ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿದ್ಯೆ, ಉದ್ಯೋಗಾರ್ಥಿಗಳಿಗೆ ಬೆಂಗ್ಳೂರ್ ಬೆಸ್ಟ್

By Mahesh
|
Google Oneindia Kannada News

Delhi, Bangalore best places to study: Survey
ಬೆಂಗಳೂರು, ಆ.21: ಮಕ್ಕಳ ವಿದ್ಯಾರ್ಥಿಗಳಿಗೆ ಹಾಗೂ ಉದ್ಯೋಗ ಅರಸುವವರಿಗೆ ಬೆಂಗಳೂರು ಹಾಗೂ ನವದೆಹಲಿ ಸೂಕ್ತ ತಾಣ ಎಂದು ಮಿಂಗಲ್ ಬಾಕ್ಸ್ ಸಮೀಕ್ಷೆ ಹೇಳಿದೆ.

ಕಲೆ, ವಿಜ್ಞಾನ,ವೈದ್ಯಕೀಯ, ಇಂಜಿನಿಯರಿಂಗ್ ಹಾಗೂ ಎಂಬಿಎ ಹೀಗೆ ಯಾವುದೇ ವಿಷಯವಾದರೂ ಉತ್ತಮ ಸೌಲಭ್ಯ ಒದಗಿಸಬಲ್ಲ ನಗರಗಳಲ್ಲಿ ಬೆಂಗಳೂರು ಹಾಗೂ ನವ ದೆಹಲಿ ಮುಂದಿವೆ. ಎರಡನೇ ಸಾಲಿನಲ್ಲಿ ಚೆನ್ನೈ ಹಾಗೂ ಪುಣೆ ನಿಲ್ಲುತ್ತವೆ.

18 ರಿಂದ 25 ವರ್ಷದೊಳಗಿನ ಸುಮಾರು 2190 ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಸಮೀಕ್ಷೆಗೆ ಬಳಸಿಕೊಂಡು, ಯಾವ ಸ್ಥಳ ಉತ್ತಮ ಎಂದು ಕೇಳಲಾಯಿತು. ಸಣ್ಣ ನಗರಗಳಲ್ಲಿನ ಶೇ. 40ಕ್ಕೂ ಹೆಚ್ಚು ಮಂದಿ ಉತ್ತಮ ವಿದ್ಯಾಭ್ಯಾಸಕ್ಕಾಗಿ ದೂರಾದ ಸಿಟಿಗಳಿಗೆ ತೆರಳಲು ತುದಿಗಾಲಲ್ಲಿ ನಿಂತಿರುವುದಾಗಿ ತಿಳಿಸಿದ್ದಾರೆ.

ಸಮೀಕ್ಷೆಯ ಸಂಕ್ಷಿಪ್ತ ವಿವರ ಹೀಗಿದೆ:
ಕಲೆಗೆ ದೆಹಲಿ ಉತ್ತಮ: ಶೇ. 35 ರಷ್ಟು ಮತಗಳು ದೆಹಲಿ ಪಾಲಾಗಿವೆ. ಕಲೆಯಲ್ಲಿ ಪದವಿ ಗಳಿಸಲು ದೆಹಲಿ ಬಿಟ್ಟರೆ ಶೇ. 16 ಮತ ಗಳಿಸಿರುವ ಮುಂಬೈ ಸೂಕ್ತ ಎನ್ನಲಾಗಿದೆ. ಆದರೆ, ಚೆನ್ನೈ ಹಾಗೂ ಬೆಂಗಳೂರು ಕಲಾ ಶಾಲೆಗೆ ಬೆಲೆ ಇಲ್ಲದ್ದಂತಾಗಿದ್ದು ಶೇ. 9 ರಷ್ಟು ಮಾತ್ರ ಓಟು ಗಳಿಸಿದೆ.

ಬೆಂಗಳೂರು ವಿಜ್ಞಾನ ಅರ್ಜನೆಗೆ ಉತ್ತಮ : ಶೇ. 20 ರಷ್ಟು ವಿದ್ಯಾರ್ಥಿಗಳ ಮೆಚ್ಚಿನ ತಾಣ. ನಂತರದ ಸ್ಥಾನದಲ್ಲಿ ದೆಹಲಿ ಹಾಗೂ ಶೇ. 13 ರಷ್ಟು ಮತ ಪಡೆದ ಚೆನ್ನೈ ಬರುತ್ತವೆ.

ವಾಣಿಜ್ಯ ವಿಷಯಕ್ಕೂ ದೆಹಲಿ ಉತ್ತಮ: ಶೇ. 31 ರಷ್ಟು ವಿದ್ಯಾರ್ಥಿಗಳು ದೆಹಲಿ ಪರ ನಿಂತಿದ್ದಾರೆ. ಶೇ. 20 ಮತದೊಂದಿಗೆ ಮುಂಬೈ ನಂತರ ಶೇ. 13 ಓಟ್ ಪಡೆದು ಬೆಂಗಳೂರು ಕಾಣಸಿಗುತ್ತದೆ.

ಮೆಡಿಸನ್ ಗೆ ದೆಹಲಿ ಬೆಸ್ಟ್ : ಶೇ.30 ರಷ್ಟು ಮತದೊಂದಿಗೆ ದೆಹಲಿ ಅಗ್ರಸ್ಥಾನ ಪಡೆದರೆ, ಶೇ. 15 ರೊಂದಿಗೆ ಬೆಂಗಳೂರು, ಶೇ. 14 ರೊಂದಿಗೆ ಚೆನ್ನೈ ನಂತರ ಮುಂಬೈ ಮೆಚ್ಚಿನ ತಾಣಗಳಾಗಿವೆ.

ಇಂಜಿನಿಯರಿಂಗ್, ಉನ್ನತ ತಂತ್ರಜ್ಞಾನ ಬೆಂಗಳೂರು ಪಾಲು: ವಿಜ್ಞಾನ ವಿಷಯದ ಪದವಿ, ಸ್ನಾತಕೋತ್ತರ ಪದವಿ, ಸಂಶೋಧನೆ ಹಾಗೂ ಅಭಿವೃದ್ಧಿಗೆ ,ಸಾಫ್ಟ್ ವೇರ್ ಅಭಿವೃದ್ಧಿ ವಿಷಯದಲ್ಲಿ ಅಧ್ಯಯನ ನಡೆಸಲು ಬೆಂಗಳೂರು ಉತ್ತಮವಾಗಿದೆ. ಶೇ. 29 ಮತ ಐಟಿ ರಾಜಧಾನಿಗೆ ಸಿಕ್ಕಿದೆ. ಶೇ. 16 ಮತದೊಂದಿಗೆ ದೆಹಲಿ ಎರಡನೇ ಸ್ಥಾನ ಹಾಗೂ ಶೇ. 15 ರೊಂದಿಗೆ ಚೆನ್ನೈ ನಂತರದ ಸ್ಥಾನದಲ್ಲಿದೆ.

ಎಂಬಿಎ ಮಾಡಲು ಬೆಂಗಳೂರೇ ಬೇಕು: ಬಿಸಿನೆಸ್ ಸ್ಕೂಲ್ ಸೇರಲು ಎಂಬಿಎ ಮಾಡಲು ಬೆಂಗಳೂರು ಉತ್ತಮ ಸ್ಥಳ ಎಂದು ಶೇ. 18 ರಷ್ಟು ವಿದ್ಯಾರ್ಥಿಗಳು ಹೇಳಿದ್ದರೆ, ದೆಹಲಿ ಹಾಗೂ ಮುಂಬೈ ನಂತರದ ಸ್ಥಾನದಲ್ಲಿವೆ. ಶೇ. 16 ರಷ್ಟು ಮತ ಪಡೆದು ಪುಣೆ ಕೂಡಾ ಪಟ್ಟಿಯಲ್ಲಿ ಸ್ಥಾನ ಪಡೆದಿದೆ.

ಸ್ವಂತ ಊರಲ್ಲೇ ಓದ ಬಯಸುವವರ ಸಂಖ್ಯೆ ಶೇ. 30 ಇದ್ದರೆ, ಪರವೂರಿನಲ್ಲಿರಲು ಶೇ. 49 ರಷ್ಟೂ ವಿದ್ಯಾರ್ಥಿಗಳು ಬಯಸಿದ್ದಾರೆ.

ಎಂಬಿಎ ಮಾಡಲು ಬೆಂಗಳೂರೇ ಬೇಕು:
ಬಿಸಿನೆಸ್ ಸ್ಕೂಲ್ ಸೇರಲು ಎಂಬಿಎ ಮಾಡಲು ಬೆಂಗಳೂರು ಉತ್ತಮ ಸ್ಥಳ ಎಂದು ಶೇ. 18 ರಷ್ಟು ವಿದ್ಯಾರ್ಥಿಗಳು ಹೇಳಿದ್ದರೆ, ದೆಹಲಿ ಹಾಗೂ ಮುಂಬೈ ನಂತರದ ಸ್ಥಾನದಲ್ಲಿವೆ. ಶೇ. 16 ರಷ್ಟು ಮತ ಪಡೆದು ಪುಣೆ ಕೂಡಾ ಪಟ್ಟಿಯಲ್ಲಿ ಸ್ಥಾನ ಪಡೆದಿದೆ.

ವಿದ್ಯಾರ್ಥಿಗಳ ವಲಸೆಗೆ ಕಾರಣ ಏನು ಎಂಬುದು ಈ ಸಮೀಕ್ಷೆಯಿಂದ ತಿಳಿದು ಬರುತ್ತದೆ. ಸೂಕ್ತ ಸ್ಥಳದಲ್ಲಿ ವಿದ್ಯಾಭ್ಯಾಸಕ್ಕೆ ಅವಕಾಶ ಕಲ್ಪಿಸಿದರೆ ಭವಿಷ್ಯ ಉಜ್ವಲವಗುವುದರಲ್ಲಿ ಸಂದೇಹವಿಲ್ಲ ಎನ್ನುತ್ತಾರೆ ಮಿಂಗಲ್ ಬಾಕ್ಸ್ ನ ಸಿಇಒ ಹಾಗೂ ಸಹ ಸ್ಥಾಪಕಿ ಕವಿತಾ ಅಯ್ಯರ್.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X