ಎಸ್ಪಿಯನ್ನು ಥಳಿಸಿ ಕೊಲೆ ಮಾಡಲು ಯತ್ನಿಸಿದ ಪೇದೆಗಳು

Uttar Pradesh map
ಬರೇಲಿ(ಉತ್ತರ ಪ್ರದೇಶ), ಸೆ. 3 : ಇಲ್ಲಿನ ಹೆದ್ದಾರಿಯಲ್ಲಿ ಲಾರಿ ಚಾಲಕರಿಂದ ಅಕ್ರಮ ಹಣ ವಸೂಲಿ ಮಾಡುತ್ತಿರುವುದನ್ನು ತಡೆಯಲು ತೆರಳಿದ್ದ ಮಹಿಳಾ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯನ್ನೇ ಅಕ್ರಮದಲ್ಲಿ ತೊಡಗಿದ್ದ ಮೂವರು ಪೇದೆಗಳು ಚೆನ್ನಾಗಿ ಥಳಿಸಿ, ಸಾರ್ವಜನಿಕರೆದುರೆ ಅವರನ್ನು ಎಳೆದಾಡಿ ಕೊಲೆ ಮಾಡಲು ಯತ್ನಿಸಿರುವ ಆಘಾತಕಾರಿ ಘಟನೆ ಬರೇಲಿಯಲ್ಲಿ ಶುಕ್ರವಾರ ನಡೆದಿದೆ.

ಐಪಿಎಸ್ ಅಧಿಕಾರಿ ಕಲ್ಪನಾ ಸೆಕ್ಸೇನಾ ಪೇದೆಗಳಿಂದ ಥಳಿತಕ್ಕೆ ಒಳಗಾದ ಅಧಿಕಾರಿ. ಜಾಟ್‌ ನಲ್ಲಿರುವ ಸೇನಾ ಪಡೆಯ ಕೇಂದ್ರದ ಸಮೀಪದಲ್ಲಿ ಸಂಚಾರಿ ಪೇದೆಗಳು ಲಾರಿ ಚಾಲಕರಿಗೆ ಲಂಚ ನೀಡುವಂತೆ ಒತ್ತಾಯಿಸುತ್ತಿದ್ದಾರೆ ಎಂಬ ಮಾಹಿತಿ ದೊರೆಯುತ್ತಿದ್ದಂತೆಯೇ ಕಲ್ಪನಾ ಸಕ್ಸೇನಾ ಅಲ್ಲಿಗೆ ಭೇಟಿ ನೀಡಿದ್ದರು. ಅವರನ್ನು ರೆಡ್ ಹ್ಯಾಂಡ್ ಹಿಡಿಯಲು ತನ್ನ ಖಾಸಗಿ ಕಾರಿನಲ್ಲಿ ಗನ್ ಮ್ಯಾನ್ ಜೊತೆ ಆ ಪ್ರದೇಶಕ್ಕೆ ಹೋಗಿದ್ದೆ.

ಅಲ್ಲಿಗೆ ನಾನು ಭೇಟಿ ಕೊಟ್ಟಾಗ ಲಾರಿ ಚಾಲಕರಿಂದ ಪೇದೆಗಳು ಲಂಚ ಸ್ವೀಕರಿಸುತ್ತಿದ್ದುದನ್ನು ನೋಡಿದೆ. ನನ್ನನ್ನು ಗಮನಿಸಿದ ಪೇದೆಗಳು ತಕ್ಷಣ ಅಲ್ಲಿಂದ ಪರಾರಿಯಾಗಲು ಯತ್ನಿಸಿದ್ದು, ನನ್ನನ್ನು ಪೊಲೀಸ್ ವಾಹನದಡಿಗೆ ತಳ್ಳಲು ಯತ್ನಿಸಿದರು ಎಂದು 1990ರ ಬ್ಯಾಚಿನ ಐಪಿಎಸ್ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ತಕ್ಷಣ ನಾನು ವಾಹನವನ್ನು ಚಾಲನೆ ಮಾಡುತ್ತಿದ್ದ ಒಬ್ಬನ ಕುತ್ತಿಗೆಯನ್ನು ಹಿಡಿದೆ. ಆತ ನನ್ನನ್ನು ಸಾರ್ವಜನಿಕರೆದುರೇ ಎಳೆದುಕೊಂಡು ಹೋದ. ನಂತರ ನನ್ನನ್ನು ರಸ್ತೆಗೆ ಎಸೆದರು ಎಂದು ಸಕ್ಸೇನಾ ತಿಳಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಓರ್ವ ಪೊಲೀಸ್ ಪೇದೆಯನ್ನು ಬಂಧಿಸಲಾಗಿದೆ. ಇತರ ಇಬ್ಬರ ಬಂಧನಕ್ಕೆ ಶೋಧ ನಡೆಸಲಾಗುತ್ತಿದೆ. ಘಟನೆಯಲ್ಲಿ ಪಾಲ್ಗೊಂಡ ಮೂವರನ್ನು ಅಮಾನತುಗೊಳಿಸಿದ್ದು, ದೂರು ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+