ಗೋಹತ್ಯೆ ನಿಷೇಧ ಮಸೂದೆ ದಲಿತ ವಿರೋಧಿ; ಗೌಡ
ಬೆಂಗಳೂರು,
ಜು.17: ರಾಜ್ಯ ವಿಧಾನಮಂಡಲದಲ್ಲಿ ಅಂಗೀಕರಿಸಿರುವ ಜಾನುವಾರು ಹತ್ಯೆ ಪ್ರತಿಬಂಧಕ ಮಸೂದೆಯನ್ನು ರಾಜ್ಯಪಾಲರು ಅಂಗೀಕರಿಸಬಾರದು. ಈ ಮಸೂದೆ ವಿರುದ್ಧ ಪಕ್ಷಾತೀತವಾಗಿ ಹೋರಾಟ ನಡೆಸುವುದಾಗಿ ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ರಾಷ್ಟ್ರಾಧ್ಯಕ್ಷ ಎಚ್ ಡಿ ದೇವೇಗೌಡ ಹೇಳಿದ್ದಾರೆ. id="toptextpromo">ದೇವೇಗೌಡರು
ಶುಕ್ರವಾರ ರಾಜ್ಯಪಾಲ ಎಚ್ ಆರ್ ಭಾರದ್ವಾಜ್ ಅವರಿಗೆ ನಿವೇದನ ಪತ್ರ ಸಲ್ಲಿಸಿದ್ದು, ಇದು ಅಲ್ಪಸಂಖ್ಯಾತರ, ದಲಿತರ ಹಾಗೂ ರೈತರ ವಿರೋಧಿ ಮಸೂದೆ. ಇದನ್ನು ವಿಧಾನ ಮಂಡಲಲ್ಲಿ ಅಂಗೀರಿಸಬಾರದಿತ್ತು ಎಂದಿದ್ದಾರೆ. ಒಂದು ವರ್ಗದ ಆಹಾರ ಪದ್ಧತಿಯನ್ನು ಕಿತ್ತುಕೊಳ್ಳುತ್ತಿರುವ ಈ ಸಮಾಜ ವಿರೋಧಿ ಮಸೂದೆಯನ್ನು ತಡೆಯಬೇಕು ಎಂದು ಗೌಡರು ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಕೃಷಿಯಲಲ್ಲಿ
ನಿರತರಾಗಿರುವ ಶೇ.70ರಷ್ಟು ಮಂದಿಗೆ ಈ ಮಸೂದೆಯಿಂದ ನಷ್ಟವಾಗಲಿದೆ. ಸುಪ್ರೀಂಕೋರ್ಟ್ ನ 1958 ಮತ್ತು 1996ರ ಐದಕ್ಕೂ ಹೆಚ್ಚು ತೀರ್ಪುಗಳಲ್ಲಿ ಗೋಹತ್ಯೆ ನಿಷೇಧ ವಿಧೇಯಕದ ಬಗ್ಗೆ ಪ್ರಸ್ತಾಪಿಸಲಾಗಿದೆ. ಗೋಹತ್ಯೆ ನಿಷೇಧಿಸುವುದರಿಂದ ಕಟುಕರ ಹಕ್ಕುಗಳನ್ನು ಕಸಿದುಕೊಂಡಂತೆ ಎಂದು ಗೌಡರು ಹೇಳಿದರು.











Click it and Unblock the Notifications