರಿಸ್ಥಿತಿ ಹೀಗಿರುವಾಗ ಮುಂಜಾಗ್ರತಾ ಕ್ರಮವಾಗಿ ರಜಾ ಘೋಷಿಸಿರುವುದು ಎಷ್ಟು ಸಮಂಜಸ?

ತೀರ್ಪು ರಾಜ್ಯದಲ್ಲಿ ಕೋಮುಗಲಭೆಗೆ ದಾರಿ ಮಾಡಿಕೊಡಬಹುದೆಂಬ ದೂರಾಲೋಚನೆಯಿಂದ ಈ ಕ್ರಮ ಕೈಗೊಳ್ಳುವ ಮುಖಾಂತರ ಸಮಾಜಕ್ಕೆ ಬಿಜೆಪಿ ಸರಕಾರ ಏನು ಹೇಳಲು ಹೊರಟಿದೆ? ಕೋಮು ಗಲಭೆ ಉಂಟಾದರೂ ಅದನ್ನು ಹತ್ತಿಕ್ಕಲು ರಾಜ್ಯ ಸಶಕ್ತವಾಗಿಲ್ಲವೆ? ಬಿಜೆಪಿ ಒಂದು ಹಿಂದೂತ್ವವಾದಿ ಸಂಘಟನೆಯಾಗಿರಬಹುದು. ಆದರೆ, ಅದು ಒಂದು ರಾಜ್ಯವನ್ನು ಮುನ್ನಡೆಸುತ್ತಿರುವ ರಾಜಕೀಯ ಪಕ್ಷವೆಂಬುದನ್ನು ಮರೆಯಬಾರದು. ರಜಾ ಘೋಷಿಸಿದ್ದರಿಂದಲೇ ಮತೀಯ ಗಲಭೆಗೆ ಕುಮ್ಮಕ್ಕು ಕೊಟ್ಟಂತೆ ಆಗುವುದಿಲ್ಲವೆ? ಇದಕ್ಕೆ ಮುಖ್ಯಮಂತ್ರಿ ಏನೆನ್ನುತ್ತಾರೆ.

ಬಿಎಸ್ ಯಡಿಯೂರಪ್ಪನವರು 'ಅಭಿವೃದ್ಧಿ'ಯೇ ತಮ್ಮ ಏಕೈಕ ಮಂತ್ರ ಎಂದು ಎಲ್ಲೆಡೆ ಭಾಷಣಗಳಲ್ಲಿ ಹೇಳುತ್ತಿರುತ್ತಾರೆ. ಆದರೆ, ಈ ರೀತಿ ಎರಡು ದಿನ ರಜಾ ಘೋಷಿಸುವುದರಿಂದ ಅಭಿವೃದ್ಧಿ ಸಾಧ್ಯವೆ? ರಜೆಯ ಸಂದೇಶ ಮೊದಲೇ ಸಾರಿದ್ದರಿಂದ ಮತ್ತು ವಾರಾಂತ್ಯವಾಗಿದ್ದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ಸರಕಾರಿ ಕಚೇರಿಗಳು, ಸಾಫ್ಟ್ ವೇರ್ ಕಂಪನಿಗಳು, ಬ್ಯಾಂಕ್, ಹಣಕಾಸು ಸಂಸ್ಥೆಗಳ ಕಾರ್ಯಚಟುವಟಿಕೆ ತಾನಾಗಿಯೇ ಕುಂಠಿತವಾಗುತ್ತದೆ. ಕೆಲ ಸಂಸ್ಥೆಗಳು ಎರಡು ದಿನ ಕಚೇರಿಗಳಿಗೆ ಬೀಗವನ್ನೂ ಜಡಿಯಬಹುದು. ಇದರಿಂದ ರಾಜ್ಯದ ಬೊಕ್ಕಸಕ್ಕೆ ಆಗುವ ನಷ್ಟವಾದರೂ ಎಷ್ಟು? ನಷ್ಟ ತುಂಬಿಸಲು ಮತ್ತೆ ಕೈ ಹಾಕುವುದು ನಾಗರಿಕರ ಜೇಬಿಗೇ ಅಲ್ಲವೆ?

ರಜೆಯ ದುರ್ಲಾಭ ಪಡೆಯುವ ದುಷ್ಟ ಸಂಘಟನೆಗಳು ಸಹಜವಾಗಿ ಸಮಾಜವಿರೋಧಿ ಚಟುವಟಿಕೆಗಳಲ್ಲಿ ತೊಡಗಬಹುದು. ಒಂದು ಬಸ್ಸಿಗೆ ಕಲ್ಲು ಬಿದ್ದರೆ ಅಥವಾ ಬೆಂಕಿ ಹೊತ್ತಿಕೊಂಡರೆ ಇಡೀ ವ್ಯವಸ್ಥೆಯೇ ಅವ್ಯವಸ್ಥೆಯಾಗಿಬಿಡುತ್ತದೆ. ಸಾರ್ವಜನಿಕ ಆಸ್ತಿಪಾಸ್ತಿಗೆ, ಪ್ರಾಣ ಹಾನಿಯುಂಟಾದರೆ ಯಾರು ಹೊಣೆ? ರಜಾ ಘೋಷಿಸಿರುವ ಮುಖ್ಯಮಂತ್ರಿ ಯಡಿಯೂರಪ್ಪ ಇದೆಲ್ಲದರ ಜವಾಬ್ದಾರಿ ಹೊರುವರೆ?

ಇಂಥ ಸೂಕ್ಷ್ಮ ಸಂದರ್ಭಗಳಲ್ಲಿ ನಾಗರಿಕರನ್ನು ಹುರಿದುಂಬಿಸುವ, ಸಹಬಾಳ್ವೆಯ ಸಂದೇಶವನ್ನು ಸಾರುವ ಮತ್ತು ಮಕ್ಕಳಲ್ಲಿ ಆತ್ವವಿಶ್ವಾಸ ವೃದ್ಧಿಸುವಂಥ ಕ್ರಮಗಳನ್ನು ಕೈಗೊಳ್ಳುವುದ ಬಿಟ್ಟು ಸ್ಕೂಲಿಗೆ ರಜೆ ಘೋಷಿಸಿದರೆ ಯಾವ ಪುರುಷಾರ್ಥಕವೂ ಸಾಧನೆ ಆಗುವುದಿಲ್ಲ. ಡೌನ್ ವಿತ್ ಯಡ್ಡಿ ಗೌವರ್ನಮೆಂಟ್.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+