ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟೆಲಿಕಾಂ ಹಗರಣಕ್ಕೆ ಎನ್ ಡಿಎ ನೀತಿ ಕಾರಣ :ರಾಜಾ

By Mahesh
|
Google Oneindia Kannada News

Telecom Minister A Raja
ನವದೆಹಲಿ, ಆ.9: ಕಳೆದ 2008ರಲ್ಲಿ ದೇಶದ 2ಜಿ ತರಂಗಾಂತರ ಹಂಚಿಕೆ ಪ್ರಕ್ರಿಯೆಯಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರದ ಆರೋಪವನ್ನು ತಳ್ಳಿ ಹಾಕಿದ ಕೇಂದ್ರ ದೂರಸಂಪರ್ಕ ಸಚಿವ ಎ.ರಾಜಾ ಅವರು ಹಿಂದಿನ ಎನ್‌ಡಿಎ ಸರ್ಕಾರದ ನೀತಿಯನ್ವಯ ಹಾಗೂ ಟ್ರಾಯ್ ನ ಶಿಫಾರರಿನ್ವಯ 2ಜಿ ತಂರಂಗಾಂತರ ಹಂಚಿಕೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ಸೋಮವಾರ ಲೋಕಸಭೆಯಲ್ಲಿ ಪ್ರಶ್ನೋತ್ತರ ವೇಳೆಯಲ್ಲಿ ಈ ವಿಷಯವನ್ನು ತಿಳಿಸಿದ ಸಚಿವರು 1999 ರಿಂದ 2ಜಿ ತರಂಗಾಂತರವನ್ನು ಹರಾಜು ಮಾಡಿರಲಿಲ್ಲ ಮತ್ತು ಹರಾಜಿನಲ್ಲಿ 2008ರ ಮೊದಲು ಹಾಗೂ 2008ರ ನಂತರದ ದೂರಸಂಪರ್ಕ ಕಂಪೆನಿಗಳನ್ನು ಪ್ರತ್ಯೇಕವಾಗಿ ವರ್ಗೀಕರಿಸುವಂತೆ ಟ್ರಾಯ್ ಶಿಫಾಪಾರಸು ಮಾಡಿರಲಿಲ್ಲ ಎಂದು ಹೇಳಿದರು.

ಎಐಎಡಿಎಂಕೆ ಲೋಕಸಭಾ ಸದಸ್ಯ ತಂಬಿದೊರೈ ಅವರು 3ಜಿ ತರಂಗಾಂತರ ಹಂಚಿಕೆಯಿಂದ 70 ಸಾವಿರ ಕೋಟಿ ರೂಪಾಯಿ ಆದಾಯ ಬಂದಿದ್ದು, 2ಜಿ ತರಂಗಾಂತರ ಹಂಚಿಕೆಯಿಂದ 1ಲಕ್ಷ ಕೋಟಿ ರೂಪಾಯಿಗಳ ನಷ್ಟವಾಗಿದೆ ಎಂದು ಅರೋಪಿಸಿದ್ದು ಈ ಕುರಿತು ಚರ್ಚೆಗೆ ಒತ್ತಾಯಿಸಿದ್ದರು.

ಆರೋಪ ಹಾಗೂ ಪ್ರತ್ಯಾರೋಪಗಳು ಸಾಮಾನ್ಯ ಎಂದು ಪ್ರತಿಕ್ರಿಯಿಸಿದ ಸಚಿವರು ನಿಯಮಾವಳಿಗಳ ಅನ್ವಯವೇ 2ಜಿ ತರಂಗಾಂತರ ಹಂಚಿಕೆ ಮಾಡಲಾಗಿದೆ ಎಂದರು. 3ಜಿ ತರಂಗಾಂತರ ಹಂಚಿಕೆಯನ್ನು ಮುಂದಿನ ಸೆಪ್ಟೆಂಬರ್ 1 ರಿಂದ ಮಾಡಲಾಗುವುದು ಎಂದ ಸಚಿವರು ಎಮ್ ಟಿಎನ್ಎಲ್ ದೆಹಲಿ ಮತ್ತು ಮುಂಬೈನಲ್ಲಿ, ಬಿಎಸ್ಎಲ್ಎಲ್ ದೇಶಾದ್ಯಂತ 463 ನಗರಗಳಲ್ಲಿ 3ಜಿ ಸೇವೆ ನೀಡುತ್ತಿದೆ ಎಂದರು.

2ಜಿ ಯಲ್ಲಿ ಧ್ವನಿ ಸೇವೆಗಳನ್ನು ನೀಡುತ್ತಿದ್ದು 3ಜಿ ಯಲ್ಲಿ ವೀಡಿಯೋ ಮತ್ತು ಡಾಟಾ ವರ್ಗಾವಣೆ ಸೇವೆ ನೀಡಲಾಗುತ್ತಿದೆ ಎಂದು ಎರಡೂ ಸೇವೆಗಳ ವ್ಯತ್ಯಾಸವನ್ನು ವಿವರಿಸಿದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X