ವಿದ್ಯಾರ್ಥಿ ಕೊಲೆ : ಇಬ್ಬರು ಯುವಕರ ಬಂಧನ

 Eve-teasers held for boy Manoj’s death in Bangalore
ಬೆಂಗಳೂರು, ಸೆ.17: ಕೆಂಪೇಗೌಡನಗರದಲ್ಲಿ ನಡೆದ ವಿದ್ಯಾರ್ಥಿ ಮನೋಜ್ ಕೊಲೆ ಪ್ರಕರಣ ನಡೆದ ಕೇವಲ 24ಗಂಟೆಗಳಲ್ಲಿ ಶರತ್ ಹಾಗೂ ವಿನಯ್ ಎಂಬ ಯುವಕರನ್ನು ಬಂಧಿಸುವಲ್ಲಿ ದಕ್ಷಿಣ ವಿಭಾಗದ ಪೊಲೀಸರು ಯಶಸ್ವಿಯಾಗಿದ್ದಾರೆ.

ಬುಧವಾರ ಬುಲ್‌ಟೆಂಪಲ್ ರಸ್ತೆಯ ಉದಯಭಾನು ಮೈದಾನದ ಬಳಿ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿ ಮನೋಜ್ ಎಂಬುವನನ್ನು ಜಾಕುವಿನಿಂದ ಇರಿದು ಕೊಲೆ ಮಾಡಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರಹಳ್ಳಿಯ ನಿವಾಸಿ ವಿನಯ್ ಅಲಿಯಾಸ್ ಕರಿಯ (18) ಮತ್ತು ಲೋಕೇಶ್ ಅಲಿಯಾಸ್ ಶರತ್‌ (22)ರನ್ನು ಬಂಧಿಸಲಾಗಿದೆ.

ಮನೋಜ್ ಎಂಬವನು ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದು, ಇದೇ ಯುವತಿಯನ್ನು ಆರೋಪಿ ಶರತ್ ಸಹ ಪ್ರೇಮಿಸುತ್ತಿದ್ದ. ಈ ವಿಷಯಕ್ಕಾಗಿ ಇಬ್ಬರ ಮಧ್ಯೆ ಜಗಳ ನಡೆಯುತ್ತಿತ್ತು. ಮನೋಜ್ ಪ್ರೀತಿಸುತ್ತಿದ್ದ ಯುವತಿಯ ತಂಟೆಗೆ ಹೋಗದಂತೆ ಆರೋಪಿಗಳು ಹೆದರಿಸುತ್ತಿದ್ದರು.

ಇದಕ್ಕೆ ಕೇರ್ ಮಾಡದ ಮನೋಜ್‌ನನ್ನು ಹೆದರಿಸಲು ಬುಧವಾರ ಇಬ್ಬರು ಆರೋಪಿಗಳು ಬೈಕ್‌ನಲ್ಲಿ ಬಂದು ಮನೋಜ್‌ಗೆ ಹೆದರಿಸಿದ್ದಾರೆ. ಮಾತಿನ ಚಕಮಕಿ ನಡುವೆ ಆರೋಪಿಗಳು ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಪತ್ತೆಯಾಗಿದ್ದು ಹೀಗೆ? :ಆರೋಪಿಗಳಿಗೆ ಮೊದಲಿನಿಂದಲೂ ಬಾರ್ ಗರ್ಲ್ಸ್‌ಳೊಬ್ಬಳ ಸ್ನೇಹವಿತ್ತು. ಕೊಲೆ ನಡೆದಾಗ ಆರೋಪಿಗಳಿಬ್ಬರು ಜ್ಞಾನಭಾರತಿ ಪೊಲೀಸ್ ಠಾಣೆಯ ಅಂಬೇಡ್ಕರ್ ಕಾಲೋನಿಯಲ್ಲಿ ತಂಗಿದ್ದರು. ಈ ಸಮಯದಲ್ಲಿ ತಮ್ಮ ಸ್ನೇಹಿತೆ ಬಾರ್‌ಗರ್ಲ್ಸ್‌ಗೆ ಎಸ್‌ಎಂಎಸ್ ಮೇಸೆಜ್ ಮಾಡಿ, ತಾವು ಕೇರಳಕ್ಕೆ ಹೋಗುತ್ತಿದ್ದು, 6 ತಿಂಗಳು ಬರುವುದಿಲ್ಲವೆಂದು ಮೊಬೈಲ್‌ನಲ್ಲಿ ಸಂದೇಶ ಕಳಿಸಿದ್ದರು.

ಇದಕ್ಕೆ ಪ್ರತಿಯಾಗಿ ಬಾರ್ ಗರ್ಲ್ಸ್ ಸಹ ಪ್ರತಿಕ್ರಿಯೆ ನೀಡಿದ್ದರೂ ಆರೋಪಿಗಳ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದರು. ತಕ್ಷಣವೇ ಎಚ್ಚೆತ್ತುಕೊಂಡ ಕೆ.ಜಿ.ನಗರ ಪೊಲೀಸ್ ಠಾಣೆ ಪೊಲೀಸರು ಆರೋಪಿಗಳು ಮೈಸೂರು ಮೂಲಕ ಕೇರಳಕ್ಕೆ ತೆರಳುವ ಮುನ್ನ ಬಂಧಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+