ತಮಿಳುನಾಡು : ಪ್ರೇಮಿಯೊಬ್ಬನ ಮರ್ಯಾದಾ ಹತ್ಯೆ
ಶಿವಗಂಗಾ(ತಮಿಳುನಾಡು),
ಜು. 7 : ಮರ್ಯಾದಾ ಹತ್ಯೆ ಪ್ರಕರಣಗಳು ಬರೀ ಉತ್ತರ ಭಾರತಕ್ಕೆ ಸೀಮಿತವಾಗಿಲ್ಲ, ದಕ್ಷಿಣ ಭಾರತದಲ್ಲೂ ತನ್ನ ಕರಾಳ ಮುಖ ಚಾಚಲು ಆರಂಭಿಸಿದೆ. ಮದುವೆಯಾದ ಪತಿಯನ್ನೇ ಕೈಬಿಟ್ಟು ಪ್ರೀತಿಸಿದ ಯುವಕನೊಂದಿಗೆ ಓಡಿ ಹೋದ ಪ್ರೇಮಿಗಳ ಮೇಲೆ ಮಹಿಳೆಯ ಪೋಷಕರು ದಾಳಿ ನಡೆಸಿದ್ದರಿಂದ ತೀವ್ರವಾಗಿ ಗಾಯಗೊಂಡ ಯುವಕ ಸಾವನ್ನಪ್ಪಿದ್ದು, ಮಹಿಳೆ ಕೂಡಾ ಸಾವು ಬದುಕಿನು ಮಧ್ಯೆ ಹೋರಾಟ ನಡೆಸಿರುವ ಘಟನೆ ತಮಿಳುನಾಡಿನ ಶಿವಗಂಗಾ ಜಿಲ್ಲೆಯಲ್ಲಿ ಮಂಗಳವಾರ ನಡೆದಿದೆ. id="toptextpromo">ಮೇನಕಾ
ಮತ್ತು ಶಿವಕುಮಾರ್ ಕಳೆದ ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದರು. ಆದರೆ, ಇದಕ್ಕೂ ಮುಂಚೆ ಮೇನಕಾ ಮನೆಯವರು ಆಕೆ ವಿರೋಧದ ನಡುವೆಯೂ ಕಾಳಿದಾಸ್ ಎಂಬ ವ್ಯಕ್ತಿಗೆ ಕೊಟ್ಟ ಮದುವೆ ಮಾಡಿದ್ದರು. ಆದರೆ, ಮದುವೆಯನ್ನು ನಿರಾಕರಿಸಿದ್ದ ಮೇನಕಾ ಪ್ರೇಮಿ ಶಿವಕುಮಾರ್ ಜೊತೆ ಓಡಿ ಹೋಗಿ ಮನಮದುರೈ ಎಂಬಲ್ಲಿ ಸಂಸಾರ ಶುರು ಆರಂಭಿಸಿದ್ದಳು. ಮಂಗಳವಾರ ಮನಮದುರೈಗೆ ಆಗಮಿಸಿದ ಮಹಿಳೆಯ ಪೋಷಕರು ಇಬ್ಬರನ್ನು ಮನಬಂದಂತೆ ಥಳಿಸಿದ್ದಾರೆ. id='are-slot-1' class='oiad oi-axt oiadv'> id='top-searched-articles'>ದಾಳಿಗೆ
ತುತ್ತಾದ ಪ್ರೇಮಿ ಶಿವಕುಮಾರ್ ತೀವ್ರವಾಗಿ ಗಾಯಗೊಂಡಿದ್ದರಿಂದ ಆತನನ್ನು ಮದುರೈ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಶಿವಕುಮಾರ್ ಸಾವನ್ನಪ್ಪಿದ್ದಾನೆ. ಗಾಯಗೊಂಡಿರುವ ಮೇನಕಾ ಚಿಕಿತ್ಸೆ ಪಡೆಯುತ್ತಿದ್ದಾಳೆ. ಈ ಇಬ್ಬರೂ ಒಂದೇ ಜಾತಿಗೆ ಸೇರಿದವರಾಗಿದ್ದಾರೆ. ಆದರೆ, ಮನೇಕಾಳನ್ನು ಶಿವಕುಮಾರನಿಗೆ ಕೊಟ್ಟ ಮದುವೆ ಮಾಡಲು ಆಕೆಯ ಮನೆಯವರಿಗೆ ಇಷ್ಟವಿರಲಿಲ್ಲ.











Click it and Unblock the Notifications