ಗೋಹತ್ಯೆ ನಿಷೇಧ ಕಾಯ್ದೆಗೆ ಅಂಗೀಕಾರ
ಬೆಂಗಳೂರು,
ಜು. 16 : ಪ್ರತಿಪಕ್ಷಗಳ ವಿರೋಧದ ನಡುವಯೇ ವಿವಾದಿತ ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣೆ, ಅಲಯನ್ಸ್ ವಿಶ್ವವಿದ್ಯಾಲಯ ಮತ್ತು ಕರ್ನಾಟಕ ಪಂಚಾಯತ್ ರಾಜ್ ವಿಧೇಯಕವನ್ನು ಗುರುವಾರ ವಿಧಾನ ಪರಿಷತ್ ನಲ್ಲಿ ಅಂಗೀಕರಿಸಲಾಯಿತು. id="toptextpromo">ಪ್ರತಿಪಕ್ಷ
ಸದಸ್ಯರು ಸಭಾಪತಿ ಪೀಠದ ಎದುರು ಸರಕಾರ ಮತ್ತು ವಿಧೇಯಕಗಳ ವಿರುದ್ಧ ಜೋರು ದನಿಯಲ್ಲಿ ಘೋಷಣೆ ಕೂಗಿ, ವಿಧೇಯಕಗಳ ಪ್ರತಿಗಳನ್ನು ಹರಿದು ತೂರುತ್ತಿದ್ದರೂ ಸಭಾಪತಿಗಳ ಅಣತಿಯಂತೆ ಸಚಿವರು ವಿಧೇಯಕವನ್ನು ಮಂಡಿಸಿದರು. ಇದಕ್ಕೆ ಆಡಳಿತ ಪಕ್ಷದ ಸದಸ್ಯರು ಒಪ್ಪಿಗೆ ಸೂಚಿಸಿದರು. ಕೇವಲ 20 ನಿಮಿಷದಲ್ಲಿ ಗೊಂದಲದ ನಡುವೆಯೇ ಮೂರು ವಿಧೇಯಕಗಳು ಅಂಗೀಕಾರಗೊಂಡವು. id='are-slot-1' class='oiad oi-axt oiadv'> id='top-searched-articles'>ಲೋಕಾಯುಕ್ತರಿಗೆ
ಹೆಚ್ಚಿನ ಅಧಿಕಾರ ನೀಡುವ ಕುರಿತು ಹಿಂದಿನ ಸಭೆಯಲ್ಲಿ ತೆಗೆದುಕೊಂಡಿದ್ದ ನಿರ್ಣಯಕ್ಕೆ ಸಂಬಂಧಿಸಿದಂತೆ ಕರ್ನಾಟಕ ಲೋಕಾಯುಕ್ತ ಅಧಿನಿಯಮಕ್ಕೆ ತಿದ್ದುಪಡಿ ತರುವ ವಿಧೇಯಕವನ್ನು ವಿಧಾನ ಮಂಡಲ ಅಧಿವೇಶನದಲ್ಲಿ ಮಂಡಿಸಲು ಸಭೆ ತೀರ್ಮಾನ ತೆಗೆದುಕೊಂಡಿದೆ. ಇಂದು ಈ ವಿಧೇಯಕವನ್ನು ಮಂಡಿಸುವ ಸಾಧ್ಯತೆ ಇದೆ.











Click it and Unblock the Notifications