ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಟಿಯು : ಸ್ವಂತ ವಾಹನ ನಿಷೇಧ ಸರಿಯೇ ?

By Mahesh
|
Google Oneindia Kannada News

VTu to Ban boys bike
ಬೆಂಗಳೂರು, ಜು. 7 : ಇನ್ನು ಮುಂದೆ ಇಂಜಿನಿಯರಿಂಗ್ ಕಾಲೇಜುಗಳಿಗೆ ಬೈಕು, ಸ್ಕೂಟಿ, ಕಾರುಗಳು ಸೇರಿದಂತೆ ಸ್ವಂತ ವಾಹನಗಳನ್ನು ತೆಗೆದುಕೊಂಡು ಹೋಗುವಂತಿಲ್ಲ. ಮಾಲಿನ್ಯ ನಿಯಂತ್ರಣ ಮತ್ತು ಟ್ರಾಫಿಕ್ ಸಮಸ್ಯೆ ನಿವಾರಿಸಲು ಇಂಥ ಕ್ರಮ ತೆಗೆದುಕೊಳ್ಳಲಾಗಿದ್ದು, ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯಕ್ಕೆ ಒಳಪಟ್ಟಿರುವ ರಾಜ್ಯ ಎಲ್ಲ ಇಂಜಿನಿಯರಿಂಗ್ ಕಾಲೇಜುಗಳ ನಾಮಫಲಕದ ಜಾಗದಲ್ಲಿ ಇಂತಹದ್ದೊಂದು ನೋಟಿಸ್ ಆವರಿಸುವ ಸಾಧ್ಯತೆ ಇದೆ.

ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯಕ್ಕೆ ನೂತನ ಕುಲಪತಿಯಾಗಿ ಅಧಿಕಾರ ಸ್ವೀಕರಿಸಿರುವ ಎಚ್ ಮಹೇಶಪ್ಪ ಅವರು ಈ ಬಗ್ಗೆ ಚಿಂತನೆ ನಡೆಸಿದ್ದಾರೆ. ನೂತನ ಕುಲಪತಿಗಳ ಹೊಸ ಐಡಿಯಾ ರಾಜ್ಯಾದ್ಯಂತ ಇರುವ 174 ಇಂಜಿನಿಯರಿಂಗ್ ಕಾಲೇಜುಗಳ 2 ಲಕ್ಷ ವಿದ್ಯಾರ್ಥಿಗಳಿಗೆ ಶಾಕ್ ನೀಡಿರಲಿಕ್ಕೂ ಸಾಕು. ಈಗಾಗಲೇ ಅನೇಕ ವಿದ್ಯಾರ್ಥಿಗಳು ಕುಲಪತಿಗಳ ಚಿಂತನೆಗೆ ವಿರೋಧಿಸಿದ್ದರು. ಕಾಲೇಜುಗಳ ಪ್ರಾಧ್ಯಾಪಕರು ಇದನ್ನು ಸ್ವಾಗತಿಸಿದ್ದಾರೆ.

ಬೆಂಗಳೂರಿನಲ್ಲಿ ಮಟ್ಟಿಗೆ ಹೇಳುವುದಾದರೆ ಟ್ರಾಫಿಕ್ ಸಮಸ್ಯೆ ಬಹುದೊಡ್ಡ ಪ್ರಶ್ನೆಯಾಗಿದೆ. ಇದನ್ನು ನಿವಾರಿಸಲು ಸರಕಾರ ಅನೇಕ ಕ್ರಮಗಳನ್ನು ಕೈಗೊಂಡರೂ ಪ್ರಯೋಜನವಾಗಿಲ್ಲ. ಅಂಡರ್ ಬ್ರಿಡ್ಜ್, ಓವರ್ ಬ್ರಿಡ್ಜ್, ಮೆಟ್ರೋ ರೈಲು ಹೀಗೆ ಅನೇಕ ಯೋಜನೆಗಳನ್ನು ಕೈಗೊಂಡರೂ ಟ್ರಾಫಿಕ್ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚಾಗತೊಡಗಿದೆ ಹೊರತು ಕಡಿಮೆಯಾಗಿಲ್ಲ. ದಿನವೊಂದಕ್ಕೆ ಲಕ್ಷಾಂತರ ವಾಹನಗಳು ಬೆಂಗಳೂರಿನ ರಸ್ತೆಯಲ್ಲಿ ಓಡಾಡುತ್ತವೆ. ಇಂತಹ ಅನೇಕ ಸಮಸ್ಯೆಗಳನ್ನು ಪರಿಗಣಿಸಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಸ್ವಂತ ವಾಹನಗಳನ್ನು ನಿಷೇಧಿಸಲು ಕುಲಪತಿಗಳು ಮುಂದಾಗಿದ್ದಾರೆ.

ಮುಂದಿನ ದಿನಗಳಲ್ಲಿ ಕಾಲೇಜಿನ ವಾಹನಗಳಲ್ಲಿ ವಿದ್ಯಾರ್ಥಿಗಳು ಕಾಲೇಜಿನ ಆಗಮಿಸಬೇಕು. ವಿಶ್ವವಿದ್ಯಾಲಯದ ಅನುಮತಿ ಮೀರಿ ಸ್ವಂತ ವಾಹನಗಳನ್ನು ತಂದರೆ ಕಾಲೇಜಿನ ಆವರಣದಲ್ಲಿ ಪಾರ್ಕ್ ಮಾಡಲು ಅವಕಾಶ ನೀಡುವುದಿಲ್ಲ ಎನ್ನುವ ಅಂಶವೂ ಈ ನೋಟಿಸ್ ನಲ್ಲಿದೆ ಎನ್ನಲಾಗಿದೆ. ಬೆಂಗಳೂರಿನ ಮಟ್ಟಿಗೆ ಕುಲಪತಿಗಳ ಈ ಚಿಂತನೆ ಸ್ವಾಗತಾರ್ಹವಾಗಿದೆ. ಇದರೊಂದಿಗೆ ತಕ್ಕ ಮಟ್ಟಿಗೆ ಟ್ರಾಫಿಕ್ ಸಮಸ್ಯೆಗೆ ಬ್ರೇಕ್ ಹಾಕಬಹುದು ಎನ್ನುವುದು ಸಾರ್ವಜನಿಕರ ಅಭಿಪ್ರಾಯವಾಗಿದೆ.

ಕುಲಪತಿಗಳು ಬಸ್ ನಲ್ಲಿ ಬರ್ತಾರಾ ?

ನೂತನ ಕುಲಪತಿ ಮಹೇಶಪ್ಪ ಅವರ ಹೊಸ ಐಡಿಯಾಗೆ ಬೆಂಗಳೂರಿನ ಬಹುತೇಕ ವಿದ್ಯಾರ್ಥಿಗಳು ವಿರೋಧ ವ್ಯಕ್ತಪಡಿಸಿದ್ದಾರೆ. ಬೆಂಗಳೂರು ಸೇರಿದಂತೆ ಕೆಲ ಕಾಲೇಜುಗಳಲ್ಲಿ ಸ್ವಂತ ವಾಹನದ ಮೂಲಕ ವಿದ್ಯಾರ್ಥಿಗಳನ್ನು ಪಿಕ್ ಮಾಡುತ್ತಾರೆ. ಇನ್ನು ಕೆಲ ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಬಸ್ ಇಲ್ಲವೇ ಸ್ವಂತ ವಾಹನದ ಮೂಲಕ ಕಾಲೇಜು ತಲುಪಬೇಕು. ಹೀಗಿರುವಾಗ ಕುಲಪತಿಗಳ ಈ ಚಿಂತನೆ ಎಷ್ಟರ ಮಟ್ಟಿಗೆ ಸರಿ ?

ಬೊಮ್ಮನಹಳ್ಳಿಯಿಂದ ಕೆಂಗೇರಿಯಲ್ಲಿರುವ ಇಂಜಿನಿಯರಿಂಗ್ ಕಾಲೇಜಿಗೆ ಹೋಗಬೇಕು. ಕಾಲೇಜಿನಲ್ಲಿ ವ್ಯವಸ್ಥೆ ಇಲ್ಲ. ಇದ್ದರೂ ಆದು ನಮಗೆ ಸಿಗುವುದಿಲ್ಲ. ಅದರಿಂದ ನಾನು ಬೈಕು ಮೂಲಕ ಕಾಲೇಜಿಗೆ ತೆರಳುತ್ತೇನೆ. ಆದರೆ, ಇದೀಗ ಬೈಕ್ ಗಳನ್ನು ನಿಷೇಧಿಸಿದರೆ ಕಾಲೇಜಿನ ಬರುವುದಾರೂ ಹೇಗೆ ಎಂದು ಪ್ರಶ್ನಿಸುತ್ತಾನೆ 4ನೇ ಸೆಮಿಸ್ಟರ್ ನ ಪ್ರದೀಪ್.

ನಾವೇನು ಬಸ್ಸಿನಲ್ಲಿ ಬರುತ್ತೇವೆ. ಈ ರೂಲ್ಸ್ ಕುಲಪತಿಗಳಿಗೂ, ಪ್ರಾಧ್ಯಾಪಕರಿಗೂ ಅನ್ವಯಿಸುತ್ತಾ ? ಅವರು ಕೂಡಾ ಬಸ್ ಗಳ ಮೂಲಕ ಕಾಲೇಜಿಗೆ ಬರುತ್ತಾರ ಎಂದು ಪ್ರಶ್ನಿಸುತ್ತಾರೆ ಪಿಇಎಸ್ ಕಾಲೇಜಿನ 6ನೇ ವಿದ್ಯಾರ್ಥಿನಿ ಭವ್ಯ. ಒಟ್ಟಿನಲ್ಲಿ ಕುಲಪತಿ ಮಹೇಶಪ್ಪ ಅವರ ಐಡಿಯಾಗೆ ಪರ-ವಿರೋಧ ಶುರುವಾಗಿದೆ. ಈ ಬಗ್ಗೆ ತಮ್ಮ ಅಭಿಪ್ರಾಯ ?

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X