ಪ್ರಧಾನಿಗಳ ವಿದ್ಯುತ್ ಬಿಲ್ ಒಂದು ಕೋಟಿಗೂ ಅಧಿಕ!
ನವದೆಹಲಿ,
ಜು.30: ವಿದ್ಯುತ್ ಉಳಿತಾಯ ಮಾಡಿ ವಿದ್ಯುತ್ ಉಳಿತಾಯ ಮಾಡಿ. ಒಂದು ಯುನಿಟ್ ವಿದ್ಯುತ್ ಉಳಿತಾಯ ಎರಡು ಯುನಿಟ್ ವಿದ್ಯುತ್ ಉತ್ಪಾದನೆಗೆ ಸಹಕಾರಿ ಎಂದು ಕಿವಿ ಮಾತು ಹೇಳುವ ಸರಕಾರಗಳೇ ಹೀಗೆ ಮಾಡಿದರೆ ಹೇಗೆ? ನೀರಿನಲ್ಲಿ ಹುಣಸೆ ಹಣ್ಣು ತೊಳೆದಂತೆ ಕೋಟ್ಯಾಂಟರ ರುಪಾಯಿ ವಿದ್ಯುತ್ ಖರ್ಚು ಮಾಡಿವೆ. id="toptextpromo">ಕಳೆದ
ಆರ್ಥಿಕ ವರ್ಷದಲ್ಲಿ ರಾಷ್ಟ್ರಪತಿ ಭವನ ಮತ್ತು ಸಂಸತ್ ಭವನಗಳ ಒಟ್ಟು ವಿದ್ಯುತ್ ಬಿಲ್ ರು.16 ಕೋಟಿಗಳನ್ನು ಮೀರಿದೆ. 2008-09ನೇ ಸಾಲಿಗೆ ಹೋಲಿಸಿದರೆ ಪ್ರಸ್ತುತ ವರ್ಷದ ವಿದ್ಯುತ್ ಬಿಲ್ ಶುಲ್ಕದಲ್ಲಿ ರು.2 ಕೋಟಿ ಹೆಚ್ಚಳವಾಗಿದೆ. id='are-slot-1' class='oiad oi-axt oiadv'> id='top-searched-articles'>ರಾಷ್ಟ್ರಪತಿ
ಭವನ, ಸಂಸತ್ ಭವನ ಹಾಗೂ ಪ್ರಧಾನ ಮಂತ್ರಿಗಳ ಅಧಿಕೃತ ನಿವಾಸದ ಒಟ್ಟು ವಿದ್ಯುತ್ ಬಿಲ್ ರು.16.33 ಕೋಟಿಗಳು. ಮುಂಬೈನ ಚೇತನ್ ಕೊಠಾರಿ ಎಂಬುವವರು ಮಾಹಿತಿ ಹಕ್ಕು ಕಾಯಿದೆಯಡಿ ಅರ್ಜಿ ಸಲ್ಲಿಸಿದ್ದರು. 2007-08ರಲ್ಲಿ ಪ್ರಧಾನ ಮಂತ್ರಿಗಳ ನಿವಾಸದ ವಿದ್ಯುತ್ ಬಿಲ್ ರು.1 ಕೋಟಿ, 2008-09 ಹಾಗೂ 2009-10 ರಲ್ಲಿ ಕ್ರಮವಾಗಿ ರು.1.27 ಹಾಗೂ ರು.1.15 ಕೋಟಿಗಳು.











Click it and Unblock the Notifications