ಮೂವರು ಮಹನೀಯರಿಗೆ ವಿಜ್ಞಾನ ಪರಿಷತ್ ಪ್ರಶಸ್ತಿ

ಕನ್ನಡ ವಿಜ್ಞಾನ ಪರಿಷತ್ತು ನೀಡುವ ರಜತೋತ್ಸವ ಪ್ರಶಸ್ತಿಯು ತಲಾ 25,000 ರೂ. ಗೌರವಧನ, ಪ್ರಶಸ್ತಿ ಪತ್ರ ಹಾಗೂ ಸ್ಮರಣಿಕೆಗಳನ್ನು ಒಳಗೊಂಡಿರುತ್ತದೆ. ಅಕ್ಟೋಬರ್ 3, 2010 (ಭಾನುವಾರ) ಬೆಂಗಳೂರಿನ ನರಸಿಂಹರಾಜ ಕಾಲನಿಯಲ್ಲಿರುವ ಬಿ.ಎಂ.ಶ್ರೀ. ಕಲಾಭವನ ದಲ್ಲಿ ಸಂಜೆ 5ಗಂಟೆಗೆ ಈ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುವುದು. ಸಮಾರಂಭದ ಅಧ್ಯಕ್ಷತೆಯನ್ನು ಲೋಕಸಭಾ ಸದಸ್ಯ ಹಾಗೂ ಕಂಪ್ಯೂಟರ್ ತಜ್ಞ ಜನಾರ್ದನ ಸ್ವಾಮಿ ಅವರು ವಹಿಸಲಿದ್ದು, ಬೆಂಗಳೂರು ದೂರದರ್ಶನದ ಡೆಪ್ಯುಟಿ ಡೈರೆಕ್ಟರ್ ಜನರಲ್ ಡಾ||ಮಹೇಶ್ ಜೋಷಿ ಮುಖ್ಯ ಅತಿಥಿಗಳಾಗಿರುತ್ತಾರೆ ಎಂದು ಪರಿಷತ್ತಿನ ಸಂಸ್ಥಾಪಕ ಕಾರ್ಯದರ್ಶಿ ಸೂ.ಸುಬ್ರಹ್ಮಣ್ಯಂ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ತನ್ನ ರಜತೋತ್ಸವದ ನೆನಪಿಗಾಗಿ 2003ರಿಂದ ಕನ್ನಡ ಹಾಗೂ ವಿಜ್ಞಾನ ಇವೆರಡೂ ಕ್ಷೇತ್ರಗಳಲ್ಲಿ ಅಸಾಮಾನ್ಯ ಸಾಧನೆ ಮಾಡಿರುವವರಿಗೆ ಕನ್ನಡ ವಿಜ್ಞಾನ ಪರಿಷತ್ ಪುರಸ್ಕರಿಸುತ್ತಾ ಬಂದಿದ್ದು 2005-06-07ನೇ ಸಾಲಿನ ಪ್ರಶಸ್ತಿಗೆ ಈ ಮೂವರನ್ನು ಆರಿಸಲಾಗಿದೆ.
ಕರ್ನಾಟಕದ ವಿಜ್ಞಾನಿಗಳು ಹಾಗೂ ವಿಜ್ಞಾನ ಬರಹಗಾರರನ್ನು ಒಗ್ಗೂಡಿಸಿ ಸರಳ ಕನ್ನಡದಲ್ಲಿ ವಿಜ್ಞಾನ ಕುರಿತ ಪುಸ್ತಕಗಳನ್ನು ಅವರಿಂದ ಬರೆಯಿಸಿ, ಪ್ರಕಟಿಸುವ ಉದ್ದಿಶ್ಯದಿಂದ 1976ರಲ್ಲಿ ಆರಂಭವಾದ ಸಂಸ್ಥೆ ಕನ್ನಡ ವಿಜ್ಞಾನ ಪರಿಷತ್ತು. ಕನ್ನಡ ಭಾಷೆಯ ಮೂಲಕ ವಿಜ್ಞಾನವನ್ನು ಜನಪ್ರಿಯಗೊಳಿಸಲು ಅದರ ಮೂಲಕ ವೈಜ್ಞಾನಿಕ ಮನೋಧರ್ಮ ಬೆಳೆಸಲು, ಗ್ರಾಮೀಣ ಬದುಕಿಗೆ ವೈಜ್ಞಾನಿಕ ಅರಿವು ಮೂಡಿಸಲು ಸ್ಥಾಪಿತವಾದ ಸಂಸ್ಥೆಯಿದು.
ಕನ್ನಡ ಸಾಹಿತ್ಯ ಪರಿಷತ್‌ನ ವಜ್ರ ಮಹೋತ್ಸವ (1977) ಸಂದರ್ಭಕ್ಕೆ ಜನಪ್ರಿಯ ವಿಜ್ಞಾನ ವಿಷಯಗಳ ಕುರಿತು 12 ಕಿರು ಹೊತ್ತಿಗೆಗಳನ್ನು ಪ್ರಕಟಿಸಲಾಯಿತು. ಪುಸ್ತಕಗಳ ಪ್ರಕಟಣೆಯೊಂದಿಗೆ ಜನಪ್ರಿಯ ವಿಜ್ಞಾನ ಸಾಹಿತ್ಯ ಕಮ್ಮಟ, ರಾಜ್ಯ ಮಟ್ಟದ ಪ್ರೌಢಶಾಲಾ ವಿಜ್ಞಾನ ಪ್ರದರ್ಶನ, ಶಿಕ್ಷಕರೊಂದಿಗೆ ವಿಚಾರ ವಿನಿಮಯ, ಜನಪ್ರಿಯ ವಿಜ್ಞಾನೋಪನ್ಯಾಸ ಮತ್ತಿತರ ಕಾರ್ಯಕ್ರಮಗಳನ್ನು ಕಳೆದ 34 ವರ್ಷಗಳಿಂದ ಕ.ವಿ.ಪ. ನಡೆಸಿಕೊಂಡು ಬರುತ್ತಿದೆ.
ಡಾ||ಬಿ.ಜಿ.ಎಲ್.ಸ್ವಾಮಿ, ಡಾ||ಎಂ.ಶಿವರಾಂ (ರಾಶಿ), ಡಾ||ಬಿ.ಪಿ.ರಾಧಾಕೃಷ್ಣ, ಡಾ||ಎಚ್.ನರಸಿಂಹಯ್ಯ, ಡಾ||ಡಿ.ಎಸ್.ಶಿವಪ್ಪ, ಡಾ||ಎಚ್.ಆರ್.ಕೃಷ್ಣಮೂರ್ತಿ, ಡಾ||ಕೆ.ಚಿದಾನಂದ ಗೌಡ, ಪ್ರೊ||ಬಿ.ವಿ.ಸುಬ್ಬರಾಯಪ್ಪ, ಸೂ.ಸುಬ್ರಹ್ಮಣ್ಯಂ ಮುಂತಾದವರ ನಿಕಟ ಸಂಪರ್ಕದಿಂದ ಕ.ವಿ.ಪ. ತನ್ನ ಗರಿಮೆಯನ್ನು ಹೆಚ್ಚಿಸಿಕೊಂಡಿದೆ.











Click it and Unblock the Notifications