ಜರ್ಸಿ ನಂ.10 ಮ್ಯಾಜಿಕ್ ಈಗ ಇತಿಹಾಸವಷ್ಟೇ

ದಕ್ಷಿಣ ಆಫ್ರಿಕಾದಲ್ಲಿ ನಡೆಯುತ್ತಿರುವ ಫೀಫಾ ವಿಶ್ವಕಪ್ ಫುಟ್ಬಾಲ್ ನ ಪಂದ್ಯಾವಳಿಗಳ ಜೊತೆಗೆ ನಂಬಿಕೆ, ಮೂಢನಂಬಿಕೆಗಳ ಸಮರವೂ ನಡೆದಿದೆ. ಆರಂಭದಲ್ಲಿ‍ ‍ವುವುಜೇಲಾ ಪೀಪಿಯ ಮೇಲೇ ನಿಷೇಧ ಹೇರಿದ್ದು ಆಮೇಲೆ ಆದೇಶ ಹಿಂಪಡೆದಿದ್ದು, ಜಬುಲಾನಿ ಚೆಂಡು, ಸ್ಟಾರ್ ಆಟಗಾರರ ಕಡಿಮೆ ಗೋಲು, ಫೇವರಿಟ್ ತಂಡಗಳ ನಿರ್ಗಮನ ಸುದ್ದಿಯ ಪ್ರಮುಖಾಂಶಗಳಾಗಿವೆ. ಸ್ಟಾರ್ ಆಟಗಾರರ ವೈಫಲ್ಯಕ್ಕೆ ಅವರ ಜರ್ಸಿ ನಂಬರ್ ಅನ್ ಲಕ್ಕಿ ಎನಿಸಿದ್ದು ಇದೆ.

ಪ್ರತಿ ವಿಶ್ವಕಪ್ ನಲ್ಲೂ ಒಬ್ಬ ಅಪ್ರತಿಮ ಆಟಗಾರ ಹೊರಹೊಮ್ಮುವುದು ಸಾಮಾನ್ಯ. ಆದರೆ, ಈ ಬಾರಿ ನಿರೀಕ್ಷೆ ಇಟ್ಟುಕೊಂಡಿದ್ದ ಆಟಗಾರರು ವೈಫಲ್ಯ ಕಂಡ ಬೆನ್ನಲ್ಲೇ ಕೆಲ ಯುವ ಆಟಗಾರರು ಭರವಸೆ ಮೂಡಿಸಿದ್ದಾರೆ. ಆದರೆ,ಇದೆಲ್ಲಾ ಅವರು ಧರಿಸಿದ ಜರ್ಸಿ ನಂ ಮಹಿಮೆ ಎಂದರೆ ನಂಬಲು ಸಾಧ್ಯವಿಲ್ಲ.

ಫುಟ್ಬಾಲ್ ದಂತಕತೆ ಬ್ರೆಜಿಲ್‌ನ ಪೀಲೆ, ಅರ್ಜೆಂಟೀನಾದ ಮರಡೋನಾ, 1998ರಲ್ಲಿ ಫ್ರಾನ್ಸ್‌ಗೆ ವಿಶ್ವಕಪ್ ಗೆಲ್ಲಿಸಿಕೊಟ್ಟಿರುವ ಜಿನೆದಿನ್ ಜಿದಾನೆಯವರನ್ನು ಸ್ಟಾರ್ ಪಟ್ಟಕ್ಕೇರಿಸಿರುವ ನಂಬರ್ 10 ಸಂಖ್ಯೆಯ ಜರ್ಸಿ ಎಂಬುದು ಈಗ ಬರೀ ಇತಿಹಾಸ. ಈ ಬಾರಿ ಹತ್ತನೇ ಜರ್ಸಿ ಧರಿಸಿದ ರೂನಿ, ಮೆಸ್ಸಿ, ಕಾಕಾ ಆಡಿದ್ದು ಅಷ್ಟರಲ್ಲೇ ಇದೆ.

1966ರಲ್ಲಿ ಇಂಗ್ಲೆಂಡ್ ವಿಶ್ವಕಪ್ ಗೆದ್ದಾಗ ಇದೇ 10 ನಂಬರ್ ಜರ್ಸಿಯೊಂದಿಗೆ ಆಡಿದ್ದ ಜೆಫ್ ಹರ್ಸ್ಟ್ ಒಂದು ಹ್ಯಾಟ್ರಿಕ್ ಗೋಲಿನ ಸಹಿತ ತಂಡದ ವಿಶ್ವಕಪ್ ಗೆಲುವಿನ ರೂವಾಯೆನಿಸಿದ್ದರು. 1990ರಲ್ಲಿ ಆಟಗಾರ ಪೌಲ್ ಗ್ಯಾಸ್ನೈನ್ ಮಿಂಚಿದ್ದರು. ಆದರೆ, ಈ ಬಾರಿ ರೂನಿ ಮಿಂಚಲಿಲ್ಲ.

1994ರಲ್ಲಿ ಇಟಲಿಯ ರಾಬರ್ಟೋ ಬಜ್ಜಿಯೋ, 2002ರಲ್ಲಿ ಬ್ರೆಜಿಲಿನ ರೊನೊಲ್ಡೊ ಮಿಂಚಿದಂತೆ ಈ ಬಾರಿ ಸ್ಪೇನ್ ನ ಡೇವಿಡ್ ವಿಲ್ಲಾ(ನಂ.7)ನ ಹೊರತಾಗಿ ಯಾವ ಆಟಗಾರನೂ ತಂಡವನ್ನು ತನ್ನ ವೈಯಕ್ತಿಕ ಆಟದ ಮೂಲಕ ಮುಂದಿನ ಹಂತಕ್ಕೆ ತಂಡವನ್ನು ಮುನ್ನೆಡಸಲಿಲ್ಲ.

ಸ್ಪೇನ್ ತಂಡದಲ್ಲಿ ಪ್ರಧಾನ ಸ್ಟ್ರೈಕರ್ ಆಗಿರುವ ಸೆಸ್ ಫ್ಯಾಬ್ರಿಗಸ್ ರಿಂದಲೂ ಈ ಬಾರಿಯ ಮಿಂಚಿನ ಆಟ ನಿರೀಕ್ಷೆ ಮಾಡಲಾಗಿತ್ತು. ಆದರೆ 10 ನಂಬರ್‌ನ ಜರ್ಸಿ ಧರಿಸಿದ್ದ ಫ್ಯಾಬ್ರಿಗಸ್ ಮೈದಾನಕ್ಕಿಳಿದಿದ್ದೇ ಭಾನುವಾರದ ಪಂದ್ಯದಲ್ಲಿ. ಅದೂ ಟೊರೆಸ್‌ರ ಬದಲಿಯಾಗಿ. ಅಂದ ಮಾತ್ರಕ್ಕೆ ಈ ಬಾರಿ 10 ನಂಬರ್‌ನ ಜರ್ಸಿ ಪೂರ್ಣ ಮೋಸ ಮಾಡಿದೆ ಎಂದಲ್ಲ.

ಆದರೆ, ಈ ನಂಬಿಕೆ ಹುಸಿಯಾಗಿದೆ ಕೂಡಾ 7 ನೇ ಜರ್ಸಿ ಧರಿಸುವ ವಿಲ್ಲಾ, ಕ್ಲೋಸ್ ಭರ್ಜರಿ ಪ್ರದರ್ಶನ ನೀಡಿದ್ದರೆ, 10 ನೇ ನಂಬರ್ ಜರ್ಸಿ ಧರಿಸದಿದ್ದರೂ ರೊನೊಲ್ಡೊ ತಮ್ಮ ತಂಡವನ್ನು ಮುಂದಕ್ಕೆ ಕೊಂಡೊಯ್ಯಲಿಲ್ಲ.

ಆದರೆ, ಹತ್ತನೇ ನಂಬರ್ ಜರ್ಸಿ ಧರಿಸುವ ಅಮೆರಿಕಾದ ಡೊನೊವನ್, ಉರುಗ್ವೆಯ ಡಿಯಾಗೋ ಫೊರ್ಲಾನ್ , ಜರ್ಮನಿಯ ಪೊಡೊಲ್ ಸ್ಕಿ ಉತ್ತಮ ಪ್ರದರ್ಶನವನ್ನೇ ನೀಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+