ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅವೆನ್ಯೂ ರಸ್ತೆಯಲ್ಲೊಂದು 'ದಿ ಗ್ರೇಟ್ ರಾಬರಿ'

By Mahesh
|
Google Oneindia Kannada News

Avenue road , Bangalore
ಬೆಂಗಳೂರು, ಆ 10 : ಚಿನ್ನದ ಸಗಟು ವ್ಯಾಪಾರ ಮಳಿಗೆಯೊಂದರ ಸೇಫ್ ಲಾಕರ್ ನಲ್ಲಿ ಇಟ್ಟಿದ್ದ ಬರೋಬ್ಬರಿ 3.5 ಕೋಟಿ ರೂಪಾಯಿ ನಗದು ಹಣವನ್ನು ದುಷ್ಕರ್ಮಿಗಳು ದೋಚಿ ಪರಾರಿಯಾಗಿರುವ ಘಟನೆ ಜನನಿಬಿಡ ಅವೆನ್ಯೂ ರಸ್ತೆಯಲ್ಲಿ ಜರುಗಿದ್ದು ತಡವಾಗಿ ಬೆಳಕಿಗೆ ಬಂದಿದೆ.

ಚೆಮ್ಮನೂರು ಜ್ಯುವೆಲರ್ಸ್, ಮುತ್ತೂಟ್ ಫೈನಾನ್ಸ್ ಕಂಪೆನಿ ದರೋಡೆ ಪ್ರಕರಣದ ನಂತರ ನಡೆದ ಭಾರೀ ಹಣ ಲೂಟಿ ಪ್ರಕರಣ ಇದಾಗಿದ್ದು ಹಲಸೂರು ಗೇಟ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಆಂಧ್ರ ಮೂಲದ ವ್ಯಾಪರಸ್ಥರೊಬ್ಬರು ಇಲ್ಲಿ ಚಿನ್ನದ ಸಗಟು ವ್ಯಾಪಾರ ಆರಂಭಿಸಿದ್ದರು. ಶನಿವಾರ (ಆ.7) 3.5 ಕೋಟಿ ರೂಪಾಯಿ ಸಂಗ್ರಹವಾಗಿತ್ತು. ಸಕಾಲದಲ್ಲಿ ಬ್ಯಾಂಕ್ ಗೆ ಜಮಾ ಮಾಡಲು ಆಗದ ಕಾರಣ ಕಚೇರಿಯ ಲಾಕರ್ ನಲ್ಲಿ ಇಡಲಾಗಿತ್ತು.

ಭಾನುವಾರ ಕಚೇರಿಗೆ ರಜಾ ಇದ್ದು ಸೋಮವಾರ (ಆ.9) ಬೆಳಗ್ಗೆ ಬಾಗಿಲು ತೆಗೆದಾಗ ಹಣ ನಾಪತ್ತೆಯಾಗಿದ್ದು ಬೆಳಕಿಗೆ ಬಂತು. ಕಚೇರಿಯ ಸೆಕ್ಯುರಿಟಿ ಗಾರ್ಡ್ ಕಾಣೆಯಾಗಿದ್ದು ರಕ್ಷಣಾ ಸಿಬ್ಬಂದಿ ಕೈವಾಡವನ್ನು ಶಂಕಿಸಲಾಗಿದೆ.

ಅವೆನ್ಯೂ ರಸ್ತೆಯ ಜಯಂತಿ ಬಹುಮಹಡಿ ಕಟ್ಟಡದ ನಾಲ್ಕನೇ ಅಂತಸ್ತಿನಲ್ಲಿ ಮೈಕ್ರೋ ಇಂಟರ್ ನ್ಯಾಷನಲ್ ಕಚೇರಿಯಲ್ಲಿ ಈ ಘಟನೆ ನಡೆದಿದೆ. ಭಾನುವಾರದಂದು ಸೆಕ್ಯುರಿಟಿ ಗಾರ್ಡ್ ಕೆಲಸ ಮಾಡುತ್ತಿದ್ದನ್ನು ಅಕ್ಕಪಕ್ಕದ ಅಂಗಡಿಯವರು ನೋಡಿದ್ದಾರೆ.

ಭಾನುವಾರ ರಾತ್ರಿ ದರೋಡೆ ಎಸಗಿ ಪರಾರಿಯಾಗಿರಬಹುದು ಮತ್ತು ಇಬ್ಬರಿಗಿಂತ ಹೆಚ್ಚು ಮಂದಿ ಈ ಕೃತ್ಯ ಎಸಗಿರಬಹುದೆಂದು ಪೊಲೀಸರು ಶಂಕೆ ವ್ಯಕ್ತ ಪಡಿಸಿದ್ದಾರೆ. ಕಚೇರಿಯ ಒಳಗೆ ಸಿಸಿಟಿವಿ ಕ್ಯಾಮೆರಾ ಇದ್ದು ಕೃತ್ಯ ಎಸಗುವಾಗ ಅದನ್ನು ಬಂದ್ ಮಾಡಲಾಗಿತ್ತೆ ಎಂದು ಇನ್ನೂ ತಿಳಿದು ಬಂದಿಲ್ಲ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X