ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದ ಬಿಪಿಒ ಮೇಲೆ ಒಬಾಮಾ ಕೆಂಗಣ್ಣು

By Mahesh
|
Google Oneindia Kannada News

Barack Obama
ವಾಷಿಂಗ್ಟನ್, ಸೆ.10: ಅಮೆರಿಕದ ಓಹಿಯೋ ಪ್ರಾಂತ್ಯ ಭಾರತದ ಹೊರಗುತ್ತಿಗೆ ನಿಷೇಧಿಸಿದ ಬೆನ್ನಲ್ಲೇ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಕೂಡ ಭಾರತದ ಮೇಲೆ ಕೆಂಗಣ್ಣು ಬೀರಿದ್ದಾರೆ. ಅಮೆರಿಕದಲ್ಲಿ ಉದ್ಯೋಗ ಸೃಷ್ಟಿಸುವ ಕಂಪೆನಿಗಳಿಗೆ ಮಾತ್ರ ತೆರಿಗೆ ವಿನಾಯತಿ ನೀಡಲಾಗುವುದೆ ಹೊರತು ವಿದೇಶಗಳಲ್ಲಿ ಕಂಪೆನಿಗಳನ್ನು ಹೊಂದಿ, ಅಲ್ಲಿ ಉದ್ಯೋಗ ನೀಡುವವರಿಗೆ ತೆರಿಗೆ ವಿಯಾಯತಿ ಲಭಿಸದು ಎಂದು ಅಬ್ಬರಿಸಿದ್ದಾರೆ.

ಈ ಹಿಂದೆಯೂ ಬೆಂಗಳೂರಿನಲ್ಲಿ ನೆಲೆಸಿರುವ ಅಮೆರಿಕನ್ ಕಂಪೆನಿಗಳನ್ನು ವಾಪಸ್ ಬರುವಂತೆ ಹಾಗೂ ಅಮೆರಿಕಕ್ಕೆ ಮರಳಿದರೆ ತೆರಿಗೆ ವಿನಾಯತಿ ನೀಡುವ ಆಮಿಷವನ್ನು ಒಬಾಮಾ ಒಡ್ಡಿದ್ದರು. ಆದರೆ ಭಾರತದ ಪ್ರತಿಭೆಗಳ ಮೇಲೆ ಅವಲಂಬಿತವಾಗಿದ್ದ ಅಮೆರಿಕನ್ ಕಂಪೆನಿಗಳು ಒಬಾಮಾ ಕರೆಗೆ ಅಷ್ಟೇನು ಸಕಾರಾತ್ಮಾಕ ಪ್ರತಿಕ್ರಿಯೆ ನೀಡಿರಲಿಲ್ಲ.

ಭಾರತದ ಬಿಪಿಒಗೆ ನಷ್ಟ?: ಆದರೆ ಒಬಾಮಾ ಗುರುವಾರ ಮತ್ತೆ ಅದೇ ರಾಗವನ್ನು ಪುನರುಚ್ಚರಿಸಿದ್ದಾರೆ. ಆದರೆ ಅಮೆರಿಕದ ಈ ಕ್ರಮದಿಂದ ಭಾರತದ ಹೊರಗುತ್ತಿಗೆ ವಹಿವಾಟಿಗೆ ಭಾರೀ ನಷ್ಟವಾಗುವ ಭೀತಿ ಉದ್ಯಮವಲಯದಿಂದ ವ್ಯಕ್ತವಾಗಿದೆ. ತಮ್ಮ ಆಡಳಿತ ಉದ್ಯೋಗ ಸೃಷ್ಟಿಗೆ ಹಾಗೂ ಉದ್ಯಮರಂಗದ ಚೇತರಿಕೆಗೆ ಸಾಕಷ್ಟು ನೇರವು ನೀಡಿದೆ. ಶೇ.60 ರಷ್ಟು ಐಟಿ ವಹಿವಾಟು ಅಮೆರಿಕವನ್ನೆ ಅವಲಂಬಿಸಿರುವ ಭಾರತದ ಐಟಿ ಉದ್ಯಮಕ್ಕೆ ಇದು ಹಿನ್ನಡೆಯಾಗಲಿದೆ.

ಅಮೆರಿಕದಲ್ಲಿ ಹೊಸ ಸಂಶೋಧನೆಗಳು ಹಾಗೂ ಉತ್ಪಾದನೆಗಳು ಪ್ರಾರಂಭಗೊಳ್ಳುವುದನ್ನು ತಾವು ನೋಡಬಯಸುವುದಾಗಿ ಹೇಳಿದ ಒಬಾಮಾ, ಸೋಲಾರ್ ಪ್ಲಾಂಟ್‌ಗಳು, ಎಲೆಕ್ಟ್ರಾನಿಕ್ ಕಾರುಗಳು ಹಾಗೂ ಆಧುನಿಕ ಉಪಕರಣಗಳು ಯುರೋಪ್ ಅಥವಾ ಏಷ್ಯಾ ಖಂಡಗಳಲ್ಲಿ ಮಾತ್ರ ತಯಾರಾಗುತ್ತಿದ್ದು, ಮುಂದಿನ ದಿನಗಳಲ್ಲಿ ಅಮೆರಿಕದಲ್ಲಿ ಸಂಶೋಧನೆಗೆ ಹೆಚ್ಚು ಒತ್ತು ನೀಡಲಾಗುವುದು. ತೆರಿಗೆ ವಿನಾಯತಿ ಬಯಸುವ ಕಂಪೆನಿಗಳು ಸ್ಥಳೀಯರಿಗೆ ಮಾತ್ರ ಉದ್ಯೋಗ ನೀಡಬೇಕು ಎಂದಿದ್ದಾರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X