ಲ್ಯಾಟಿನ್ ಅಮೆರಿಕಕ್ಕೆ ಗೋದ್ರೆಜ್ ಕೇಶ ರಕ್ಷಣೆ ಲಗ್ಗೆ

ಕಳೆದ ಮೇ ತಿಂಗಳಿನಲ್ಲಿ ಅರ್ಜೆಂಟೈನಾ, ಉರುಗ್ವೇ ಮತ್ತು ಪೆರುಗ್ವೆಯಲ್ಲಿ ಕೇಶ ಬಣ್ಣಗಳ ಮಾರುಕಟ್ಟೆ ನಾಯಕನಾಗಿರುವ ಲ್ಯಾಟಿನ್ ಅಮೆರಿಕದ ಮೂಲದ ಇಷ್ಯೂ ಸಮೂಹವನ್ನು ಕಂಪೆನಿ ಖರೀದಿಸಿತ್ತು.
ಈ ಎರಡೂ ಕಂಪೆನಿಗಳ ಒಟ್ಟು ಮಾರಾಟ 45 ಮಿಲಿಯನ್ ಡಾಲರ್ ಗಳಾಗಿವೆ. ಈ ಖರೀದಿಯನ್ನು ಶೇರು ಹಂಚಿಕೆ ಮತ್ತು ಸಾಲದ ರೂಪದಲ್ಲಿ ಮಾಡಲಾಗಿದೆ ಎಂದು ಕಂಪೆನಿ ಹೇಳಿದೆ. ಈ ಎರಡೂ ಕಂಪೆನಿಗಳ ಸ್ವಾಧೀನದಿಂದ ಲ್ಯಾಟಿನ್ ಅಮೇರಿಕಾದ ದೇಶಗಳಲ್ಲಿ ಕಂಪೆನಿ ಬಲವಾದ ಹೆಜ್ಜೆಯನ್ನು ಊರಲು ಹಾಗೂ ಸಾಧನೆ ಮಾಡಲು ಸಹಾಯಕವಾಗಲಿದೆ ಎಂದು ಗೋದ್ರೆಜ್ ನ ಅದ್ಯಕ್ಷ ಆದಿ ಗೋದ್ರೆಜ್ ಹೇಳಿದರು.
ಗೋದ್ರೆಜ್ ವಿದೇಶಿ ಕಂಪೆನಿಗಳ ಸ್ವಾಧೀನಕ್ಕೆ ಮುಂದಾಗಿದ್ದು ಈ ಹಿಂದೆ ನೈಜೀರಿಯಾದ ಟುರಾ ಸಾಬೂನು ಬ್ರಾಂಡ್ ಹಾಗೂ ಇಂಡೋನೇಷ್ಯಾದ ಮಗಸೆರಿ ಸಮೂಹವನ್ನು ಖರೀದಿಸಿದೆ. ಅಲ್ಲದೆ ಗೋದ್ರೆಜ್ ಸರ ಲೀಯಲ್ಲಿ ಸರ ಲೀಯ ಶೇ51 ಪಾಲನ್ನೂ ಖರೀದಿಸಿದೆ.












Click it and Unblock the Notifications