ತರೂರ್ ಹನಿಮೂನ್ ಗೆ ತಾಂತ್ರಿಕ ತೊಂದರೆ

ಕೇರಳದಿಂದ ದುಬೈಗೆ ಹೊರಟಿದ್ದ ವಿಮಾನದಲ್ಲಿ ಪ್ರಮುಖ ತೊಂದರೆಯಿರುವುದು ಕಂಡು ಬಂದ ಕಾರಣ, ತುರ್ತು ಭೂ ಸ್ಪರ್ಶಕ್ಕೆ ಆದೇಶ ನೀಡಲಾಯಿತು ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ಹೇಳಿದ್ದಾರೆ.
ಇಂದು ಸಂಜೆ 5ಗಂಟೆಗೆ ಮೇಲಕ್ಕೆ ಹಾರಿದ ವಿಮಾನ ಇದ್ದಕ್ಕಿದ್ದಂತೆ ಕೆಳಗಿಳಿಯ ತೊಡಗಿದಾಗ ಪ್ರಯಾಣಿಕರು ಸಹಜವಾಗೇ ಆತಂಕಗೊಂಡರು. ವಿಮಾನವನ್ನು ಸಂಪೂರ್ಣವಾಗಿ ಪರಿಶೀಲಿಸಲಾಗಿದ್ದು, ತಾಂತ್ರಿಕ ದೋಷ ನಿವಾರಣೆ ಕಾರ್ಯ ಸಾಗಿದೆ ಎಂದು ತಿಳಿದುಬಂದಿದೆ.
ದುಬೈನಲ್ಲಿ ಮದುವೆ ರಿಷೆಪ್ಷನ್ ಮುಗಿಸಿಕೊಂಡು, ಸ್ಪೇನ್ ನಲ್ಲಿ ಹನಿಮೂನ್ ಆಚರಿಸಲು ತರೂರ್ ಹಾಗು ಸುನಂದಾ ಸಿದ್ಧರಾಗಿದ್ದರೆ. ಆ.22 ರಂದು ಸಾಂಪ್ರಾದಾಯಿಕ ಕೇರಳ ಶೈಲಿಯಲ್ಲಿ ಸುನಂದಾರನ್ನು ಶಶಿ ವರಿಸಿ, ಓಣಂ ಹಬ್ಬವನ್ನು ಆಚರಿಸಿದ್ದರು.












Click it and Unblock the Notifications