ಮುಸ್ಲಿಂ ನಾಯಕರು ಸ್ವಾರ್ಥಿಗಳು : ಸಲ್ಮಾನ್ ಖುರ್ಷೀದ್
ನವದೆಹಲಿ,
ಜು. 8 : ಭಾರತದಲ್ಲಿರುವ ಮುಸ್ಲಿಂ ನಾಯಕರು ಸ್ವಾರ್ಥಿಗಳು. ಚುನಾವಣೆಯಲ್ಲಿ ಅಮಾಯಕ ಮುಸ್ಲಿಂರಿಂದ ಮತಗಳನ್ನು ಪಡೆದ ಬಳಿಕ ಅವರನ್ನು ತಿರುಗಿಯೂ ನೋಡುತ್ತಿಲ್ಲ ಎಂದು ಕೇಂದ್ರದ ಅಲ್ಪಸಂಖ್ಯಾತರ ಖಾತೆ ಸಚಿವ ಸಲ್ಮಾನ್ ಖುರ್ಷಿದ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. id="toptextpromo">ಇಂಗ್ಲಿಷ್
ವಾರ ಪತ್ರಿಕೆಯೊಂದಿಗೆ ಮಾತನಾಡುತ್ತಿದ್ದ ಅವರು, ಮುಸ್ಲಿಂ ನಾಯಕರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಚುನಾವಣೆ ಸಂದರ್ಭದಲ್ಲಿ ಒಂದೊಂದು ಪಕ್ಷದ ಮೂಲದ ಮತಗಳನ್ನು ಪಡೆಯುವ ಈ ನಾಯಕರು ಆನಂತರ ಎಲ್ಲಿ ಹೋಗುತ್ತಾರೆ ಎಂದು ತಿಳಿಯದು. ಮುಸ್ಲಿಂ ನಾಯಕರು ಜನಾಂಗದ ಅಭಿವೃದ್ಧಿಗಿಂತ ಸ್ವಯಂ ಅಭಿವೃದ್ಧಿ ಮನೆಮಾಡಿಕೊಂಡಿದ್ದರಿಂದ ಅವರು ನಾಯಕತ್ವ ಮುಸ್ಲಿಮರ ಮತ ಪಡೆಯಲಷ್ಟೆ ಸೀಮಿತವಾಗಿದೆ ಎಂದು ಖುರ್ಷಿದ್ ವ್ಯಂಗ್ಯವಾಡಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಇಂದು
ಭಾರತದಲ್ಲಿರುವ ಮುಸ್ಲಿಂ ನಾಯಕರು ಕೇವಲ ಮತ ಪಡೆಯುವ ನಾಯಕರಷ್ಟೆ ಆಗಿದ್ದಾರೆ. ಒಂದೊಂದು ಪಕ್ಷಗಳು ಇವರನ್ನ ಮತಕ್ಕಾಗಿ ಉಪಯೋಗಿಸಿ ನಂತರ ಯಾವ ಊರು ದೊಣ್ಣೆ ನಾಯಕ ಎಂದು ಮಾತನಾಡಿಸುವುದಿಲ್ಲ. ಇನ್ನು ಕೆಲವು ನಾಯಕರು ಪಕ್ಷದೊಳಗೆ ಉತ್ತಮ ಹುದ್ದೆಯಲ್ಲಿದ್ದರೂ ಅವರು ಜನಾಂಗದ ಅಭಿವೃದ್ಧಿ ಚಿಂತನೆ ನಡೆಸದಿರುವುದು ವಿಷಾಧಕರ ಸಂಗತಿ. ಜನಾಂಗದಿಂದಲೇ ಅವರು ದೂರು ಹೋಗಿರುವುದು ದುರದೃಷ್ಟಕರ ಎಂದು ಖುರ್ಷಿದ್ ವಿಷಾಧಿಸಿದರು.











Click it and Unblock the Notifications