ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತುಂಗಭದ್ರಾ ಕಾಲುವೆಗೆ ಕಾರು ಉರುಳಿ ಐವರ ಸಾವು

By Mahesh
|
Google Oneindia Kannada News

Torangal accident
ಬಳ್ಳಾರಿ, ಸೆ. 3: ಶಿರಡಿಯಿಂದ ಬಳ್ಳಾರಿಗೆ ಹಿಂದಿರುಗುತ್ತಿದ್ದ ಕಾರ್ ಕುರೇಕುಪ್ಪ ಸಮೀಪದ ತುಂಗಭದ್ರಾ ಹೈಲೆವೆಲ್ ಕಾಲುವೆಗೆ ನುಗ್ಗಿದ ಕಾರಣ ಐವರು ಪ್ರಯಾಣಿಕರು ಸ್ಥಳದಲ್ಲೇ ಮೃತಪಟ್ಟು, ಓರ್ವ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಈ ಕಾರಿನ ಚಾಲಕ ನಿಗೂಢವಾಗಿ ನಾಪತ್ತೆ ಆಗಿರುವ ಘಟನೆ ಗುರುವಾರ ನಸುಕಿನಲ್ಲಿ ನಡೆದಿದೆ.

ಮೃತರು ಬಳ್ಳಾರಿ ನಗರದ ತಾಳೂರು ರಸ್ತೆಯ ಶ್ರೀನಗರದ ಗೋವಿಂದಪ್ಪ ಕಲ್ಯಾಣಮಂಟದ ಪಕ್ಕದ ನಿವಾಸಿಗಳಾದ ಹಂಪಮ್ಮ (60), ಮಧುಬಾಲ (25), ಪುಷ್ಪಾವತಿ (28), ತ್ರಿಭುವನ್ (05 ತಿಂಗಳು) ಮತ್ತು ವರುಣ್ (9). ಈ ಘಟನೆಯಲ್ಲಿ ವೃತ್ತಿಯಲ್ಲಿ ಚಾಲಕನಾಗಿದ್ದ ಮಲ್ಲಿಕಾರ್ಜುನ್ (30) ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಆದರೆ, ಚಾಲನಕ ಸುಳಿವು ನಿಗೂಢವಾಗಿದೆ.

ಗುರುವಾರ ನಸುಕಿನ 2.30 ರ ವೇಳೆಗೆ ಕಾರು ಕಾಲುವೆಗೆ ನುಗ್ಗಿದೆ. ಈ ಘಟನೆಯಲ್ಲಿ ಚಾಲಕ ಕೃಷ್ಣ ನಿದ್ರಾವಸ್ಥೆಯಲ್ಲಿ ಇದ್ದಾಗ ಕಾರನ್ನು ಕಾಲುವೆಗೆ ಬಿಟ್ಟು ಪರಾರಿ ಆಗಿದ್ದಾನೆ. ಅಥವಾ ನೀರಿನಲ್ಲಿ ಈಜಿದ್ದಾನೆ. ಅಥವಾ ನೀರಿನಲ್ಲಿ ಕೊಚ್ಚಿಹೋಗಿರಬೇಕು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದು, ಇಡೀ ಘಟನೆಯನ್ನು ತೀವ್ರ ತನಿಖೆಗೆ ಒಳಪಡಿಸಿದ್ದಾರೆ.

ನೀರಿನಲ್ಲಿ ಮುಳುಗಿದ್ದ ಕಾರನ್ನು ಮತ್ತು ಕಾರಿನಲ್ಲಿ ಸಿಲುಕಿದ್ದ ಶವಗಳನ್ನು ಹೊರಕ್ಕೆ ತೆಗೆಯಲು ಜಿಂದಾಲ್ ಈಜು ಸಿಬ್ಬಂದಿ ಸಹಕಾರ ನೀಡಿತು. ಅಲ್ಲದೇ, ಕ್ರೇನ್ ಮೂಲಕ ಕಾರನ್ನು ಹೊರಗಡೆ ತೆಗೆಯುವಲ್ಲಿ ತಾಂತ್ರಿಕ ನೆರವು ನೀಡಿತು. ಘಟನಾ ಸ್ಥಳದಲ್ಲಿ ಜಾತ್ರೆಯಾಗಿ ಜಮಾವಣೆ ಆಗಿದ್ದ ಜನರನ್ನು ನಿಯಂತ್ರಿಲು ಪೊಲೀಸರು ಸಾಕಷ್ಟು ಶ್ರಮಿಸಿದರು.

ಗ್ಯಾಲರಿ: ಕಾಲುವೆಗೆ ಉರುಳಿದ ಕಾರು, ಐವರ ಮರಣ

ಅಪಘಾತದ ಸುತ್ತ ಅನುಮಾನಗಳ ಹುತ್ತ

ಈ ಘಟನೆಯಲ್ಲಿ ಬದುಕುಳಿದಿರುವ ಮಲ್ಲಿಕಾರ್ಜುನ್ ಪೊಲೀಸರಿಗೆ ನೀಡಿದ ಮಾಹಿತಿ, ವಾಹನದ ಚಾಲಕ ಕೃಷ್ಣ ಘಟನೆಯ ನಂತರ ಪರಾರಿ ಆಗಿದ್ದಾನೆ. ಘಟನೆ ನಡೆದಾಗ ಗುರುವಾರ ನಸುಕಿನ 2.30 ಆಗಿರಬೇಕು. ನಾನು ನೀರಲ್ಲಿ ಮುಳುಗಿದ್ದೆ. ಪ್ರಯಾಸದಿಂದ ಪಾರಾಗಿ ಮೇಲಕ್ಕೆ ಬಂದು ಪೊಲೀಸರಿಗೆ ಮಾಹಿತಿ ನೀಡಿದ್ದಾಗಿ ತಿಳಿಸಿದ್ದಾನೆ.

ಆದರೆ, ಮಲ್ಲಿಕಾರ್ಜುನ್ ವೃತ್ತಿಯಲ್ಲಿ ಆಟೋ ಮತ್ತು ಕಾರು ಚಾಲಕ. ಪ್ರವಾಸೋದ್ಯಮ ಇಲಾಖೆ ಇತ್ತೀಚೆಗೆ ನೀಡಿದ ಸಹಾಯಧನ ಯೋಜನೆ ಅಡಿ ಟಾಟಾ ಇಂಡಿಕಾ ಕಾರನನ್ನು ಕಳೆದ ತಿಂಗಳು ಖರೀದಿಸಿದ್ದನು. ಈತನೊಬ್ಬನೇ ಕಾರಿನಿಂದ ಹೊರಬರಲು ಹೇಗೆ ಸಾಧ್ಯವಾಯಿತು? ಎಂದು ಆತನ ಹೆಂಡತಿ ಮಧುಬಾಲಾ ಸಂಬಂಧಿಕರು ಪೊಲೀಸರನ್ನು ಪ್ರಶ್ನಿಸಿ ಆಕ್ರೋಶ ವ್ಯಕ್ತಪಡಿಸಿದರು.

ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಮಸ್ಕಿ ಗ್ರಾಮದ ಮಧುಬಾಲ ಅವರನ್ನು ಮಲ್ಲಿಕಾರ್ಜುನ ಅವರು ವಿವಾಹವಾಗಿದ್ದರು. ಈತನು ಸ್ಯಾಡಿಸ್ಟ್ ಆಗಿದ್ದು ಈ ಘಟನೆಯ ಹಿಂದೆ ಕೌಟುಂಬಿಕ ಕಲಹ, ವೈಷಮ್ಯಗಳೂ ಇವೆ. ಇದು ಪೂರ್ವನಿಯೋಜಿತ ಕೃತ್ಯ. ಪೊಲೀಸರು ಆರೋಪಿಯನ್ನು ಬಂಧಿಸಿ, ತೀವ್ರ ವಿಚಾರಣೆಗೆ ಒಳಪಡಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಈ ನಿಟ್ಟಿನಲ್ಲಿ ಮಲ್ಲಿಕಾರ್ಜುನ ಕೂಡ ವಿಭಿನ್ನ ಹೇಳಿಕೆಗಳನ್ನು ನೀಡುತ್ತಿದ್ದು, ಪೊಲೀಸರು ಕೂಡ ಶಂಕೆ ವ್ಯಕ್ತಪಡಿಸುತ್ತಿದ್ದಾರೆ. ಅಲ್ಲದೇ, ಚಾಲಕ ಕೃಷ್ಣ ವಾಹನದಲ್ಲಿ ಇರಲೇ ಇಲ್ಲ. ಚಾಲಕ ಈ ವಾಹನದಲ್ಲಿ ಇದ್ದರೂ ಕೂಡ ಪರಾರಿ ಆಗಲು ಸಾಧ್ಯವಿಲ್ಲ. ಇನ್ನು ಮಲ್ಲಿಕಾರ್ಜುನ ನೀರಿಗೆ ಇಳಿದಿದ್ದಲ್ಲಿ ಆತನ ಮೊಬೈಲ್ ಹೇಗೆ ಕೆಲಸ ಮಾಡಿತು ಎಂದು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ತೋರಣಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತನಿಖೆ ನಡೆದಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X