ವಿಧಾನಸಭೆ ಮೊಗಸಾಲೆಯಲ್ಲೇ ಗಾನ ಬಜಾನ !!

ಬೆಂಗಳೂರು, ಜು 14 : ವಿಧಾನಮಂಡಲದ ಎರಡೂ ಸದನದಲ್ಲಿ ವಿಪಕ್ಷಗಳು ಅಹೋರಾತ್ರಿ ಧರಣಿ ಮುಂದುವರಿಸಿದೆ. ಶಾಸಕರು ಸಮಯ ಕಳೆಯಲು ಆಗದೆ ಪರದಾಡುತ್ತಿದ್ದು ಕಂಡುಬಂತು.

ಶಾಸಕರು ಬೇಸರ ನೀಗಿಸಲು ಕೆಲವರು ಅಂತಾಕ್ಷರಿ, ಗಾನಬಜಾನಕ್ಕೆ ಮೊರೆ ಹೋದರು. ಧರಣಿ ನಿರತ ಶಾಸಕರನ್ನು ಭೇಟಿ ಮಾಡಲು ಕೇಂದ್ರ ಕಾರ್ಮಿಕ ಸಚಿವ ಖರ್ಗೆ ಆಗಮಿಸಿ ಶಾಸಕರಿಗೆ ಉತ್ಸಾಹ ತುಂಬಿದರು.

ಅಷ್ಟರಲ್ಲಿ ಸಿದ್ದರಾಮಯ್ಯ ಮೊಬೈಲ್ ರಿಂಗಣಿಸಿತು, ಆ ಕಡೆಯಿಂದ ಮಾಜಿ ಪ್ರಧಾನಿ ದೇವೇಗೌಡರು "ಲೇ ಸಿದ್ರಾಮು, ನಿನ್ನನ್ನು ಭೇಟಿಯಾಗಲು ಬರುತ್ತಿದ್ದೇನೆ" ಎಂದಾಗ ಸಿದ್ದು ಮೊಗಸಾಲೆಯಲ್ಲಿ ಹೋಗಿ ಆಸೀನರಾದರು.

ವಿಡಿಯೋ:
ಸದನದಲ್ಲಿ ಗಾನಾ ಬಜಾನಾ | ಓಲೈಸಲು ವಿಫಲರಾದ ಸಿಎಂ | ಬೆಳಗಾವಿಯಲ್ಲಿ ಗಡಿ ಗದ್ದಲ

ಗೌಡ್ರು ಸಿದ್ದು ಅವರ ಕೈಕುಲುಕುವ ದೃಶ್ಯ ಸೆರೆ ಹಿಡಿಯಲು ಮಾಧ್ಯಮದವರು ಮುಗಿಬಿದ್ದಾಗ ಕೆಲವು ಶಾಸಕರು ಅಪ್ಪಚ್ಚಿಯಾದರು. ಎರಡೂ ಪಕ್ಷದ ಶಾಸಕರು ಗೌಡರ ಕೈಕುಲುಕಿ ಸಂಭ್ರಮಿಸಿದರು. ಗೌಡರ ಭೇಟಿ ಶಾಸಕರಲ್ಲಿ ಹೊಸ ಉತ್ಸಾಹ ಮೂಡಿಸಿದ್ದಂತೂ ನಿಜ.

ಮಾಜಿ ಶಾಸಕ ಅನ್ನದಾನಿ ಹಾಡುಗಾರಿಕೆ ಆರಂಭಿಸಿದರು. ಬಿಸ್ಲೇರಿ ನೀರಿನ ಕ್ಯಾನ್ ಅನ್ನು ತಬಲಾ ಆಗಿ ಬಳಸಿಕೊಂಡರು ರೋಷನ್ ಬೇಗ್, ಚೆಲ್ಲಿದರೋ ಮಲ್ಲಿಗೆಯಾ, ಯಾರಿಗೆ ಯಾರುಂಟು ಎರವಿನ ಸಂಸಾರ ಮುಂತಾದ ಹಾಡುಗಳು ಅನ್ನದಾನಿ ಕಂಠದಿಂದ ಮೂಡಿ ಬಂತು.

ಸಿದ್ದು ಎದ್ದು ಮಹಾಭಾರತದ ದುರ್ಯೋಧನನ ಡೈಲಾಗ್ ಗಳನ್ನೂ ಹೇಳಿದರು. ಶಾಸಕ ಅಶೋಕ್ ಪಟ್ಟನ್ನ ತಮ್ಮ ಮೊಬೈಲ್ ನಲ್ಲಿದ್ದ ಹಾಡುಗಳನ್ನು ಶಾಸಕರಿಗೆ ಕೇಳಿಸಿದರು. ಅಷ್ಟರಲ್ಲಿ ಹೆಚ್ಚಿನ ಶಾಸಕರು ನಿದ್ರೆಗೆ ಶರಣಾದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+