ಟಿಟಿಡಿ ಆಡಳಿತ ಮಂಡಳಿ ವಿಸರ್ಜನೆ ಸನ್ನಿಹಿತ
ಹೈದರಾಬಾದ್,
ಆ.20 : ಪ್ರತಿಪಕ್ಷಗಳು ತೀವ್ರ ಒತ್ತಡ ಹೇರುತ್ತಿರುವ ಹಿನ್ನೆಲೆಯಲ್ಲಿ ಭ್ರಷ್ಟಾಚಾರದಲ್ಲಿ ಮುಳುಗಿ ತಾಂಡವಾಡುತ್ತಿರುವ ತಿರುಮಲ ತಿರುಪತಿ ದೇವಸ್ಥಾನಂನ ಧರ್ಮದರ್ಶಿ ಮಂಡಳಿಯನ್ನು ವಿಸರ್ಜಿಸಿ ನೂತನ ಪ್ರಾಧಿಕಾರವನ್ನು ರಚಿಸುವತ್ತ ಆಂಧ್ರಪ್ರದೇಶ ಸರಕಾರ ತೀವ್ರ ಆಲೋಚನೆ ನಡೆಸಿದೆ. ಮಾಜಿ ಸಂಸದ ಡಿ ಕೆ ಆದಿಕಕೇಶವಲು ನೇತೃತ್ವದ ಟಿಟಿಡಿ ಮಂಡಳಿಯ ಅಧಿಕಾರದ ಅವಧಿ ಆಗಸ್ಟ್24 ಕ್ಕೆ ಕೊನೆಗೊಳ್ಳಲಿದೆ. id="toptextpromo">ಗುರುವಾರ
(ಆ.19) ಮುಖ್ಯಮಂತ್ರಿ ರೋಸಯ್ಯ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಮಂಡಳಿಯ ಸ್ಥಾನದಲ್ಲಿ ನಿರ್ಧಿಷ್ಟ ಪ್ರಾಧಿಕಾರವನ್ನು ಸ್ಥಾಪಿಸುವ ಸಂಬಂಧ ಕಾರ್ಯಸೂಚಿ ಸಿದ್ಧಗೊಳಿಸಲಾಗಿದ್ದು ಶೀಘ್ರದಲ್ಲಿ ಅಧಿಕೃತ ಪ್ರಕಟಣೆ ಹೊರಬೀಳಲಿದೆ ಎಂದು ಆಂಧ್ರ ವಾರ್ತಾ ಸಚಿವೆ ಗೀತಾ ರೆಡ್ಡಿ ಹೇಳಿಕೆ ನೀಡಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಟಿಟಿಡಿ
ಆಡಳಿತ ಮಂಡಳಿಯ ಸದಸ್ಯರು ಮತ್ತು ಸಿಬ್ಬಂದಿಗಳು ದೇವಾಲಯದ ಸೇವಾ ಟಿಕೆಟ್ ಗಳ ಕಾಳಸಂತೆ ಮಾರಾಟದಲ್ಲಿ ಶಾಮೀಲಾಗಿದ್ದಾರೆಂದು ಮಾಧ್ಯಮಗಳಲ್ಲಿ ವರದಿಯಾಗಿತ್ತು. ರಾಜ್ಯ ಸರಕಾರ ವಿಚಕ್ಷಣ ಇಲಾಖೆಯ ವರದಿಯನ್ನು ಬಹಿರಂಗಗೊಳಿಸಬೇಕು. ಆಡಳಿತ ಮಂಡಳಿಯನ್ನು ವಿಸರ್ಜಿಸಿ ಧಾರ್ಮಿಕ ಆಚರಣೆಗಳ ಸ್ಪಷ್ಟ ಜ್ಞಾನವಿರುವ ರಾಜಕೀಯೇತರ ವ್ಯಕ್ತಿಗಳನ್ನು ಮಂಡಳಿಗೆ ನೇಮಿಸಬೇಕೆಂದು ಹಿರಿಯ ಬಿಜಿಪಿ ನಾಯಕ ಬಂಡಾರು ದತ್ತಾತ್ರೇಯ ಸರಕಾರವನ್ನು ಒತ್ತಾಯಿಸಿದ್ದಾರೆ.











Click it and Unblock the Notifications