ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೈಬರ್ ಸಮರಕ್ಕೆ ಮಲ್ಯರ ವೆಬ್ ತಾಣ ಕುರಿ

By Mahesh
|
Google Oneindia Kannada News

Vijay Mallya
ಬೆಂಗಳೂರು, ಆ.16: ತಮ್ಮ ಖಾಸಗಿ ವೆಬ್‌ಸೈಟ್ ಗೆ ಪಾಕಿಸ್ತಾನದ ಹ್ಯಾಕರ್ಸ್‌ಗಳು ಅತಿಕ್ರಮ ಪ್ರವೇಶದಿಂದ ಆತಂಕಕ್ಕೊಳಗಾಗಿದ್ದ ರಾಜ್ಯಸಭಾ ಸದಸ್ಯ, ಉದ್ಯಮಿ ವಿಜಯ್ ಮಲ್ಯ ಈಗ ನಿರಾಳವಾಗಿ ಉಸಿರಾಡಿದ್ದಾರೆ. ಮಲ್ಯರ ಖಾಸಗಿ ವೆಬ್ ತಾಣ ಈಗ ಸಾರ್ವಜನಿಕ ವೀಕ್ಷಣೆಗೆ ಲಭ್ಯವಾಗಿದೆ.

ಮಲ್ಯ ಅವರ ವೆಬ್‌ಸೈಟ್‌ನಲ್ಲಿ ಪಾಕಿಸ್ತಾನದ ಬಾವುಟ ಕಂಡು ಬರುತ್ತಿದ್ದು, ಹ್ಯಾಕ್ ಮಾಡಲಾಗಿದೆ ಎಂಬ ಚುಟುಕು ಸಂದೇಶ ಪರದೆ ಮೇಲೆ ದಾಖಲಾಗಿತ್ತು. ಅಲ್ಲದೆ ಪಾಕಿಸ್ತಾನದ ಸೈಬರ್ ಸೇನಾಪಡೆಯ ಹೆಸರಿನಲ್ಲಿರುವ ಈ ಸಂದೇಶ ಭಾರತದ ಸೈಬರ್ ಪ್ರಪಂಚವನ್ನು ಧ್ವಂಸಗೊಳಿಸುವುದಾಗಿ ಬೆದರಿಕೆ ಒಡ್ಡಿತ್ತು.

ಹ್ಯಾಕ್ ಆಗಲು ಏನು ಕಾರಣ?: ಇದು ಉನ್ನತ ತಂತ್ರಜ್ಞಾನ ನಿಷ್ಣಾತರು ತಮ್ಮ ಜ್ಞಾನ ಪರೀಕ್ಷೆಗಾಗಿ ಮಾಡಿದ ಆಟವಲ್ಲ. ಫೇ ಸ್ ಬುಕ್ ನಲ್ಲಿ ಪಾಕಿಸ್ತಾನ್ ಸೈಬರ್ ಆರ್ಮಿಯನ್ನು ಭಾರತದ ಹ್ಯಾಕರ್ ಗಳು ಮೂದಲಿಸಿದ್ದೇ ಇದಕ್ಕೇ ಕಾರಣ ಎನ್ನಲಾಗಿದೆ.

ಭಾರತದ ಹ್ಯಾಕರ್ ಗಳು ಪಾಕಿಸ್ತಾನದ ಸೈಬರ್ ಪ್ರಪಂಚದ ಮೇಲೆ ಆಗಾಗ್ಗೆ ದಾಳಿ ಮಾಡಿ ಮಜಾ ಮಾಡುತ್ತಿದ್ದರು, ಇದಕ್ಕೆ ಪ್ರತಿಕಾರವಾಗಿ ಮಲ್ಯರ ವೆಬ್ ತಾಣವನ್ನು ಹ್ಯಾಕ್ ಮಾಡಲಾಗಿದೆ. ಅಲ್ಲದೆ, ಪಾಕಿಸ್ತಾನ ಯಾವುದೇ ವೆಬ್ ತಾಣಗಳನ್ನು ಭಾರತೀಯರು ಹ್ಯಾಕ್ ಮಾಡಿದರೆ ತಕ್ಕ ಪಾಠ ಕಲಿಸುವುದಾಗಿ ಪಾಕಿಸ್ತಾನ್ ಸೈಬರ್ ಆರ್ಮಿ ಬೆದರಿಕೆ ಹಾಕಿದೆ.

ಒಟ್ಟಿನಲ್ಲಿ, ಭಾರತ- ಪಾಕಿಸ್ತಾನ ತಂತ್ರಜ್ಞರ ಸೈಬರ್ ವಾರ್ ಗೆ ಮಲ್ಯ ತಾಣ ಹರಕೆಯ ಕುರಿಯಾಗಿದ್ದಂತೂ ಸತ್ಯ.ಈ ಸಂಬಂಧ ಮಲ್ಯ ಅವರು ಸೋಮವಾರ ಮುಂಬೈನಲ್ಲಿ ಪೊಲೀಸರಿಗೆ ದೂರು ನೀಡುವ ಸಾಧ್ಯತೆಯಿತ್ತು. ಮಲ್ಯರ ವೆಬ್ ತಾಣ ವೀಕ್ಷಿಸಿ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X