ದೆಹಲಿ ಕಟ್ಟಡ ಕುಸಿತದಲ್ಲಿ ಆರು ಜನರ ಸಾವು
ನವದೆಹಲಿ,
ಜು. 14 : ಗುರುವಾರ ನಸುಕಿನಲ್ಲಿ ಎರಡಂತಸ್ತಿನ ಹಳೆ ಕಟ್ಟಡ ಕುಸಿದು ನವದೆಹಲಿಯಲ್ಲಿ ಆರು ಜನ ಅಸುನೀಗಿದ್ದಾರೆ. ಕಟ್ಟಡದಡಿಯಲ್ಲಿ ಅನೇಕರು ಇನ್ನೂ ಸಿಲುಕಿಕೊಂಡಿದ್ದಾರೆ. id="toptextpromo">ಉಸ್ಮಾನಪುರ
ಬಳಿಯ ಬ್ರಹ್ಮಪುರಿ ಎಂಬಲ್ಲಿ ಬೆಳಗಿನ ಜಾವ 4.25 ಗಂಟೆಗೆ ಕಟ್ಟಡ ಕುಸಿದಿದೆ. ಅಗ್ನಿಶಾಮಕ ದಳ ಸ್ಥಳಕ್ಕೆ ಧಾವಿಸಿದ್ದು ಕಟ್ಟಡದ ಅವಶೇಷದಡಿಯಲ್ಲಿ ಸಿಲುಕಿರುವವರನ್ನು ಹೊರತೆಗೆಯುವ ಕಾರ್ಯದಲ್ಲಿ ನಿರತರಾಗಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಮೂವರು
ಮಹಿಳೆಯರು ಮತ್ತು ಮೂವರು ಪುರುಷರ ದೇಹಗಳನ್ನು ಹೊರತೆಗೆಯಲಾಗಿದೆ. ನಸುಕಿನಲ್ಲಿ ಕಟ್ಟಡ ಕುಸಿತ ಸಂಭವಿಸಿರುವುದರಿಂದ ಮರಣ ಹೊಂದಿದವರ ಸಂಖ್ಯೆ ಇನ್ನೂ ಹೆಚ್ಚಾಗಿರಬಹುದೆಂದು ಅಂದಾಜಿಸಲಾಗಿದೆ.











Click it and Unblock the Notifications