ಶೋಭಕ್ಕನ ಬಹುವರ್ಷಗಳ ಹರಕೆ ಸುಸಂಪನ್ನ

ಈ ಬಗ್ಗೆ ಸುದ್ದಿಗಾರರಿಗೆ ಮಾಹಿತಿ ನೀಡಿದ ಮಾಜಿ ಸಚಿವೆ ಶೋಭಾ ಕರಂದ್ಲಾಜೆ, ಸರ್ಕಾರವು ಇನ್ನೂ ಎರಡು ಬಾರಿ ರಾಜ್ಯದಲ್ಲಿ ಅಧಿಕಾರಕ್ಕೆ ಬರಲಿ. ರಾಜ್ಯದ ಜನತೆಗೆ ಒಳ್ಳೆ ರೀತಿಯ ಉತ್ತಮ ಸೌಲಭ್ಯಗಳುಳ್ಳ ಆಡಳಿತ ಸಿಗಲಿ ಎಂದು ಅರಸೀಕೆರೆ ತಾಲೂಕಿನ ಮಾಡಾಳು ಗ್ರಾಮದೇವತೆ ಗೌರಮ್ಮನ ಎದುರು ದುಗ್ಗುಳ ಹೊತ್ತು ಸೇವೆ ಸಲ್ಲಿಸಿ ಹರಕೆ ತೀರಿಸಿದ್ದಾಗಿ ಹೇಳಿದರು.
ಸರ್ಕಾರದಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ. ನಾನು ಮೊದಲು ಸಾಮಾನ್ಯ ಕಾರ್ಯಕರ್ತೆ. ಪಕ್ಷದ ಹಿರಿಯರು ಯಾವುದೇ ಹುದ್ದೆ ನೀಡಿದರೂ ನಿಷ್ಠೆಯಿಂದ ಸಮರ್ಥವಾಗಿ ನಿರ್ವಹಿಸುವುದಷ್ಟೇ ನನ್ನ ಕೆಲಸ ಎಂದು ಹೇಳುವ ಮೂಲಕ ಸಚಿವ ಸ್ಥಾನದ ಆಕಾಂಕ್ಷೆಯ ಬಗ್ಗೆ ಯಾವುದೇ ಸುಳಿವು ನೀಡಲಿಲ್ಲ.
ವಿಧಾನ ಪರಿಷತ್ ಸದಸ್ಯೆ ಭಾರತಿ ಶೆಟ್ಟಿ, ತಾಲೂಕಿನ ಬಿಜೆಪಿ ಉಪಾಧ್ಯಕ್ಷ ನಟರಾಜ್ ಮತ್ತಿತ್ತರ ಸ್ಥಳೀಯ ಮುಖಂಡರು ಹರಕೆ ತೀರಿಸಲು ಬಂದಿದ್ದ ಹಾಸನ ಜಿಲ್ಲೆ ಅರಸೀಕೆರೆ ತಾಲೂಕಿನಿಂದ 30 ಕಿ.ಮೀ ದೂರವಿರುವ ಮಾಡಾಳು ಗೌರಮ್ಮ ನ ಸನ್ನಿಧಿಗೆ ಬಂದಿದ್ದ ಭಕ್ತೆ ಶೋಭಾ ಅವರ ಜೊತೆಗೂಡಿ ಗೌರಮ್ಮ ದೇವಿಯ ಆಶೀರ್ವಾದ ಬೇಡಿದರು.












Click it and Unblock the Notifications