ನೀತಿ ಸಂಹಿತೆ : ಸಿಎಂಗೆ ನೋಟಿಸ್ ಜಾರಿ
ಬೆಂಗಳೂರು,
ಸೆ. 5 : ಆದಿ ಬಣಜಿಗ ಜಾತಿಯನ್ನು 2ಎ ಪ್ರವರ್ಗಕ್ಕೆ ಸೇರಿಸುವುದಾಗಿ ಘೋಷಿಸಿದ್ದ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಕೇಂದ್ರ ಚುನಾವಣೆ ಆಯೋಗ ನೋಟಿಸ್ ಜಾರಿಗೆ ಮಾಡಿದೆ. id="toptextpromo">ಕೇಂದ್ರ
ಚುನಾವಣಾ ಆಯೋಗ ನೀಡಿದ ನೋಟಿಸನ್ನು ಶನಿವಾರ ರಾಜ್ಯದ ಮುಖ್ಯಚುನಾವಣಾಧಿಕಾರಿ ಕಚೇರಿಯ ಮೂಲಕ ಜಾರಿ ಮಾಡಲಾಗಿದೆ. ಆದಿ ಬಣಜಿಗ ಜಾತಿಯನ್ನು 2ಎ ವರ್ಗಕ್ಕೆ ಸೇರಿಸುವುದಾಗಿ ಹೇಳುವ ಮೂಲಕ ನೀತಿ ಸಂಹಿತೆ ಉಲ್ಲಂಘನೆಯಾಗಿದೆ. ಈ ಕುರಿತು ಸೋಮವಾರ(ಸೆ.6) ಬೆಳಗ್ಗೆ 11 ಗಂಟೆಯೊಳಗೆ ಉತ್ತಪ ನೀಡಬೇಕು. ಅಷ್ಟರೊಳಗೆ ಉತ್ತರ ಬಾರದ ಹೋದರೆ ನಿಮ್ಮಿಂದ ಯಾವುದೇ ಉತ್ತರವಿಲ್ಲ ಎಂದು ಭಾವಿಸಿ ಮುಂದಿನ ಕ್ರಮಕೈಕೊಳ್ಳಲಾಗುವುದು ಎಂಜು ಆಯೋಗ ಎಚ್ಚರಿಕೆ ನೀಡಿದೆ. id='are-slot-1' class='oiad oi-axt oiadv'> id='top-searched-articles'>ಯಡಿಯೂರಪ್ಪ
ಅವರು ಆ.25ರಂದು ನೀತಿ ಸಂಹಿತೆ ಜಾರಿಗೆ ಬಂದ ನಂತರ ಹುಬ್ಬಳ್ಳಿಯಲ್ಲಿ ಈ ಕುರಿತು ಘೋಷಣೆ ಮಾಡಿದ್ದರು. ಯಾವುದೇ ದೂರು ಬಾರದೇ ಇದ್ದರೂ ಸಹ ಮಾಧ್ಯಮಗಳ ವರದಿಯನ್ನು ಆಧರಿಸಿ ಆಯೋಗ ವರದಿ ಪಡೆದು ನೋಟಸ್ ಜಾರಿ ಮಾಡಿದೆ. ಸೆ. 13 ರಂದು ನಡೆಯಲಿರುವ ಉಪಚುನಾವಣೆಗೆ ನೀತಿ ಸಂಹಿತೆ ಜಾರಿಗೊಳಸಲಾಗಿದೆ.











Click it and Unblock the Notifications