ಬ್ರಿಟನ್ನಿನಲ್ಲಿ ಬುರ್ಖಾ ನಿಷೇಧ?
ಲಂಡನ್,
ಜು. 18 : ಫ್ರಾನ್ಸ್ ಸರಕಾರದಂತೆ ಬ್ರಿಟನ್ ನಲ್ಲಿ ಬುರ್ಖಾ ನಿಷೇಧಿಸುವಂತೆ ಅಲ್ಲಿನ ಜನರ ಒತ್ತಾಯಕ್ಕೆ ಬ್ರಿಟನ್ ಸರಕಾರ ತಾತ್ಕಾಲಿಕ ಬ್ರೇಕ್ ಹಾಕಿದೆ. ಬ್ರಿಟನ್ ನಲ್ಲಿ ಬುರ್ಖಾ ನಿಷೇಧಿಸಬೇಕು ಎಂದು ಅಲ್ಲಿನ ಜನರ ಆಶಯವಾದರೂ ಸರಕಾರ ಮಾತ್ರ ಸದ್ಯಕ್ಕೆ ಜನರ ಒತ್ತಾಯವನ್ನು ಸ್ಪಷ್ಟವಾಗಿ ತಿರಸ್ಕರಿಸಿದೆ. id="toptextpromo">ಬ್ರಿಟನ್
ಸರಕಾರ ಅಂತ ನಿರ್ಧಾರ ತೆಗೆದುಕೊಳ್ಳುವುದಿಲ್ಲ. ಅನ್ಯ ಧರ್ಮಕ್ಕೆ ನೋವುಂಟಾಗುವುದು ಎನ್ನುವುದಾದರೆ, ಅಂತಹ ಕಾನೂನು ಜಾರಿಗೊಳಿಸಲು ಸರಕಾರ ಸಿದ್ಧವಿಲ್ಲ. ಬ್ರಿಟನ್ ನಲ್ಲಿ ಎಲ್ಲರಿಗೂ ಜಾಗವಿದೆ. ದೇಶದ ಕಾನೂನಿನ ಮಿತಿಯೊಳಗೆ ಅವರವರ ಧರ್ಮಕ್ಕೆ ಅನುಗುಣವಾಗಿ ಎಲ್ಲ ಧರ್ಮದವರೂ ನೆಮ್ಮದಿಯಿಂದ ಇರಬೇಕು ಎಂದು ಸರಕಾರದ ಆಶಯವಾಗಿದೆ ಎಂದು ಬಿಬಿಸಿ ನ್ಯೂಸ್ ಗೆ ಬ್ರಿಟನ್ ಸಾಗರೋತ್ತರ ಸಚಿವ ಡಾಮಿಯನ್ ಗ್ರೀನ್ ಸ್ಪಷ್ಟಪಡಿಸಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಫ್ರಾನ್ಸ್
ಅಧ್ಯಕ್ಷ ನಿಕೋಲಸ್ ಸರ್ಕೋಜಿ ಅವರು ಈಗಾಗಲೇ ಬುರ್ಖಾ ನಿಷೇಧಿಸಿದ್ದಾರೆ. ಇದೇ ಹಾದಿಯಲ್ಲಿ ಬ್ರಿಟನ್ ಸಾಗಬೇಕು ಎಂದು ಅಲ್ಲಿನ ಜನರ ಆಶಯವಾಗಿದೆ. ಯೂಗೋ ಎಂಬ ಸಂಸ್ಥೆ ನಡೆಸಿದ ಸರ್ವೆಯಲ್ಲಿ ಶೇ.67ರಷ್ಟು ಬ್ರಿಟನ್ನರು ಬುರ್ಖಾ ನಿಷೇಧಿಸಬೇಕು ಎಂದು ಹೇಳಿದ್ದಾರೆ. ಆದರೆ, ಜನರ ಆಶಯಕ್ಕೆ ಸರಕಾರದ ಹೇಳಿಕೆ ತಣ್ಣೀರು ಎರಚಿದೆ.











Click it and Unblock the Notifications