ಬಾರ್ ಗರ್ಲ್ಸ್ ಗೆ ತುಂಡುಡುಗೆ ಏಕೆ ?

ಮದ್ಯ ಮಾರಾಟ ಮಾಲೀಕರ ಸಂಘದ ವಿರೋಧದ ನಡುವೆಯೂ ಬಾರ್ ಗರ್ಲ್ಸ್ ಗೆ ಡ್ರೆಸ್ ಕೋಡ್ ಕಡ್ಡಾಯ ಮಾಡಲು ಸರಕಾರ ಹಸಿರು ನಿಶಾನೆ ನೀಡಿದ್ದು, ಕರಡು ಅಧಿಸೂಚನೆ ಹೊರಡಿಸಿದೆ. ಯಾವುದೇ ಕಾರಣಕ್ಕೂ ಡ್ರೆಸ್ ಕೋಡ್ ಕಡ್ಡಾಯ ಮಾಡಲು ಸಾಧ್ಯವಿಲ್ಲ ಎಂದು ಮಾಲೀಕರು ಪಟ್ಟಪಹಿಡಿದಿದ್ದಾರೆ. ಆದರೆ, ಕಾನೂನು ಮೀರಿದರೆ ಪರವಾನಿಗಿ ರದ್ದು ಮಾಡುವುದಾಗಿ ನಗರ ಪೊಲೀಸ್ ಆಯುಕ್ತ ಶಂಕರ ಬಿದರಿ ಎಚ್ಚರಿಕೆ ನೀಡಿದ್ದಾರೆ.
ಪ್ರತಿ ಬಾರ್ ಗಳಲ್ಲಿ ಕೆಲಸ ಮಾಡುವ ಯುವತಿಯರ ಬಗ್ಗೆ ಆಯಾ ಬಾರ್ ವ್ಯಾಪ್ತಿಗೆ ಠಾಣೆಗೆ ಮಾಹಿತಿ ನೀಡಬೇಕು. ಯುವತಿಯರಿಗೆ ಡ್ರೆಸ್ ಕೋಡ್ ಮಾಡಬೇಕು. ಅವರು ತುಂಡುಡುಗೆ ಧರಿಸದೇ ಸೀರೆ, ಸೆಲ್ವಾರ್ ಕಮೀಜ್, ಪ್ಯಾಂಟ್ , ಟೀಶರ್ಟ್ ಅಥವಾ ಸ್ಕರ್ಟ್ ಕೂಡ ಧರಿಸಬಹುದು. ಮದ್ಯ ಸರಬರಾಜು ನಂತರ ಯುವತಿಯರ ಹಾಡು, ಕುಣಿತಕ್ಕೆ ಅವಕಾಶವಿಲ್ಲ ಎಂದು ತಿಳಿಸಲಾಗಿದೆ.
ಗ್ರಾಹಕರನ್ನು ಸೆಳೆಯಲು ಬಾರ್ ಗಳಲ್ಲಿ ಕೆಲಸ ಮಾಡುವ ಮಹಿಳಾ ಉದ್ಯೋಗಿಗಳು ಅಂಗಾಂಗ ಪ್ರದರ್ಶಿಸುವ ರೀತಿಯಲ್ಲಿ ಉಡುಪು ಧರಿಸುತ್ತಿರುವ ಬಗ್ಗೆ ದೂರುಗಳು ಕೇಳಿ ಬಂದಿದ್ದವು. ವಹಿವಾಟು ಹೆಚ್ಚಿಸಿಕೊಳ್ಳಲು ಅಶ್ಲೀಲ ಮತ್ತು ಅನೈತಿಕ ಚಟುವಟಿಕೆಗೆ ಅಸ್ಪದ ನೀಡುತ್ತಿದ್ದ ಕೆಲ ಬಾರ್ ಗಳ ಮಾಲೀಕರ ವರ್ತನೆಗೆ ಕಡಿವಾಣ ಹಾಕಲು ಶಂಕರ ಬಿದರಿ ವಸ್ತ್ರಸಂಹಿತೆ ಜಾರಿಗೆ ತರಲು ನಿರ್ಧರಿಸಿದ್ದಾರೆ.












Click it and Unblock the Notifications