ಕಾಂಗ್ರೆಸ್ಸಿಗರು ತಲೆಬಾಗುವುದು ರಾಹುಲ್ ಬಚ್ಚಾಗೆ

SriRamulu
ಬಳ್ಳಾರಿ, ಆ. 4: ನಮ್ಮನ್ನು ಬಚ್ಚಾ ಎನ್ನುವ ಈ ಕಾಂಗ್ರೆಸ್ಸಿಗರು ಕೈಕಟ್ಟಿ, ತಲೆ ತಗ್ಗಿಸಿ ನಿಲ್ಲೋದು ಕೂಡ ರಾಹುಲ್‌ಗಾಂಧಿಯ ಎನ್ನುವ ಬಚ್ಚಾನ ಮುಂದೆಯೇ, ಇದಕ್ಕೇನೆನ್ನಬೇಕು ಎಂದು ಸಚಿವ ಬಿ. ಶ್ರೀರಾಮುಲು ಕಾಂಗ್ರೆಸ್ಸಿಗರನ್ನು ವ್ಯಂಗವಾಡಿದ್ದಾರೆ.

ಕೂಡ್ಲಿಗಿಯ ಮದಕರಿ ನಾಯಕ ವೃತ್ತದಲ್ಲಿ ಮಂಗಳವಾರ ನಡೆದ 'ಸ್ವಾಭಿಮಾನಿ ಯಾತ್ರೆ'ಯ ಸಭೆಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ಸಿಗರು ನನ್ನನ್ನು ಬಚ್ಚಾ ಎನ್ನುತ್ತಿದ್ದಾರೆ. ಅದು ಸರಿ. ಆದರೆ ಇವರು ಕೈಕಟ್ಟಿ ನಿಲ್ಲುವುದು ಕೂಡ ಬಚ್ಚಾನ ಮುಂದೆಯೇ ಅಲ್ಲವೇ? ಸೋನಿಯಾ, ರಾಹುಲ್ ಮತ್ತು ಪ್ರಿಯಾಂಕರನ್ನು ಮೆಚ್ಚಿಸಲಿಕ್ಕಾಗಿ ಇವರು ಪಾದಯಾತ್ರೆ ನಡೆಸುತ್ತಿದ್ದಾರೆ ಎಂದು ಟೀಕಿಸಿದರು.

ಅಕ್ರಮ ಗಣಿಗಾರಿಕೆ ವಿರುದ್ಧ ಕಾಂಗ್ರೆಸ್ಸಿಗರು ಪಾದಯಾತ್ರೆ ಮಾಡುವ ಬದಲು ಜನಸಾಮಾನ್ಯದ ಹೊಟ್ಟೆ ತುಂಬುವ ಜೀವನಾವಶ್ಯಕ ಪದಾರ್ಥಗಳ ಬೆಲೆ ಇಳಿಸಲಿಕ್ಕಾಗಿ ದೆಹಲಿಗೆ ನನ್ನೊಂದಿಗೆ ಪಾದಯಾತ್ರೆ ನಡೆಸಲಿ ಎಂದು ಮತ್ತೊಂದು ಸವಾಲು ಹಾಕಿದರು.

ಬಳ್ಳಾರಿ ಜಿಲ್ಲೆಯ ಜನರು ಸಹನಾಶೀಲರು. ಅವರು ತಾಳ್ಮೆ ಕಳೆದುಕೊಂಡರೆ ಕಾಂಗ್ರೆಸ್‌ನವರಿಗೆ ತಕ್ಕ ಪಾಠ ಕಲಿಸುತ್ತಾರೆ. ಕಾಂಗ್ರೆಸ್‌ನ ಪಾದಯಾತ್ರೆ ಬಳ್ಳಾರಿಗೆ ಬಂದಾಗ ನಮ್ಮವರು ಎಲ್ಲರೂ ಒಟ್ಟಿಗೇ ಕೇಕೆ ಹಾಕಿದರೆ ನೀವೆಲ್ಲರೂ (ಕಾಂಗ್ರೆಸ್ಸಿಗರು) ಕಿವಿ ಮುಚ್ಚಿಕೊಂಡು ವಾಪಸ್ ಹೋಗಬೇಕಾದ ಪ್ರಸಂಗ ಬರಲಿದೆ. ನಮಗೆ ಈಗಲೂ ಜಿಲ್ಲೆಯಲ್ಲಿ ಉತ್ತಮ ಜನಬೆಂಬಲ ಇದೆ ಎಂದು ಹೇಳಿದರು.

ಸಚಿವ ಜಿ. ಜನಾರ್ದನರೆಡ್ಡಿ ಮಾತನಾಡಿ, ಕಾಂಗ್ರೆಸ್‌ನವರು ಸುಳ್ಳನ್ನು ಇಟ್ಟುಕೊಂಡು 320 ಕಿ.ಮೀ ಪಾದಯಾತ್ರೆ ನಡೆಸುತ್ತಿದ್ದಾರೆ. ಈ ಯಾತ್ರೆಯಿಂದ ಅವರ ಉದ್ಧೇಶ ಈಡೇರುವುದಿಲ್ಲ. ಕಾಂಗ್ರೆಸ್ಸಿರು ಈ ಯಾತ್ರೆ ವಿಫಲ ಆಗುವುದು ಖಚಿತ. ಕಾಂಗ್ರೆಸ್ ಈಗ ವಲಸೆ ಬಂದವರ ಪಕ್ಷ ಆಗಿದೆ ಎಂದು ಅವರು ಹೇಳಿದರು.

ಶಾಸಕರಾದ ಬಿ. ನಾಗೇಂದ್ರ, ಸುರೇಶಬಾಬು, ಮೃತ್ಯುಂಜಯ ಜಿನಗಾ, ಡಾ. ವಿ. ಮಹಿಪಾಲ್, ಮಾಜಿ ಸಂಸದ ಕೋಳೂರು ಬಸವನಗೌಡ ಮಾತನಾಡಿದರು. ಕೂಡ್ಲಿಗಿಯ ಪವಿತ್ರ ಗಾಂಧಿ ಚಿತಾಭಸ್ಮಕ್ಕೆ ಭೇಟಿ ನೀಡಿ ಗೌರವ ಸಲ್ಲಿಸಿದ ಈ ಮುಖಂಡರು, ಚಿತಾಭಸ್ಮ ಸ್ಮಾರಕದಿಂದ ಮದಕರಿನಾಯಕ ವೃತ್ತದವರೆಗೆ ಬೃಹತ್ ಮೆರವಣಿಗೆಯಲ್ಲಿ ವೇದಿಕೆಗೆ ಬಂದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+