ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೊಳಪಿನ ವಜ್ರ ಗ್ರಾಹಕರ ಕೈ ಕಚ್ಚಲಿದೆ

By Mahesh
|
Google Oneindia Kannada News

Supply cramps may push diamond prices up 15-20%
ನವದೆಹಲಿ, ಜು.14: ಪೂರೈಕೆ ಕಡಿಮೆಯಾಗಿದ್ದು ಬೇಡಿಕೆ ಹೆಚ್ಚಿರುವ ಹಿನ್ನೆಲೆಯಲ್ಲಿ ಕಚ್ಚಾ ಹಾಗೂ ಹೊಳಪುಗೊಳಿಸಲಾದ ವಜ್ರದ ಬೆಲೆ ಶೇ15 ರಿಂದ 20 ರಷ್ಟು ಹೆಚ್ಚಲಿದೆ. ಜಾಗತಿಕ ಆರ್ಥಿಕ ಹಿಂಜರಿತದಿಂದ ಕಳೆದ ವರ್ಷ ವಜ್ರದ ಬೆಲೆಯಲ್ಲಿ ಶೇ30 ರಷ್ಟು ಕುಸಿತವಾಗಿದ್ದು ಅದರಲ್ಲಿ ಶೇ15 ರಷ್ಟು ಈ ವರ್ಷ ಹೆಚ್ಚಳವಾಗಿದೆ.

ಈ ದರ ಇನ್ನಷ್ಟು ಏರಲಿರುವುದಾಗಿ ಪ್ರಮುಖ ವಜ್ರಾಭರಣ ತಯಾರಿಕೆ ಮತ್ತು ರಫ್ತು ಕಂಪೆನಿ ಗೀತಾಂಜಲಿ ಜೆಮ್ಸ್ ನ ಅದ್ಯಕ್ಷ ಮೇಹುಲ್ ಚೋಸ್ಕಿ ಹೇಳುತ್ತಾರೆ. ಉದ್ಯಮದ ಪತ್ರಿಕೆಯಾದ ರಪಾಪೋರ್ಟ್ ಕೂಡ ಬೇಡಿಕೆಯನ್ನು ಪೂರೈಸಲು ಜಾಗತಿಕ ವಜ್ರದ ಗಣಿ ಕಂಪೆನಿಗಳಿಗೆ ಸಾದ್ಯವಾಗುತ್ತಿಲ್ಲ ಎಂದು ತನ್ನ ವರದಿಯಲ್ಲಿ ಹೇಳಿದೆ.

ಭಾರತ ವಿಶ್ವದಲ್ಲೇ ಅತೀ ದೊಡ್ಡ ವಜ್ರಗಳನ್ನು ಸಂಸ್ಕರಿಸುವ ಕೇಂದ್ರವಾಗಿದ್ದು 2009ರಲ್ಲಿ 32,500 ಕೋಟಿ ರೂಪಾಯಿ ಮೌಲ್ಯದ ಕಚ್ಚಾ ವಜ್ರವನ್ನು ಆಮದು ಮಾಡಿಕೊಂಡಿದ್ದು ಹಿಂದಿನ ವರ್ಷಗಳಲ್ಲಿ ಈ ಮೊತ್ತ 45 ರಿಂದ 55 ಸಾವಿರ ಕೋಟಿ ರೂಪಾಯಿಗಳಾಗಿತ್ತು.

ಪ್ರಮುಖ ವಜ್ರದ ಗಣಿ ಕಂಪೆನಿ ಡೆ ಬೀರ್‍ಸ್ ನ ವಜ್ರದ ಉತ್ಪಾದನೆ 24.6 ಮಿಲಿಯ ಕಾರೆಟ್ ಗಳೆಂದು ಅಂದಾಜಿಸಲಾಗಿದ್ದು ಇದು 2008 ಕ್ಕಿಂತ ಶೇ49 ಕಡಿಮೆಯಾಗಿದೆ. ಇನ್ನೊಂದು ಗಣಿ ಕಂಪೆನಿ ರಿನ್ ಟಿಂಟೋ 2009ರಲ್ಲಿ 14.2 ಮಿಲಿಯ ಕ್ಯಾರೆಟ್ ಗಳಷ್ಟು ವಜ್ರವನ್ನು ಉತ್ಪಾದಿಸಿದ್ದು ಇದು ಹಿಂದಿನ ವರ್ಷದ ಉತ್ಪಾದನೆಗಿಂತ ಶೇ33 ಕಡಿಮೆಯಾಗಿದೆ.

ಗಣಿಗಳು ಬಂದ್ :ಈ ಎರಡೂ ಕಂಪೆನಿಗಳು ವಿಶ್ವದ ಶೇ.95ರಷ್ಟು ವಜ್ರದ ಪಾಲನ್ನು ಹೊಂದಿವೆ. ಅಲ್ಲದೆ ಆಫ್ರಿಕಾದ ದಾಮ್ಟ್ ಶಾ ವಜ್ರದ ಗಣಿಯನ್ನು 2009 ರ ಇಡೀ ವರ್ಷ ಮುಚ್ಚಲಾಗಿದ್ದರೆ, ನಮಕ್ವಲಂಡ್ ಗಣಿಯನ್ನು ಮುಂದಿನ ಮೂರು ವರ್ಷಗಳ ವರೆಗೆ ಮುಚ್ಚಲಾಗಿದೆ.

ಹಣಕಾಸಿ ಕೊರತೆಯಿಂದ ಹಾಗು ಬೆಲೆ ಕುಸಿತದಿಂದ ವಜ್ರದ ಗಣಿಗಳು ಮುಚ್ಚಲ್ಪಟ್ಟಿದ್ದರೆ, ಹೊಸ ಗಣಿಗಳು ಕಾರ್ಯಾರಂಭ ಮಾಡಲು ಕನಿಷ್ಠ 7 ರಿಂದ 8 ವರ್ಷ ಬೇಕಾಗುತ್ತದೆ. ವಜ್ರದ ಗ್ರಾಹಕ ದೇಶಗಳಾದ ಭಾರತ ಹಾಗೂ ಚೀನಾ ವಜ್ರದ ಗಣಿಗಳ ಮೇಲೆ ಹೂಡಿಕೆ ಮಾಡಲು ಆಸಕ್ತಿ ತೋರಿವೆ.

ವಜ್ರದ ಬೆಲೆಯಲ್ಲಿ ಪಾರದರ್ಶಕತೆ ಇದ್ದರೆ ಅದು ಜನರನ್ನು ಆಕರ್ಷಿಸುತ್ತದೆ ಹಾಗೂ ಜನರು ಇದನ್ನು ಹೂಡಿಕೆಯ ಉತ್ತಮ ಅವಕಾಶ ಎಂದು ಪರಿಗಣಿಸುತ್ತಾರೆ ಎಂದು ಮುಂಬೈನ ವಜ್ರದ ವ್ಯಾಪಾರಿಯೊಬ್ಬರು ಹೇಳುತ್ತಾರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X