ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರೆಂಟ್ ಕೊಡದ ಮಾನ್ಯ ಯಡಿಯೂರಪ್ಪ ಅವರಿಗೆ...

By Mrutyunjaya Kalmat
|
Google Oneindia Kannada News

Load Shedding
ಬೆಂಗಳೂರು, ಆ. 13 : ರಾಜ್ಯದಲ್ಲಿ ವಿದ್ಯುತ್ ಸರಬರಾಜಿನ ಸ್ಥಿತಿ ಮತ್ತಷ್ಟು ಚಿಂತಾಜನಕವಾಗಿದೆ. ಮಳೆ ಕೊರತೆಯ ಹಿನ್ನೆಲೆಯಲ್ಲಿ ವಿದ್ಯುತ್ತಿನ ಬೇಡಿಕೆ ಹೆಚ್ಚುತ್ತಲೇ ಸಾಗಿದೆ. ಅಸಮರ್ಪಕ ವಿದ್ಯುತ್ ಪೂರೈಕೆಯಿಂದಾಗಿ ಜನ ಕಂಗಾಲಾಗಿದ್ದಾರೆ. ಬೆಂಗಳೂರು ಸೇರಿದಂತೆ ನಗರ ಪ್ರದೇಶದಲ್ಲಿ ಬಾರಿ ವಿದ್ಯುತ್ ಕಡಿತ ಸಾರ್ವಜನಿಕರಲ್ಲಿ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ.

ನಗರದಲ್ಲಿ ಪದೇಪದೆ ಲೋಡ್ ಶೆಡ್ಡಿಂಗ್ ಮಾಡುತ್ತಿದ್ದು, ಹಳೆಯ ಬಡಾವಣೆಯಲ್ಲಿ ಮೂರರಿಂದ ರಿಂದ ನಾಲ್ಕು ಗಂಟೆ ಮತ್ತು ಹೊಸ ಬಡಾವಣೆಯಲ್ಲಿ 6 ರಿಂದ 8 ಗಂಟೆಗಳ ಕಾಲ ಲೋಡ್ ಶೆಡ್ಡಿಂಗ್ ಮಾಡಲಾಗುತ್ತಿದೆ. ಗ್ರಾಮೀಣ ಪ್ರದೇಶದಲ್ಲಂತೂ ಯಾವಾಗ ವಿದ್ಯುತ್ ಇರುತ್ತದೆ ಎಂಬುದೇ ಗೊತ್ತಾಗುವುದಿಲ್ಲ. ಕೇವಲ 2 ರಿಂದ 3 ಗಂಟೆ ಮೂರು ಫೇಸ್ ಮತ್ತು ಮೂರು ಗಂಟೆ ಕಾಲ ಸಿಂಗಲ್ ಫೇಸ್ ಪೂರೈಕೆಯಾಗುತ್ತಿದೆ.

ಅಸಮರ್ಪಕ ವಿದ್ಯುತ್ ಸರಬರಾಜಿನಿಂದ ಪಟ್ಟಣ, ನಗರ ಪ್ರದೇಶದಲ್ಲಿ ಕುಡಿಯುವ ನೀರಿಗೂ ಜನರ ಪರಿತಪಿಸುವಂತಾಗಿದೆ. ಬಹುತೇಕ ಕಡೆ ಕೊಳವೆ ಬಾವಿಗಳ ನೀರನ್ನೇ ಕುಡಿಯಲು ಬಳಸಲಾಗುತ್ತಿದೆ. ವಿದ್ಯುತ್ ಸಮಸ್ಯೆಗೆ ಸರಕಾರವೇ ಹೊಣೆ. ಮಳೆಗಾಲದಲ್ಲಿ ಎಂದೂ ವಿದ್ಯುತ್ ಸಮಸ್ಯೆ ಉಂಟಾಗುತ್ತಿರಲಿಲ್ಲ. ಬಳ್ಳಾರಿ ಮತ್ತು ರಾಯಚೂರಿನ ಶಾಖೋತ್ಪನ್ನ ವಿದ್ಯುತ್ ಘಟಕ ಪದೇಪದೆ ಸ್ಥಗಿತಗೊಳ್ಳುತ್ತಿದೆ. ಅದಕ್ಕೆ ಪರಿವಾರವನ್ನು ಕಂಡುಹಿಡಿಯುವಲ್ಲಿ ಸರಕಾರ ವಿಫಲವಾಗಿದೆ ಎಂದು ರೈತ ಸಂಘ ಆರೋಪಿಸಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X