ಮಾನಗೆಟ್ಟ ಮುಖ್ಯಮಂತ್ರಿ : ದೇವೇಗೌಡ

ಗುಲ್ಬರ್ಗ ದಕ್ಷಿಣ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಅರುಣಾ ಪಾಟೀಲ್ ಪರ ಮಂಗಳವಾರ ಪ್ರಚಾರದಲ್ಲಿ ಪಾಲ್ಗೊಂಡಿದ್ದ ವೇಳೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುತ್ತಿದ್ದರು. ಯಡಿಯೂರಪ್ಪ ಬೆತ್ತಲಾಗುವ ದಿನ ಸನ್ನಿಹಿತವಾಗುತ್ತಿದೆ. ಬಿಜೆಪಿ ಸರಕಾರದಷ್ಟು ಭ್ರಷ್ಟ ಸರಕಾರವನ್ನು ಹಿಂದೆಂದಿಗೂ ಕಂಡಿಲ್ಲ ಎಂದರು. ಸರಕಾರ ಅಧಿಕಾರಕ್ಕೆ ಬಂದ ನಂತರ ಯಾವುದೇ ಜನಪರ ಕಾರ್ಯ ಮಾಡಿಲ್ಲ. ಕೇವಲ ಭ್ರಷ್ಟಾಚಾರದಲ್ಲಿಯೆ ಕಾಲ ಕಳೆಯುತ್ತಿದೆ ಎಂದು ಅವರು ಆರೋಪಿಸಿದರು.
ತಮ್ಮ ಕುಟುಂಬದವರು ಅಕ್ರಮ ಗಣಿಗಾರಿಕೆಯಲ್ಲಿ ಭಾಗಿಯಾಗಿದ್ದರೂ, ಅವನನ್ನು ಬಂಧಿಸಿ ಗಲ್ಲಿಗೇರಿಸಲಿ. ಅದು ಬಿಟ್ಟು ಕೇವಲ ಆರೋಪ ಮಾಡುವುದು ಮುಖ್ಯಮಂತ್ರಿಗೆ ಶೋಭೆ ತರುವುದಿಲ್ಲ. ತಾಕತ್ತಿದ್ದರೆ ಇಂತಹ ಆರೋಪ ಮಾಡುತ್ತಿರುವ ಯಡಿಯೂರಪ್ಪ ಸಿಬಿಐ ತನಿಖೆಗೆ ಸಿದ್ಧರಾಗಲಿ ಎಂದು ಸವಾಲು ಹಾಕಿದರು.
ಅಭಿವೃದ್ದಿ ಕಾರ್ಯದ ಬಗ್ಗೆ ಮಾತನಾಡುವ ಯಡಿಯೂರಪ್ಪ, ಯಾರ ಕಾಲದಲ್ಲಿ ಎಷ್ಟು ಅಭಿವೃದ್ದಿಯಾಗಿದೆ ಎಂಬುದರ ಕುರಿತು ಚರ್ಚೆಗೆ ಬರುವಂತೆ ಆಹ್ವಾನಿಸಿದ ದೇವೇಗೌಡ, ಮುಖ್ಯಮಂತ್ರಿ ಕೇವಲ ಬಡಾಯಿ ಕೊಚ್ಚಿಕೊಳ್ಳುವ ಬದಲು ಬಹಿರಂಗವಾಗಿ ಚರ್ಚೆಗೆ ಬರಲಿ ಎಂದು ಸವಾಲು ಹಾಕಿದರು.












Click it and Unblock the Notifications