ಭಕ್ತಾದಿಗಳ ಸೇವೆಗಾಗಿ ಉಚಿತ ಆರೋಗ್ಯ ಕೇಂದ್ರ

ಸತತ 51 ದಿನಗಳ ಚಾತುರ್ಮಾಸ್ಯದ ಅವಧಿಯ ಪೂರ್ಣ ಕಾರ್ಯನಿರ್ವಹಿಸಲಿರುವ ಈ ತಾರ್ತ್ಪೂರ್ತಿಕ ಪ್ರಾಥಮಿಕ ಚಿಕಿತ್ಸಾ ಕೇಂದ್ರವನ್ನು ಆರೋಗ್ಯ ಇಲಾಖೆಯ ಸಹಯೋಗದೊಂದಿಗೆ ಕೈಗೊಳ್ಳಲಾಗಿದೆ.
ಇಲಾಖೆಯ ವೈದ್ಯರಾದ ಡಾ. ಸ್ಮಿತಾ ಕುಲಕರ್ಣಿ ಹಾಗೂ ಸಿಬ್ಬಂದಿ ವರ್ಗ ಅಕಸ್ಮಿಕವಾಗಿ ಅನಾರೋಗ್ಯ ಪೀಡಿತರಾಗುವ ಯಾತ್ರಿಕರಿಗೆ ಸಂಪೂರ್ಣ ಉಚಿತವಾಗಿ ಅಗತ್ಯ ಚಿಕಿತ್ಸೆ ನೀಡುತ್ತಾರೆ. ಭಕ್ತರಿಗೆ ದಿನದ 24 ಗಂಟೆಯೂ ಆರೋಗ್ಯ ಸೇವೆಯನ್ನು ನೀಡಲಾಗುತ್ತದೆ. ಹೆಚ್ಚುವರಿ ಚಿಕಿತ್ಸೆ ಅಗತ್ಯವಾದಲ್ಲಿ ಅಂಬ್ಯುಲೆನ್ಸ್ ಸೇರಿದಂತೆ ಎಲ್ಲ ಮುಂಜಾಗ್ರತಾ ಕ್ರಮ ವಹಿಸಲಾಗಿದೆ. ವಿತರಣೆಗೊಳ್ಳುವ ಕುಡಿಯುವ ನೀರಿನ ಶುದ್ದತೆಯನ್ನೂ ಆರೋಗ್ಯ ಇಲಾಖೆ ಪ್ರತಿನಿತ್ಯ ತಪಾಸಣೆ ಮಾಡುತ್ತಲಿದೆ ಎಂದು ಪರ್ಯಾಯಸ್ಥರಾದ ಗುರುರಾಚಾರ್ಯ ರಾಯಚೂರ ತಿಳಿಸಿದರು.
ಈ ಸಂದರ್ಭದಲ್ಲಿ ಚಂದಿ ಆಚಾರ್ಯರು, ತ್ರಿವಿಕ್ರಮಾಚಾರ್ಯ ಬಿದರಳ್ಳಿ, ನರಸಿಂಹ ನಾಮಾವಳಿ, ವ್ಯಾಸಾಚಾರ್ಯ, ಮನೋಜ್ ಕುಲಕರ್ಣಿ, ರವಿ ಖಾರದ, ಮೈಲಾರಿ ಕುಲಕರ್ಣಿ ಮುಂತಾದವರು ಉಪಸ್ಥಿತರಿದ್ದರು.












Click it and Unblock the Notifications