ಆಧಾರ್ ಜೊತೆ ಕಾರ್ಪ್ ಬ್ಯಾಂಕ್ ಒಪ್ಪಂದ
ಬೆಂಗಳೂರು,
ಆ,5: ಮಂಗಳೂರು ಮೂಲದ ಕಾರ್ಪೊರೇಷನ್ ಬ್ಯಾಂಕ್ ವಿಶಿಷ್ಟ ಗುರುತು ಚೀಟಿ ಪ್ರಾಧಿಕಾರ(UIDAI)ದೊಂದಿಗೆ ಒಡಂಬಡಿಕೆ(MoU)ಗೆ ಸಹಿ ಹಾಕಿರುವುದಾಗಿ ತಿಳಿಸಿದೆ. ಈ ಒಪ್ಪಂದದ ಪ್ರಕಾರ ಪ್ರಾಧಿಕಾರ ವಿತರಿಸಲಿರುವ 'ಆಧಾರ್' ಕಾರ್ಡುಗಳಿಗೆ ಬ್ಯಾಂಕು ರಿಜಿಸ್ಟ್ರಾರ್ ಆಗಿ ಕಾರ್ಯ ನಿರ್ವಹಿಸಲಿದೆ. id="toptextpromo">ಪ್ರಾಧಿಕಾರದ
ನಿಯಮಾವಳಿಗಳ ಪ್ರಕಾರ 16 ಅಂಕಿಗಳ ವಿಶಿಷ್ಟ ಗುರುತು ಚೀಟಿಯನ್ನು ನೀಡಲು ಬ್ಯಾಂಕು ನಾಗರಿಕರನ್ನು ನೋಂದಾಯಿಸಲಿದ್ದು ಅವರ ಬಯೋಮೆಟ್ರಿಕ್ ಹಾಗೂ ಡೆಮೊಗ್ರಾಫಿಕ್ ಗುರುತುಗಳನ್ನು ಸಂಗ್ರಹಿಸುವ ಕಾರ್ಯವನ್ನು ಕಾರ್ಪೊರೇಷನ್ ಬ್ಯಾಂಕ್ ಗೆ ನೀಡಲಾಗಿದೆ. id='are-slot-1' class='oiad oi-axt oiadv'> id='top-searched-articles'>ಬ್ಯಾಂಕು,
ಬ್ಯಾಂಕಿಂಗ್ ಸೇವೆಯನ್ನು ದೇಶಾದ್ಯಂತ ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಕಾರ್ಪೋರೇಷನ್ ಬ್ಯಾಂಕ್ ಒದಗಿಸುತ್ತಿದೆ. ಈ ಮೊದಲು UIDAIಗೆ ರಿಜಿಸ್ಟ್ರಾರ್ ಆಗಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(ಎಸ್ ಬಿಐ) ಆಯ್ಕೆಯಾಗಿತ್ತು. ಆಧಾರ್ ಎಂಬ ಈ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರದ ಮುಖ್ಯಸ್ಥರಾಗಿ ನಂದನ್ ನಿಲೇಕಣಿ ಕಾರ್ಯನಿರ್ವಹಿಸುತ್ತಿದ್ದಾರೆ.











Click it and Unblock the Notifications