ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಿಳ್ಳೈಯಿಂದ ಪಾಕ್ ಪ್ರವಾಸ ವ್ಯರ್ಥ : ಕೃಷ್ಣ

By Mrutyunjaya Kalmat
|
Google Oneindia Kannada News

SM Krishna
ನವದೆಹಲಿ, ಜು. 22 : ಭಾರತ-ಪಾಕಿಸ್ತಾನ ಮಾತುಕತೆಯು ಕೇಂದ್ರ ಗೃಹ ಸಚಿವ ಜಿರೆ ಪಿಳ್ಳೈ ಅವರ ಟೀಕೆಗಳ ಪರಿಮಾಣವಾಗಿ ಮಹತ್ವ ಕಳೆದುಕೊಂಡಿತು. ನನ್ನ ಇಸ್ಲಾಮಾಬಾದ್ ಪ್ರವಾಸ ವ್ಯರ್ಥವಾಗಿದೆ ಎಂದು ವಿದೇಶಾಂಗ ಖಾತೆ ಸಚಿವ ಎಸ್ ಎಂ ಕೃಷ್ಣ ಹೇಳಿದ್ದಾರೆ.

ಒಂದು ಕಡೆ ಭಾರತ-ಪಾಕಿಸ್ತಾನ ಮಾತುಕತೆ ನಡೆಯುತ್ತಿದ್ದರೆ, ಮುಂಬೈ ದಾಳಿಯಲ್ಲಿ ಐಎಸ್ಐ ನಂಟಿದೆ ಎಂದು ಪಿಳ್ಳೈ ಹೇಳಿದ್ದು ಮಾತುಕತೆಗೆ ವ್ಯತಿರಿಕ್ತ ಪರಿಣಾಮ ಬೀರಿತು. ಒಂದು ವೇಳೆ ನಾನು ಗೃಹ ಕಾರ್ಯದರ್ಶಿಯಾಗಿದ್ದರೆ ಪಾಕಿಸ್ತಾನದ ಉಗ್ರ ಡೆವಿಡ್ ಹೆಡ್ಲೀ ಬಹಿರಂಗಪಡಿಸಿದ ವಿವರಗಳ ಬಗ್ಗೆ ಆ ಸಂದರ್ಭದಲ್ಲಿ ಹೇಳಿಕೆ ನೀಡುತ್ತಿರಲಿಲ್ಲ ಎಂದು ಹೇಳುವ ಮೂಲಕ ಪಿಳ್ಳೈ ಅವರ ಮೇಲೆ ಗೂಬೆ ಕೂರಿಸುವ ಪ್ರಯತ್ನವನ್ನು ಕೃಷ್ಣ ಮಾಡಿದ್ದಾರೆ.

ಎಫ್ ಬಿಐ ಮತ್ತು ಭಾರತದ ತನಿಖಾಧಿಕಾರಿಗಳಿಗೆ ಹೆಡ್ಲಿ ನೀಡಿದ ವಿವರಗಳನ್ನು ಪಿಳ್ಳೈ ಬಹಿರಂಗಪಡಿಸಿದ್ದಾರೆ. ಆದರೆ, ಅದನ್ನೆಲ್ಲ ಬಹಿರಂಗಪಡಿಸಲು ಆ ಸಮಯ ಸೂಕ್ತವಾಗಿರಲಿಲ್ಲ. ಇದು ದುರದೃಷ್ಟಕರ ಸಂಗತಿ ಎಂದು ಕೃಷ್ಣ ವಿವರಿಸಿದರು. ಪಿಳ್ಳೈ ಹೇಳಿಕೆ ಬಗ್ಗೆ ಪ್ರಧಾನಿಯೊಂದಿಗೆ ಚರ್ಚಿಸಿದ್ದೇನೆ. ಪಾಕಿಸ್ತಾನಕ್ಕೆ ಸಂಬಂಧಿಸಿದಂತೆ ದೇಶ ಒಂದೇ ನಿಲುವನ್ನು ಹೊಂದಿರಬೇಕು. ಆ ನಿಲುವಿಗೆ ಪೂರಕ ಹೇಳಿಕೆವಾಗಿ ಮಾತನಾಡಬೇಕು ಎಂದಿರುವ ಕೃಷ್ಣ, ಪರೋಕ್ಷವಾಗಿ ಪಿಳ್ಳೈ ಅವರನ್ನು ಚುಚ್ಚಿದ್ದಾರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X