ಪಾಕ್ ನಲ್ಲಿ ವಿಮಾನ ಅಪಘಾತ : 155 ಸಾವು
ಇಸ್ಲಾಮಾಬಾದ್,
ಜು. 28 : ಹವಾಮಾನ ವೈಪರೀತ್ಯದಿಂದ ಪಾಕಿಸ್ತಾನದ ದೇಶಿಯ ವಿಮಾನವೊಂದು ಇಲ್ಲಿನ ಗುಡ್ಡಗಾಡು ಪ್ರದೇಶದಲ್ಲಿ ಪತನಗೊಂಡಿರುವುದು ವರದಿಯಾಗಿದೆ. ವಿಮಾನದಲ್ಲಿದ್ದ 152 ಜನರು ಸಾವನ್ನಪ್ಪಿದ್ದಾರೆ ಎಂದು ಮೂಲಗಳು ತಿಳಿಸಿವೆ. id="toptextpromo">ಇಸ್ಲಾಮಾಬಾದ್
ಗೆ ಸಮೀಪ ಇರುವ ಗುಡ್ಡಗಾಡು ಪ್ರದೇಶದಲ್ಲಿ ಈ ದುರ್ಘಟನೆ ಸಂಭವಿಸಿದೆ. ತೀವ್ರ ಮಳೆ ಹಾಗೂ ಮೋಡ ಕವಿದ ವಾತಾವರಣದಿಂದ ಈ ಅವಘಡ ನಡೆದಿದೆ. ಹವಾಮಾನ ವೈಪರೀತ್ಯದಿಂದಲೇ ವಿಮಾನ ಅಪಘಾತಕ್ಕೆ ಈಡಾಗಿದೆ ಎಂದು ಪಾಕಿಸ್ತಾನ ವಿಮಾನಯಾನ ಇಲಾಖೆ ತಿಳಿಸಿದೆ. ರಕ್ಷಣಾ ಕಾರ್ಯ ಆರಂಭಿಸಲಾಗಿದೆ. id='are-slot-1' class='oiad oi-axt oiadv'> id='top-searched-articles'>ಭಾರಿ
ಮಳೆ ಬೀಳುತ್ತಿರುವುದರಿಂದ ರಕ್ಷಣಾ ಕಾರ್ಯಕ್ಕೆ ತೊಂದರೆಯಾಗಿದೆ. ವಿಮಾನ ಅಪಘಾತ ಸ್ಥಳದಲ್ಲಿ ದಟ್ಟವಾದ ಹೊಗೆ ಬರುತ್ತಿದೆ. ನಾಲ್ಕು ಮಂದಿ ಪವಾಡಸದೃಶ ರೀತಿಯಲ್ಲಿ ಪಾರಾಗಿದ್ದಾರೆಂದು ಹೇಳಲಾಗಿದೆ. ಅಪಘಾತಕ್ಕೆ ಈಡಾಗಿರುವ ವಿಮಾನ ಏರ್ ಬ್ಲೂ ಸಂಸ್ಥೆಗೆ ಸೇರಿದ್ದು ಎಂದು ಇಲಾಖೆ ತಿಳಿಸಿದೆ. ಹೆಚ್ಚಿನ ಮಾಹಿತಿಗೆ ನಿರೀಕ್ಷಿಸಲಾಗಿದೆ.











Click it and Unblock the Notifications