ಐಟಿಪಿಎಲ್ ನಲ್ಲಿ ಟಿಸಿಎಸ್ ಟೆಕ್ಕಿಯ ಆತ್ಮಹತ್ಯೆ

TCS techie commits suicide
ಬೆಂಗಳೂರು, ಆ. 21 : ಟಾಟಾ ಕನ್ಸಲ್ಟನ್ಸಿ ಸರ್ವೀಸಸ್ ಕಂಪನಿಯಲ್ಲಿ ಟ್ರೇನಿಯಾಗಿ ಕೆಲಸ ಮಾಡುತ್ತಿದ್ದ 22ರ ಹರೆಯದ ಯುವ ಸಾಫ್ಟ್ ವೇರ್ ಇಂಜಿನಿಯರ್ ವೈಟ್ ಫೀಲ್ಡ್ ನಲ್ಲಿರುವ ಐಟಿಪಿಎಲ್ ಕಟ್ಟಡದ 11ನೇ ಮಹಡಿಯಿಂದ ಹಾರಿ ಶುಕ್ರವಾರ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಆತ್ಮಹತ್ಯೆ ಮಾಡಿಕೊಂಡಿರುವ ಟೆಕ್ಕಿಯನ್ನು ಬೆಳಗಾವಿಯ ಸುದರ್ಶನ್ ಗುತ್ತೇದಾರ್ ಎಂದು ಗುರುತಿಸಲಾಗಿದೆ. ಆತ ಇತ್ತೀಚೆಗೆ ತಾನೆ ಟಿಸಿಎಸ್ ಸೇರಿಕೊಂಡಿದ್ದ. ಪ್ರಾಣ ಕಳೆದುಕೊಂಡಿರುವ ಹಿಂದಿನ ಕಾರಣವೇನೆಂದು ಇನ್ನೂ ತಿಳಿದುಬಂದಿಲ್ಲ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ನಡೆಸುತ್ತಿದ್ದಾರೆ.

ವರಮಹಾಲಕ್ಷ್ಮಿ ಹಬ್ಬದ ದಿನ ಕಚೇರಿಯಲ್ಲಿ ಎಲ್ಲರೂ ಕಂಪ್ಯೂಟರ್ ಲಾಗಾಫ್ ಮಾಡಿ ಮನೆಗೆ ತೆರಳುವ ಸಮಯದಲ್ಲಿ 11ನೇ ಮಹಡಿಯ ಕಿಟಕಿಯಿಂದ ಸುದರ್ಶನ್ ಹಾರಿಕೊಂಡಿದ್ದಾನೆ. ಆತ ಇನ್ನೂ ತರಬೇತಿಯಲ್ಲಿದ್ದರಿಂದ ಮಾನವ ಸಂಪನ್ಮೂಲ ಇಲಾಖೆಗೆ ಆತನ ಬಗ್ಗೆ ಹೆಚ್ಚಿನ ವಿವರ ತಿಳಿದಿರಲಿಲ್ಲ.

ಪೊಲೀಸರ ಪ್ರಕಾರ, ಸುದರ್ಶನ್ ಬೆಳಗಾವಿಯಲ್ಲಿ ಇಂಜಿನಿಯರಿಂಗ್ ಮುಗಿಸಿ ಬೆಂಗಳೂರಿನಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದ. ಆತನ ತಂದೆ ಬೆಳಗಾವಿಯಲ್ಲಿ ವೈದ್ಯರಾಗಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+