ಪ್ಯಾನ್ ಸಲ್ಲಿಸದ ಡಿಮ್ಯಾಟ್ ಖಾತೆಗೆ ನಿರ್ಬಂಧ

ಪ್ಯಾನ್ ಕಾರ್ಡ್ ಸಂಖ್ಯೆ ಒದಗಿಸದ ಹೂಡಿಕೆದಾರರ ಖಾತೆಗಳಿಂದ ಷೇರುಗಳು ಮಾರಾಟ ಮಾಡದಂತೆ ನಿರ್ಬಂಧ ಸೆಬಿ ಹೇರಿದೆ. ಆಗಸ್ಟ್ 16 ರ ನಂತರ ಷೇರುಗಳ ಖರೀದಿಸುವುದನ್ನೂ ನಿಷೇಧಿಸಲು ನಿರ್ಧರಿಸಿದೆ. ಬಹಳಷ್ಟು ಬಾರಿ ಎಚ್ಚರಿಕೆ ನೀಡಿದರೂ ಹಲವಾರು ಹೂಡಿಕೆದಾರರು ತಮ್ಮ ಪ್ಯಾನ್ ವಿವರಗಳನ್ನು ನೀಡಿದ ಕಾರಣ ಸೆಬಿ ಈ ಕಠಿಣ ಕ್ರಮಕ್ಕೆ ಮುಂದಾಗಿದೆ.
ಇಂತಹ ಹೂಡಿಕೆದಾರರು ಐಪಿಒ/ಎಫ್ ಪಿಒ/ ಹಕ್ಕಿನ ಷೇರುಗಳನ್ನು ಸಹ ಖರೀದಿಸುವಂತಿಲ್ಲ. ಅಲ್ಲದೆ, ಮುಕ್ತ ಮಾರುಕಟ್ಟೆಯಿಂದಲೂ ಸಹ ಯಾವುದೇ ಷೇರು ವಹಿವಾಟು ನಡೆಸದಂತೆ ಸೆಬಿ ನಿರ್ಬಂಧ ಹೇರಿದೆ. ಒಟ್ಟಾರೆ ಪ್ಯಾನ್ ಒದಗಿಸದ ಗ್ರಾಹಕರಿಗೆ ಷೇರು ಪೇಟೆ ಮುಚ್ಚಿದ್ದಂತಾಗಿದೆ.
ಆದಾಯ ತೆರಿಗೆ ಕಟ್ಟಲು ಇಂದೇ ಕೊನೆ ದಿನ ಇದನ್ನು ಓದಿ: ಆದಾಯ ತೆರಿಗೆಯನ್ನು ನಾವೇಕೆ ಕಟ್ಟಬೇಕು?












Click it and Unblock the Notifications