ಇದು ಆಟೋದಲ್ಲಿ ಓಡಾಡುವವರ ಗಮನಕ್ಕೆ

Posted By:
Subscribe to Oneindia Kannada
Auto meter minimum rates increased
ಬೆಂಗಳೂರು, ಆ. 1 : ಆಟೋವನ್ನು ನೆಚ್ಚಿಕೊಂಡಿರುವ ನಗರದ ಪ್ರಯಾಣಿಕರು ಇಂದಿನಿಂದ ಕನಿಷ್ಠ ಆಟೋ ದರವನ್ನು ಮೂರು ರು. ಹೆಚ್ಚು ನೀಡಬೇಕು. ಕನಿಷ್ಠ ದರವನ್ನು ಪರಿಷ್ಕರಿಸಲಾಗಿದ್ದು ರು.14ರಿಂದ 17 ರು.ಗೆ ಏರಿಸಿ ಆದೇಶ ಹೊರಡಿಸಲಾಗಿದೆ. ಇದು ಆಗಸ್ಟ್ 1ರಿಂದಲೇ ಜಾರಿಗೆ ಬಂದಿದೆ.

2 ಕಿ.ಮೀ. ಕ್ರಮಿಸಿದ ನಂತರ ಪ್ರತಿ ಕಿ.ಮೀಟರಿಗೆ 9 ರು. ತೆತ್ತಬೇಕು. ಹೊಸ ದರಗಳನ್ನು ಆಟೋ ಮೀಟರುಗಳಿಗೆ ಅಳವಡಿಸಿಕೊಳ್ಳಲು ಆಟೋ ಚಾಲಕರಿಗೆ 2 ತಿಂಗಳ ಗಡುವು ನೀಡಲಾಗಿದೆ. ಅಲ್ಲಿಯವರೆಗೆ ದರ ಬದಲಾವಣೆ ಪಟ್ಟಿ ನೋಡಿ ದರ ನೀಡುವ ಬವಣೆ ಪ್ರಯಾಣಿಕರಿಗೆ ತಪ್ಪಿದ್ದಲ್ಲ.

ಪ್ರಯಾಣಿಕರಿಗೆ ನೆನಪಿರಲಿ, ರಾತ್ರಿ 10 ಗಂಟೆಯಿಂದ ಬೆಳಗ್ಗೆ 5 ಗಂಟೆಯವರೆಗೆ ಮಾತ್ರ ಒಂದೂವರೆ ಪಟ್ಟು ದರ ನೀಡಬೇಕು. ಆಟೋ ಚಾಲಕನನ್ನು ಕಾಯಿಸಬೇಕಾದರೆ, ಐದು ನಿಮಿಷದವರೆಗೆ ಯಾವುದೇ ಹೆಚ್ಚಿನ ಶುಲ್ಕ ನೀಡಬೇಕಿಲ್ಲ. ನಂತರ ಪ್ರತಿ 15 ನಿಮಿಷಕ್ಕೆ 1 ರು. ಹೆಚ್ಚಿಗೆ ನೀಡಬೇಕು, ಅಷ್ಟೇ. ಮತ್ತು ಲಗೇಜು 20 ಕೆಜಿವರೆಗೂ ಇದ್ದರೂ ಯಾವುದೇ ಹೆಚ್ಚಿನ ಶುಲ್ಕ ನೀಡಬೇಕಿಲ್ಲ.

ಆಟೋ ದರ ಹೆಚ್ಚಿಸಿದರೂ ಕಿರಿಕ್ಕು ಮಾಡುವವರೇನೂ ಕಡಿಮೆಯಿರುವುದಿಲ್ಲ. ಮೀಟರಿನ ಮೇಲೆ ಹತ್ತಿಪ್ಪತ್ತು ರು. ಜಾಸ್ತಿ ಕೇಳುವುದು, ನಿಗದಿತ ವೇಳೆ ಬಿಟ್ಟು ಉಳಿದ ಸಮಯದಲ್ಲಿ ಒಂದೂವರೆ, ಎರಡು ಪಟ್ಟು ಕೇಳುವುದು, ಕೇಳಿದಲ್ಲಿ ಬರದೆ ಕ್ಯಾತೆ ತೆಗೆಯುವುದು, ಕೊಂಕಣ ಸುತ್ತಿ ಮೈಲಾರಕ್ಕೆ ಮುಟ್ಟಿಸುವುದು, ಮೀಟರುಗಳಲ್ಲೇ ವಂಚಿಸುವುದು... ಮತ್ತೇನಾದರೂ ಕಿರಿಕಿರಿಗಳನ್ನು ಮಾಡಿದಲ್ಲಿ ಮುಲಾಜಿಲ್ಲದೇ 080-2226 0554 / 080-2220 7750 ನಂಬರುಗಳಿಗೆ ಫೋನ್ ಮಾಡಿ ದೂರು ಸಲ್ಲಿಸಿ. ಕ್ರಮ ಕೈಗೊಳ್ಳುವವರೆಗೆ ಬಿಡಬೇಡಿ.

ಆಟೋ ಪ್ರಯಾಣ ಸುಖಕರವಾಗಿರಲಿ. ಅನವಶ್ಯಕ ಕಿರಿಕಿರಿಗಳು ನಿಲ್ಲಲಿ. ಕೊಟ್ಟ ದುಡ್ಡಿಗೆ ಸರಿಯಾದ ಸೇವೆ ಸಿಗಲಿ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

Please Wait while comments are loading...