ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಸವನಗುಡಿಯಲ್ಲಿ ಮತ್ತೆ ಪುಸ್ತಕ ಪರಿಷೆ

By Shami
|
Google Oneindia Kannada News

Pustaka Parishe , Basavanagudi
ಬೆಂಗಳೂರು, ಜು.23:ತಮಗೊಂದು ಪುಸ್ತಕ ಉಚಿತವಾಗಿ ಮತ್ತು ತಮ್ಮಿಂದಷ್ಟು ಮೇಳಕ್ಕಾಗಿ ಎಂಬ ಪರಿಕಲ್ಪನೆಯೊಂದಿಗೆ ಬಸವನಗುಡಿಯ “ಸೃಷ್ಟಿ ವೆಂಚರ್ಸ್" ಸಂಸ್ಥೆ ಮತ್ತೊಮ್ಮೆ “ಪುಸ್ತಕ ಪರಿಷೆ", ವಿಕಾಸಕ್ಕಾಗಿ ಸಾಹಿತ್ಯ ವಿನಿಮಯ ಮೇಳವನ್ನು ಜುಲೈ 25 ರಂದು ಯೋಜಿಸಲಾಗುತ್ತಿದೆ.

ಇಂತಹ ಯೋಜನೆಯು ಸಾಕಾರಗೊಳ್ಳಲು ಸಾರ್ವಜನಿಕರು, ಆಸಕ್ತರು, ಗಣ್ಯರು, ಪತ್ರಕರ್ತರು, ಸಾಹಿತಿಗಳು ತಾವು ಓದಿ ಮುಗಿಸಿದ ಪುಸ್ತಕಗಳು ಇತರರಿಗೆ ಉಪಯುಕ್ತವಾಗಬಲ್ಲ ಪುಸ್ತಕಗಳನ್ನು ಪರಿಷೆಯ ಭಂಡಾರಕ್ಕೆ ಅರ್ಪಿಸಬಹುದು.

ಪುಸ್ತಕ ಪರಿಷೆಯು ಬಸವನಗುಡಿಯ ಸೃಷ್ಟಿ ವೆಂಚರ್ಸ್ ನ ವಿನೂತನ ಪರಿಕಲ್ಪನೆಗಳಲ್ಲೊಂದು 'ಸಮಾಜ ವಿಕಾಸದ ಶಕ್ತಿ ಕೇಂದ್ರಗಳಾದ ಪುಸ್ತಕಗಳು ನಿಂತ ನೀರಿನಂತೆ ಒಂದೆಡೆ ಇರದೆ ಹಸ್ತದಿಂದ ಹಸ್ತಕ್ಕೆ, ಮಸ್ತಕದಿಂದ ಮಸ್ತಕಕ್ಕೆ ಸಂಚರಿಸಿ ತಮ್ಮ ಇರುವಿಕೆಯ ಸಾರ್ಥಕತೆಯನ್ನು ಸಾಧಿಸಬೇಕು" ಎಂಬ ಚಿಂತನೆಯಡಿಯಲ್ಲಿ “ಮೇಳಕ್ಕೆ ಬರುವವರಿಗೆ ಒಂದು ಪುಸ್ತಕ ಉಚಿತವಾಗಿ ತಮ್ಮಿಂದಷ್ಟು ಪುಸ್ತಕಗಳು ಮೇಳಕ್ಕಾಗಿ ಸಂಗ್ರಹಿಸಿ ವಿತರಿಸುವ ಯೋಜನೆ ರೂಪಿಸಿದೆ.

ಮೊದಲ ಬಾರಿಗೆ ಜನವರಿ 17 ರಂದು ಅಯೋಜಿಸಿತ್ತು. ಈ ಮೊದಲ ಪುಸ್ತಕ ಪರಿಷೆಗೆ ಸಾಹಿತಿಗಳು, ಮಾಧ್ಯಮದವರು,ಗಣ್ಯರು, ಸಾರ್ವಜನಿಕರಿಂದ ಅಭೂತಪೂರ್ವ ಬೆಂಬಲ,ಮೆಚ್ಚುಗೆ ವ್ಯಕ್ತವಾಗಿತ್ತು. ಸಾರ್ವಜನಿಕರ ಹಾಗೂ ಪುಸ್ತಕಾಭಿಮಾನಿಗಳ ಕೋರಿಕೆಯ ಮೇರೆಗೆ ಸೃಷ್ಟಿ ವೆಂಚರ್ಸ್ ಮತ್ತೊಮ್ಮೆ ಈ ಅವಕಾಶವನ್ನು ಕಲ್ಪಿಸಿಕೊಡುತ್ತಿದೆ. ಈಬಾರಿಯು ಕೂಡ ಹೆಚ್ಚು ಹೆಚ್ಚು ಮಕ್ಕಳು, ಯುವಕರು ಹಾಗೂ ವಿಧ್ಯಾರ್ಥಿಗಳಿಗೆ ಪುಸ್ತಕ ಪರಿಷೆಯ ಪ್ರಯೋಜನ ಪಡೆಯುವಂತೆ ಆದ್ಯತೆ ನೀಡಲಾಗಿದೆ.

ಕನ್ನಡಿಗರಲ್ಲಿ ಪುಸ್ತಕ ಪ್ರೀತಿ ಹೆಚ್ಚಿಸುವ ಹಾಗೂ ಪುಸ್ತಕ ಜಾಗೃತಿಯ ಪ್ರಾಮಾಣಿಕ ಕಾಳಜಿ ಹೊಂದಿರುವ ಮತ್ತು ಜನರಿಂದ ಜನರಿಗಾಗಿಯೇ ನಡೆಯಲ್ಪಡುವ ಈ ಪುಸ್ತಕ ಪರಿಷೆಗೆ ಸಾರ್ವಜನಿಕರು ತಮ್ಮ ಸಂಗ್ರಹದ ತಾವು ಓದಿ ಮುಗಿಸಿದ ಪುಸ್ತಕಗಳನ್ನು ತಲುಪಿಸಬಹುದು. ಜುಲೈ 25 ಭಾನುವಾರ ಬೆಳಿಗ್ಗೆ 10 ರಿಂದ ಸಂಜೆ 5 ರವರೆಗೆ.

ಪುಸ್ತಕಗಳನ್ನು ತಲುಪಿಸುವ ವಿಳಾಸ:
“ಸೃಷ್ಟಿ ವೆಂಚರ್ಸ್"
ನಂ. 81 ,ಈ.ಏ.ಟಿ ರಸ್ತೆ,
(ಪುಳಿಯೋಗರೆ ಪಾಯಿಂಟ್ ಮೇಲೆ)
ಬಸವನಗುಡಿ, ಬೆಂಗಳೂರು-560004
9945003479, 9448171069, 9900439930.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X