ಶಾಸಕರ ಕಚ್ಚಾಟ; ನಾಯಿ ಜೊತೆ ವಾಟಾಳ್ ಹಾರಾಟ

ಅದಿರಲಿ, ಇಂದು ಫಾರಿನ್ ತಳಿಯ ನಾಲ್ಕಾರು ನಾಯಿಗಳನ್ನು ಒಟ್ಟುಗೂಡಿಸಿಕೊಂಡು ಮಹಾತ್ಮಾ ಗಾಂಧೀ ಪ್ರತಿಮೆ ಎದುರು ಧರಣಿ ಕೂತು ವಾಟಾಳ್ ಅವರನ್ನು ಏನು ವಿಷಯ ಎಂದು ಕೇಳಿದರೆ, ಸದನದಲ್ಲಿ ಶಾಸಕರು ಕಚ್ಚಾಟಕ್ಕೆ ಪ್ರತಿಭಟನೆ ಎಂದರು.
ರಚನಾತ್ಮಕವಾದ ಚರ್ಚೆಯ ತಾಣವಾಗಬೇಕಿದ್ದ ವಿಧಾನಸಭೆಯನ್ನು ಕುಸ್ತಿ ಅಖಾಡ ಮಾಡಿಕೊಂಡಿರುವ ಶಾಸಕರುಗಳಿಗೆ ಧಿಕ್ಕಾರ. ಇದು ಪ್ರಜಾಪ್ರಭುತ್ವದ ದುರಂತ.ಶಾಸಕರ ಕಚ್ಚಾಟವನ್ನು ಸಭಾಪತಿಗಳು ಹಗುರವಾಗಿ ಪರಿಗಣಿಸದೇ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ವಾಟಾಳ್ ಆಗ್ರಹಿಸಿದರು.
ಸಭೆಯನ್ನು ನಿಯಂತ್ರಿಸಲಾಗದೆ, ತನ್ನ ಸಹಚರರನ್ನು ಹದ್ದುಬಸ್ತಿನಲ್ಲಿಡದ ಮುಖ್ಯಮಂತ್ರಿ ಯಡಿಯೂರಪ್ಪ, ಅತ್ಯಂತ ಕಳಪೆ ಹಾಗೂ ದುರ್ಬಲ ಎಂದು ಸಾಬೀತಾಗಿದೆ. ಆ ವ್ಯಕ್ತಿಗೆ ಆತ್ಮಗೌರವ ಹಾಗೂ ಪ್ರಜಾಪ್ರಭುತ್ವದ ಮೇಲೆ ನಂಬಿಕೆ ಇದ್ದರೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲಿ ಎಂದು ವಾಟಾಳ್ ಹೇಳಿದರು.












Click it and Unblock the Notifications