ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವೆಬ್ ಲೋಕಕ್ಕೆ ಕಾಲಿಟ್ಟ ಎಸ್ ಎಲ್ ಭೈರಪ್ಪ

By Mahesh
|
Google Oneindia Kannada News

SL Bhyrappa
ಬೆಂಗಳೂರು, ಜು.6: ಕನ್ನಡಸಾಹಿತ್ಯ ಲೋಕದ ಹಿರಿಯ ಕಾದಂಬರಿಕಾರ, ಜನಪ್ರಿಯ ಸಾಹಿತಿ ಎಸ್ ಎಲ್ ಭೈರಪ್ಪ ಅವರು ಇತ್ತೀಚೆಗೆ ವೆಬ್ ಪ್ರಪಂಚಕ್ಕೆ ಅಧಿಕೃತವಾಗಿ ವಿಹರಿಸತೊಡಗಿದ್ದಾರೆ. ಎಸ್ ಎಲ್ ಭೈರಪ್ಪ ಅವರ ಅಧಿಕೃತ ವೆಬ್ ಸೈಟ್ ಅನ್ನು ಅಭಿಮಾನಿಗಳು, ಸಾಹಿತ್ಯಾಸಕ್ತರು ಮುಗಿಬಿದ್ದು ನೋಡುತ್ತಿದ್ದಾರೆ.

ಸದ್ಯಕ್ಕೆ ಕನ್ನಡ ಸಾಹಿತಿಯ ವೆಬ್ ಸೈಟ್ ಸಂಪೂರ್ಣ ಆಂಗ್ಲಮಯವಾಗಿದ್ದು, ಮುಂದೆ ಕನ್ನಡ ಅವತರಣಿಕೆ ಕೂಡಾ ಹೊರಬರುವ ನಿರೀಕ್ಷೆಯಿದೆ. ವೆಬ್ ಸೈಟ್ ನಲ್ಲಿ ಭೈರಪ್ಪ ಅವರ ಸಾಹಿತ್ಯ, ಕುಟುಂಬದ ಸಾಕಷ್ಟು ವಿವರಗಳನ್ನು ನೀಡಲಾಗಿದೆ.

ಈ ವೆಬ್ ಸೈಟ್ ನಲ್ಲಿ ಸಂತೇಶಿವರ ಲಿಂಗಯ್ಯ ಭೈರಪ್ಪ ಅವರ ಸ್ವವಿವರಗಳ ಜೊತೆಗೆ ಇತ್ತೀಚಿನ ಆವರಣ ಕಾದಂಬರಿಯಿಂದ ಹಿಡಿದು, ಭೀಮಕಾಯದವರೆಗೂ ಪ್ರಕಟಗೊಂಡ ವರ್ಷ ಹಾಗೂ ಈ ವರೆಗೂ ಅಮ್ರು ಮುದ್ರಣಗೊಂಡ ಸಂಖ್ಯೆಯನ್ನು ನೀಡಲಾಗಿದೆ. ಅಲ್ಲದೆ, ಇತರೆ ಭಾಷೆಗಳಿಗೆ ತರ್ಜುಮೆಗೊಂಡ ಕೃತಿಗಳ ಪಟ್ಟಿಯೂ ಇದೆ.

ಭೈರಪ್ಪ ಅವರ ಕೃತಿ ಆಧಾರಿತ ಸಿನಿಮಾಗಳ ಪಟ್ಟಿ, ಭೈರಪ್ಪ ಅವರ ಕುರಿತು ಬಂದಿರುವ ಅಭಿನಂದನಾರ್ಹ ಕೃತಿಗಳ ಸಮಗ್ರ ಪಟ್ಟಿ, ಭೈರಪ್ಪ ಅವರಿಗೆ ಸಂದಿರುವ ಪ್ರಶಸ್ತಿ, ಪುರಸ್ಕಾರ, ಗೌರವಗಳ ಪಟ್ಟಿ ಕೂಡಾ ಇದೆ. ಇದಲ್ಲದೆ, ಭೈರಪ್ಪ ನವರ ಕೃತಿಗಳ ಕಿರು ಪರಿಚಯ ಕೂಡಾ ಸಿಗುತ್ತದೆ. ದಿನಪತ್ರಿಕೆಗಳಲ್ಲಿ ಪ್ರಕಟಿತವಾದ ಭೈರಪ್ಪ ಅವರ ಲೇಖನಗಳ ಪಿಡಿಎಫ್ ಪ್ರತಿ ಕೂಡಾ ಲಭ್ಯವಿದೆ.

ಕುಟುಂಬ ಸಮೇತ ಎಸ್ ಎಲ್ ಭೈರಪ್ಪ ಅವರ ಗ್ರೂಪ್ ಫೋಟೋ ಜೊತೆಗೆ ಹಲವು ಭಾವ ಭಂಗಿಯಲ್ಲಿ ಮೇರು ಕಾದಂಬರಿಕಾರರ ಚಿತ್ರಗಳು ನೋಡ ಸಿಗುತ್ತವೆ. ಒಂದೆರಡು ವಿಡಿಯೋ ಕ್ಲಿಪಿಂಗ್ ಕೂಡಾ ಇದೆ. ಭೈರಪ್ಪ ಅವರ ಮನೆ ವಿಳಾಸ ಹಾಗೂ ಸಂಪರ್ಕ ವಿಳಾಸ ಕೂಡಾ ಎಲ್ಲರಿಗೂ ಲಭ್ಯವಾಗಿದೆ.

ಸಂಪೂರ್ಣ ನೀಲಿ ಹಾಗೂ ಬಿಳಿ ಬಣ್ಣದಿಂದ ಕೂಡಿರುವ ವೆಬ್ ಸೈಟ್ ಮೊದಲ ನೋಟಕ್ಕೆ ಮೆಚ್ಚುಗೆಯಾಗುತ್ತದೆ. ಪಿಡಿಎಫ್ ಲಿಂಕ್ ತೆರೆದುಕೊಳ್ಳಲು ಕೊಂಚ ಹೆಚ್ಚು ಸಮಯವೇ ಹಿಡಿಯುತ್ತದೆ. ಅದೇ ರೀತಿ, ಫೋಟೋ ಗ್ಯಾಲರಿ ಮಾಡಿದ್ದರೆ ನೋಡಲು ಚೆನ್ನ.

ಇರುವ ಫೋಟೋಗಳ ಗಾತ್ರ ತುಂಬಾ ಹಿರಿದಾಗಿದ್ದು, ಅಷ್ಟೊಂದು ಹೈ ರೆಸಲ್ಯೂಷನ್ ಚಿತ್ರವನ್ನು ವೆಬ್ ಸೈಟ್ ಗೆ ಹಾಕುವುದು ಅಷ್ಟು ತರವಲ್ಲ. ಒಂದೆರಡು ನ್ಯೂನತೆಗಳನ್ನು ಬದಿಗೊತ್ತಿದ್ದರೆ, ವೆಬ್ ಸೈಟ್ ಕನ್ನಡದಲ್ಲಿದ್ದರೆ ಭೈರಪ್ಪ ಹಾಗೂ ಅವರ ಕೃತಿಗಳನ್ನು ಅಭ್ಯಸಿಸುವವರಿಗೆ ಅನುಕೂಲವಾಗುತ್ತದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X