ಬೆಂಗಳೂರಿನಲ್ಲಿ ಎಚ್1ಎನ್1ಗೆ ಗರ್ಭಿಣಿ ಸ್ತ್ರೀ ಬಲಿ

ಕೃತಿಕಾ ಕುಟುಂಬ ಮೂಲಗಳ ಪ್ರಕಾರ, ಮೂರು ದಿನಗಳ ಹಿಂದೆ ಆಕೆಯನ್ನು ಚಿಕಿತ್ಸೆಗಾಗಿ ಶೇಷಾದ್ರಿಪುರಂನ ಪೋರ್ಟಿಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು ಎಂದು ಹೇಳಿದ್ದಾರೆ. ಆದರೆ ಉಳಿದ ವಿವರಗಳನ್ನು ನೀಡಲು ಆಕೆಯ ಮನೆಯವರು ನಿರಾಕರಿಸಿದ್ದಾರೆ.
ಪೋರ್ಟಿಸ್ ಆಸ್ಪತ್ರೆ ವೈದ್ಯರಾದ ನಜರೆತ್ ಅವರು ಮಾತನಾಡುತ್ತಾ, ಕೃತಿಕಾ ಏಳು ತಿಂಗಳ ಗರ್ಭಿಣಿಯಾಗಿದ್ದರು. ಉಸಿರಾಟ ತೊಂದರೆಯಿಂದ ಬಳಲುತ್ತಿದ್ದ ಅವರು ಎರಡು ದಿನಗಳ ಹಿಂದಷ್ಟೆ ಆಸ್ಪತ್ರೆಗೆ ದಾಖಲಾಗಿದ್ದರು. ನೆಗಡಿ, ಕೆಮ್ಮು ಮತ್ತು ಜ್ವರ ಸಹ ತೀವ್ರವಾಗಿತ್ತು.
ಎಚ್1ಎನ್1 ಇರಬಹುದು ಎಂದು ಶಂಕಿಸಿ ನಾವು ಆಕೆಯನ್ನು ತೀವ್ರ ನಿಗಾ ಘಟಕ್ಕೆ ಸ್ಥಳಾಂತರಿಸಿದೆವು. ಆಕೆ ಗರ್ಭಿಣಿಯಾದ ಕಾರಣ ಬಹಳಷ್ಟು ಕಾಳಜಿ ವಹಿಸಿದ್ದೆವು. ರೋಗ ನಿರ್ಧರಕ್ಕಾಗಿ ಆಕೆಯ ರಕ್ತವನ್ನು ಪರೀಕ್ಷೆಗೆ ಕಳುಹಿಸಿದ್ದೆವು. ಆಕೆಯ ಆರೋಗ್ಯದಲ್ಲಿ ಸುಧಾರಣೆ ಕಂಡುಬರಲಿಲ್ಲ. ಶುಕ್ರವಾರ ಮುಂಜಾನೆ ಆಕೆ ಮತ್ತು ಮಗು ಇಬ್ಬರೂ ಸಾವಪ್ಪಿದ್ದಾರೆ ಎಂದು ವೈದ್ಯರು ಆಂಗ್ಲ ದೈನಿಕ ದಿ ಹಿಂದು ಪತ್ರಿಕೆಗೆ ತಿಳಿಸಿದ್ದಾರೆ.












Click it and Unblock the Notifications