ಭಿಕ್ಷುಕರ ಕಾಲೋನಿಯಲ್ಲಿ ಮರಣ ಮೃದಂಗ
ಬೆಂಗಳೂರು,
ಆ. 19 : ಮಾಗಡಿ ರಸ್ತೆಯಲ್ಲಿರುವ ಸಮಾಜ ಕಲ್ಯಾಣ ಇಲಾಖೆಗೆ ಸೇರಿದ ಭಿಕ್ಷುಕರ ಮರುವಸತಿ ಕೇಂದ್ರದಲ್ಲಿ ಇದ್ದಕ್ಕಿದ್ದಂತೆ 12 ಮಂದಿ ಮೃತಪಟ್ಟಿದ್ದು, 15 ಕ್ಕೂ ಹೆಚ್ಚು ಮಂದಿ ಅನಾರೋಗ್ಯದಿಂದ ಅಸ್ವಸ್ಥರಾಗಿ ಆಸ್ಪತ್ರೆಗೆ ಸೇರಿದ್ದಾರೆ. id="toptextpromo">ಸಾವಿನ
ಸರಣಿ ಮಂಗಳವಾರ ರಾತ್ರಿಯಿಂದಲೇ ಆರಂಭವಾಗಿದೆಯಾದರೂ ಬೆಳಕಿಗೆ ಬಂದಿದ್ದು ಬುಧವಾರ ಸಂಜೆ. ಮಂಗಳವಾರ 11 ಮಂದಿ ಮೃತರಾಗಿದ್ದರೆ, ಬುಧವಾರ ಸಂಜೆ ಒಬ್ಬರು ಸಾವಿಗೀಡಾಗಿದ್ದಾರೆ. ಸಾಂಕ್ರಾಮಿಕ ರೋಗದಿಂದ ಅಸ್ವಸ್ಥರಾಗಿರುವ 15 ಮಂದಿಯನ್ನು ಇಂದಿರಾನಗರದ ಸಾಂಕ್ರಾಮಿಕ ರೋಗಗಳ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಕೆಲವರಿಗೆ ಸ್ಥಳದಲ್ಲೇ ಪ್ರಥಮ ಚಿಕಿತ್ಸೆ ಕೊಡಿಸಲಾಗಿದೆ. id='are-slot-1' class='oiad oi-axt oiadv'> id='top-searched-articles'>ಜಗದೀಶ್(30),
ರಾಜಾ ವೇಲು(65), ಮುನಿಯಪ್ಪ(70), ಗಿರಿಧರ್(50), ರಾಜೇಂದ್ರ(70), ಮೂಗ(60), ಗೋಪಿ(55), ಬಾಲಕೃಷ್ಣ(65), ಜಯಮ್ಮ(65), ಮೂಗಿ(45), ನಿಂಗಮ್ಮ(65), ರಾಮಕೃಷ್ಣ(65) ಮತ್ತು ರಾಮಕೃಷ್ಣಯ್ಯ (65) ಸಾವಿಗೀಡಾದ ಭಿಕ್ಷುಕರಾಗಿದ್ದಾರೆ.











Click it and Unblock the Notifications