ಅಮೆರಿಕದ ಏಳು ಮಂದಿಯಲ್ಲಿ ಒಬ್ಬ ಬಡವನಂತೆ
ವಾಶಿಂಗ್ಟನ್,
ಸೆ.19 : ವಿಶ್ವದ ಶ್ರೀಮಂತ ರಾಷ್ಟ್ರ ಎಂಬ ಖ್ಯಾತಿಯನ್ನು ಪಡೆದಿರುವ ಅಮೆರಿಕದಲ್ಲಿ ಬಡತನವಿಲ್ಲ ಎಂಬ ಜನಸಾಮಾನ್ಯರ ಕಲ್ಪನೆಗೆ ಅರ್ಥವಿಲ್ಲ ಎಂಬುದು ಈಗ ಸಾಬೀತಾಗಿದೆ. ಅಮೆರಿಕದಲ್ಲಿರುವ ಉದ್ಯೋಗ ನಿರತ ಸರಾಸರಿ ಏಳು ಮಂದಿಯಲ್ಲಿ ಒಬ್ಬನ ಬಡತನದಿಂದ ಬಳಲುತ್ತಿರುವುದು ಕಂಡುಬಂದಿದೆ ಎಂದು ವರದಿಯೊಂದು ತಿಳಿಸಿದೆ. ಕಳೆದ 50 ವರ್ಷಗಳ ಅವಧಿಯಲ್ಲೇ ಇದು ಅತಿ ಹೆಚ್ಚಿನ ಬಡತನವಾಗಿದೆ ಎಂದು ವರದಿ ಹೇಳಿದೆ. id="toptextpromo">ಕಳೆದ
ವರ್ಷ ಜಗತ್ತಿನಾದ್ಯಂತ ಕಾಣಿಸಿಕೊಂಡ ಆರ್ಥಿಕ ಹಿಂಜರಿತದಿಂದ ಅಮೆರಿಕದಲ್ಲೂ ಲಕ್ಷಾಂತರ ಮಂದಿ ನೌಕರಿ ಕಳೆದುಕೊಂಡಿದ್ದು, 1960ರ ಬಳಿಕ ಕಂಡು ಬಂದಿರುವ ಅತಿ ಹೆಚ್ಚಿನ ಬಡತನವಿದು ಎನ್ನಲಾಗುತ್ತಿದೆ. ಅಮೆರಿಕದಲ್ಲಿನ ಒಟ್ಟು ಬಡತನ ಪ್ರಮಾಣವು ಪ್ರಸಕ್ತ ಶೇಕಡ 14.3ಕ್ಕೆ ಅಥವಾ 43.6 ದಶಲಕ್ಷ ಮಂದಿಗೆ ಏರಿಕೆಯಾಗಿದೆ ಎಂದು ಅಮೆರಿಕದ ಗಣತಿ ಇಲಾಖೆಯು ಗುರುವಾರ ತನ್ನ ವಾರ್ಷಿಕ ವರದಿಯಲ್ಲಿ ತಿಳಿಸಿದೆ. id='are-slot-1' class='oiad oi-axt oiadv'> id='top-searched-articles'>ಅಮೆರಿಕದ
ಅಧ್ಯಕ್ಷರಾಗಿ ಬರಾಕ್ ಒಬಾಮ ಅಧಿಕಾರ ಸ್ವೀಕರಿಸಿದ ಮೊದಲನೇ ವರ್ಷದ ವರದಿ ಇದಾಗಿದೆ. 2008ರಲ್ಲಿ ಬಡತನ ಪ್ರಮಾಣವು ಶೇಕಡ 13.2 ಅಥವಾ 3.9 ದಶಲಕ್ಷ ಮಂದಿಗೆ ಸೀಮಿತವಾಗಿತ್ತು. ಆರೋಗ್ಯ ವಿಮೆ ಹೊಂದಿರದ ಅಮೆರಿಕನ್ನರ ಪ್ರಮಾಣವು ಶೇಕಡ 15.4ರಿಂದ 16.7 ಅಥವಾ 5.7 ದಶಲಕ್ಷಕ್ಕೆ ಏರಿಕೆಯಾಗಿದೆ. ಜಾಗತಿಕ ಆರ್ಥಿಕ ಹಿಂಜರಿತದಿಂದಾಗಿ ಜನರು ಉದ್ಯೋಗ ಕಳೆದುಕೊಂಡಿರುವ ಪರಿಣಾಮ ಉದ್ಯೋಗದಾತರು ನೀಡುವ ಸ್ವಾಸ್ಥ ವಿಮೆಗಳನ್ನು ಕಳೆದುಕೊಂಡಿರುವುದೇ ಇದಕ್ಕೆ ಪ್ರಮುಖ ಕಾರಣವೆಂದು ನಂಬಲಾಗಿದೆ.











Click it and Unblock the Notifications