ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಕಿಯ ಗರ್ಭದಲ್ಲಿ ಸಿಲುಕಿದ ಶಾರ್ಜಾದ ಕಟ್ಟಡ

By Mahesh
|
Google Oneindia Kannada News

Sharjah Fire
ಶಾರ್ಜಾ, ಜು.7: ಇಲ್ಲಿನ ಅಲ್ ಬುತೈನ ಪ್ರದೇಶದ ಅಲ್ ಒರೂಬಾ ರಸ್ರೆಯ ಹನ್ನೆರಡು ಅಂತಸ್ತಿನ ಕಟ್ಟಡವೊಂದರಲ್ಲಿ ಉಂಟಾದ ಬೆಂಕಿಯನ್ನು ನಂದಿಸಲು ಅಗ್ನಿಶಾಮಕದಳದವರು ಹರಸಾಹಸ ಪಡುತ್ತಿದ್ದಾರೆ.

ಅಲ್ ಬುತೈನ ಪ್ರದೇಶದ ಅಲ್ ಕುವೈಟಿ ವಸತಿ ಸಮುಚ್ಚಯದಲ್ಲಿ ಜು.6 ರ ಸಂಜೆ 6 ಗಂಟೆ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದ್ದು, ಸುತ್ತಮುತ್ತಲಿನ ಕಟ್ಟಡಗಳಿಗೂ ವ್ಯಾಪಿಸಿದೆ. ಈ ಅಗ್ನಿ ದುರಂತಕ್ಕೆ ಸಿಲಿಂಡರ್ ಸ್ಪೋಟವೇ ಕಾರಣವಾಗಿರಬಹುದು ಮೇಲ್ನೋಟಕ್ಕೆ ಕಂಡು ಬಂದಿದೆ.

ಕಟ್ಟಡ ಸಮುಚ್ಚಯದಲ್ಲಿ 72 ಫ್ಲ್ಯಾಟ್ ಗಳಿದ್ದು ,ಎಷ್ಟು ಜನ ಇದ್ದಾರೆ ಎಂದು ಇನ್ನೂ ನಿಖರವಾಗಿ ತಿಳಿದುಬಂದಿಲ್ಲ. ಸುಟ್ಟಗಾಯಗಳಾಗಿದ್ದ ಆರು ಜನರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಆರು ಜನ ಸ್ಥಳಕ್ಕೆ ಅಗ್ನಿಶಾಮಕ ದಳ, ತುರ್ತು ಸೇವಾ ವಿಭಾಗದವರು ಆಗಮಿಸಿದ್ದು, ಈಗಾಗಲೇ ಓರ್ವ ಮಹಿಳೆಯನ್ನು ಸಾವಿನಿಂದ ಪಾರುಮಾಡಿದ್ದಾರೆ.

ಆದರೆ, ಸಮಯಕ್ಕೆ ಸರಿಯಾಗಿ ನೆರವು ದೊರೆತ ಕಾರಣ, ಯಾವುದೇ ಸಾವುನೋವು ಸಂಭವಿಸಿಲ್ಲ ಎಂದು ಶಾರ್ಜಾ ಪೊಲೀಸ್ ವರಿಷ್ಠ ಕರ್ನಲ್ ಮಹಮ್ಮ್ಸ್ ಈದ್ ಅಲ್ ಮಜ್ಲೊಮ್ ಹೇಳಿದ್ದಾರೆ.

ದುರಂತ ನಡೆದ ಪ್ರದೇಶ ಸಂಪೂರ್ಣ ದಟ್ಟ ಹೊಗೆಯಿಂದ ಆವೃತ್ತವಾಗಿದೆ. ಕಟ್ಟಡದಲ್ಲಿರುವ ಫ್ರೆಶ್ ಚಿಕನ್ ರೆಸ್ಟೋರೆಂಟ್ ನ ಅಡುಗೆಮನೆಯಲ್ಲಿ ಸ್ಫೋಟ ಉಂಟಾಗಿದ್ದು, ಬೆಂಕಿ ದುರಂತಕ್ಕೆ ಕಾರಣ ಎನ್ನಲಾಗಿದೆ. ಸುಮಾರು 25ಕ್ಕೂ ಹೆಚ್ಚು ಅಗ್ನಿಶಾಮಕದಳ ದ ವಾಹನಗಳು ಸತತ ಪ್ರಯತ್ನದ ನಂತರ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿವೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X