ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆ.25ರಿಂದ ಮಂತ್ರಾಲಯ ಗುರುಗಳ ಆರಾಧನೆ

By Mahesh
|
Google Oneindia Kannada News

339rd Aradhana of Sri Raghavendra thirtha Swamy
ರಾಯಚೂರು, ಆ.9: ಮಂತ್ರಾಲಯದಲ್ಲಿ ಶ್ರೀರಾಘವೇಂದ್ರ ಸ್ವಾಮಿಗಳ 339 ನೇ ಆರಾಧನಾ ಮಹೋತ್ಸವ ವು ಆ.25 ರಿಂದ ಆ.27ರ ವರೆಗೆ ನಡೆಯಲಿದೆ. ಈ ಸಂದರ್ಭದಲ್ಲಿ ಹಲವು ವಿಶೇಷ ಪೂಜಾ ಕೈಂಕರ್ಯಗಳು, ರಾಘವೇಂದ್ರ ಪ್ರಶಸ್ತಿ ಪ್ರದಾನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿದೆ ಎಂದು ಶ್ರೀಮಠ ಪ್ರಕಟಿಸಿದೆ.

ಆ.23ರಂದು ಶ್ರೀಮಠದ ಪೀಠಾಧಿಪತಿ ಸುಯತೀಂದ್ರ ತೀರ್ಥರು ಗೋಪೂಜೆ, ಧಾನ್ಯ ಪೂಜೆ ಹಾಗೂ ಲಕ್ಷ್ಮಿ ಪೂಜೆ ನೆರವೇರಿಸುವ ಮೂಲಕ ಧಾರ್ಮಿಕ ಪೂಜಾ ಕಾರ್ಯಕ್ರಮಗಳಿಗೆ ನಾಂದಿ ಹಾಡಲಿದ್ದಾರೆ. ಆ.24ರಂದು ಶ್ರೀರಾಘವೇಂದ್ರ ಸ್ವಾಮಿಗಳ ಪೂರ್ವಾರಾಧನೆ, ಬೆಳಗ್ಗೆ 9 ಕ್ಕೆ ರಜತ ಮಂಟಪೋತ್ಸವ ಜರುಗಲಿದೆ. ಆ.26 ರಂದುಮಧ್ವಾರಾಧನೆ, ಗಜ, ರಜತ ಹಾಗೂ ಸ್ವರ್ಣ ರಥೋತ್ಸವ ನಡೆಯಲಿದೆ.

ಆ.27ರಂದು ಬೆಳಗ್ಗೆ ಉತ್ತರಾಧನೆ ನಿಮಿತ್ತ ಮಹಾರಥೋತ್ಸವ. ಆ.28ರಂದು ಶ್ರೀಸುಜ್ಞಾನೇಂದ್ರ ತೀರ್ಥರ ಆರಾಧನೆ ನಡೆಯಲಿದೆ. ಆ.29ರಂದು ಸರ್ವ ಸಮರ್ಪಣೋತ್ಸವವನ್ನು ಆಯೋಜಿಸಲಾಗಿದೆ.

ಗ್ರಂಥ ಬಿಡುಗಡೆ: ಮಧ್ವಾರಾಧನೆ ದಿನದಂದು ದಿವಂಗತ ಅಗ್ರಹಾರ ನಾರಾಯಣ ತಂತ್ರಿಗಳು ಶ್ರೀಮಧ್ವಾಚಾರ್ಯರ ಸರ್ವಮೂಲ ಗ್ರಂಥಗಳ ಮಾಲಿಕೆಯಲ್ಲಿ ರಚಿಸಿದ ದಶಪ್ರಕರಣ ಗ್ರಂಥಗಳ ಕನ್ನಡ ಟೀಕಾ ಭಾಷಾಂತರ ಗ್ರಂಥ, ಶ್ರೀರಾಘವೇಂದ್ರ ವಿಜಯ ಹಾಗೂ ಗುರುಪರಂಪರಾ ದರ್ಶನಂ ಗ್ರಂಥಗಳ ಬಿಡುಗಡೆ ಇರುತ್ತದೆ.

ಪ್ರಶಸ್ತಿ ಪ್ರದಾನ: ಉಡುಪಿಯ ಅಗ್ರಹಾರ ನಾರಾಯಣ ತಂತ್ರಿಗಳಿಗೆ ಮರಣೋತ್ತರವಾಗಿ ಹಾಗೂ ಬೆಂಗಳೂರಿನ ಮಲ್ಲಪ್ಪ ಶಿಂಧೆ ಅವರಿಗೆ ಶ್ರೀರಾಘವೇಂದ್ರಾನುಗ್ರಹ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ಆಸ್ಥಾನ ವಿದ್ವಾನ್ ಗೌರವವನ್ನು ಆಂಧ್ರದ ರಾಜಮಂಡ್ರಿಯ ಖ್ಯಾತ ಮೃದಂಗಪಟು ಡಾ.ವಿ. ಕಮಲಾಕರ ರಾವ್ ಅವರಿಗೆ ನೀಡಲಾಗುತ್ತದೆ.

ಸಾಂಸ್ಕೃತಿಕ ವೈಭವ: ಖ್ಯಾತ ಗಾಯಕರಾದ ಅನುಕೃಪಾ ರೌಡೂರು, ಸಂಪತ್ ಕುಮಾರ್ ಸೇರಿದಂತೆ ಹಲವಾರು ಸಂಗೀತಗಾರರಿಂದ ಶ್ರೀಗುರುಗಳಿಗೆ ಸಂಗೀತ ಸೇವೆ ಸಲ್ಲಿಸಲಾಗುವುದು ಎಂದು ಶ್ರೀಮಠ ತಿಳಿಸಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X