ನಿರಾಶ್ರಿತರ ತಾಣವಾದ ತ್ರೀ ಈಡಿಯೆಟ್ಸ್ ಶಾಲೆ

ಇತ್ತೀಚೆಗೆ ಇಲ್ಲಿಗೆ ಭೇಟಿಕೊಟ್ಟಿದ್ದ ನಟ ಅಮೀರ್ ಖಾನ್, ಪ್ರಧಾನ ಮಂತ್ರಿಗಳ ಪರಿಹಾರ ನಿಧಿಗೆ ಒಂದಿಷ್ಟು ಹಣ ನೀಡುವ ಭರವಸೆಯನ್ನು ನೀಡಿದರು. ಅಲ್ಲದೆ, ಈ ಶಾಲೆಯ ಪುನರ್ ನಿರ್ಮಾಣ ಕಾರ್ಯಕ್ಕೂ ಸಹಾಯ ನೀಡುವುದಾಗಿ ಹೇಳಿದರು.
ಸದ್ಯ ಈ ಶಾಲೆಯನ್ನು ದ್ರುಕ್ಪಾ ಬೌದ್ಧ ಸಂಘಟನೆಯೊಂದು ನಡೆಸಿಕೊಂಡು ಹೋಗುತ್ತಿದೆ. ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪದವೀಧರರಾಗುವವರೆಗೂ ಸಹಾಯ ನೀಡುವ ಈ ಶಾಲೆ ಯಾವುದೇ ನಿರೀಕ್ಷೆ ಇಲ್ಲದೆ ಅವರಿಗೆ ಸಹಾಯ ಮಾಡುತ್ತಿದೆ.
ಇತರೆ ಕಟ್ಟಡಗಳಂತೆ ಈ ಶಾಲೆಯ ಕಟ್ಟಡ ಕೂಡ ಪ್ರವಾಹದಲ್ಲಿ ಹಾನಿಗೀಡಾಗಿದ್ದು, ಇದನ್ನು ಮರು ನಿರ್ಮಿಸುವ ಕಾರ್ಯ ಆರಂಭಗೊಂಡಿದೆ. ಪ್ರವಾಹದಲ್ಲಿ ಶಾಲಾ ಕಟ್ಟಡದ ಬಾಗಿಲು, ಕಿಟಕಿಗಳು ಜಖಂಗೊಂಡಿದ್ದರೂ, ಕಟ್ಟಡ ಮಾತ್ರ ಹಾಗೆಯೇ ಉಳಿದಿದೆ.
ಈಹಿಂದೆ ಉತ್ತಮ ಹಸಿರು ಪರಿಸರ, ಉತ್ತಮ ಕಟ್ಟಡ, ಪರಿಸರ ಸ್ನೇಹಿ ಎಂಬ ಹಲವು ವಿಭಾಗಗಳಲ್ಲಿ ಪ್ರಶಸ್ತಿ ಪಡೆದಿದ್ದ ಈ ಶಾಲೆ ಇಡೀ ಲೇಹ್‌ನಲ್ಲೇ ಪ್ರಸಿದ್ಧಶಾಲೆಯಾಗಿದೆ. ಸದ್ಯ 700 ವಿದ್ಯಾರ್ಥಿಗಳೂ ಈ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ.
ಈ ಪೈಕಿ 175 ಜನ ವಿದ್ಯಾರ್ಥಿಗಳು ಹಾಸ್ಟೆಲ್ ನಲ್ಲಿದ್ದುಕೊಂಡು ವಿದ್ಯಾಭ್ಯಾಸ ಮುಂದುವರೆಸಿದ್ದಾರೆ. ಹೀಗಾಗಿ ಮತ್ತೊಮ್ಮೆ ಪ್ರವಾಹದಂತಹ ಪ್ರಾಕೃತಿಕ ವಿಕೋಪಗಳು ಸಂಭವಿಸದಂತೆ ತಡೆಯಲು ಕಟ್ಟಡದ ವಿನ್ಯಾಸವನ್ನು ಬದಲಾಯಿಸುತ್ತಿರುವುದಾಗಿ ಶಾಲೆಯ ಆಡಳಿತ ಮಂಡಳಿ ತಿಳಿಸಿದೆ.
ಮೇಘಸ್ಫೋಟದಿಂದಾಗಿ ಸಂಭವಿಸಿದ ಪ್ರವಾಹದಲ್ಲಿ 10 ಸಾವಿರ ಮನೆಗಳು ಈ ಪ್ರದೇಶವೊಂದರಲ್ಲೇ ಹಾನಿಗೀಡಾಗಿದ್ದರೆ 200 ಜನರು ಸಾವನ್ನಪ್ಪಿದ್ದರು.











Click it and Unblock the Notifications