ಚಿನ್ನದ ಬೂಟಿನ ಮೇಲೆ ಸ್ಪೇನ್ ವೀರ ವಿಲ್ಲಾ ಕಣ್ಣು

David villa
ಜೋಹಾನ್ಸ್ ಬರ್ಗ್ ,ಜು.6: ಸ್ಪೇನ್ ನ ಮುಂಪಡೆ ಆಟಗಾರ ಡೇವಿಡ್ ವಿಲ್ಲಾಅತಿ ಹೆಚ್ಚು ಗೋಲು ಗಳಿಸಿ 'ಗೋಲ್ಡನ್ ಶೂ' ಪಡೆಯುವ ಕನಸು ಕಾಣುತ್ತಿದ್ದಾರೆ. ಮೆಸ್ಸಿ, ಕಾಕಾ, ರೊನೊಲ್ಡೊ, ರೂನಿರಂತಹ ಅತಿರಥ ಮಹಾರಥರ ನಿರ್ಗಮನದ ನಂತರ ವಿಲ್ಲಾ, ಕ್ಲೋಸ್, ಸ್ನೈಡರ್ ಮೇಲೆ ಎಲ್ಲರ ಕಣ್ಣು ನೆಟ್ಟಿದೆ.

ಕ್ವಾರ್ಟರ್‌ಫೈನಲ್‌ವರೆಗಿನ ಆಟದಲ್ಲಿ ಡೇವಿಡ್ ವಿಲ್ಲಾ 5ಗೋಲುಗಳನ್ನು ಬಾರಿಸಿದ್ದು ಗೋಲ್ಡನ್ ಶೂ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದಾರೆ. ಜರ್ಮನಿಯ ಮಿರೊಸ್ಲಾವ್ ಕ್ಲೋಸ್, ಥಾಮಸ್ ಮುಲ್ಲರ್ ಮತ್ತು ಹಾಲೆಂಡ್‌ನ ವೆಸ್ಲಿ ಸ್ನೈಡರ್ ವಿಲ್ಲಾಗೆ ಕಠಿಣ ಪೈಪೋಟಿ ನೀಡುತ್ತಿದ್ದಾರೆ.

ಜರ್ಮನಿಯ ಮಿರೊಸ್ಲಾವ್ ಕ್ಲೋಸ್ ಕ್ವಾರ್ಟರ್‌ಫೈನಲ್‌ನಲ್ಲಿ ಎರಡು ಗೋಲು ಬಾರಿಸಿದ್ದರಿಂದ ಅವರೀಗ ವಿಶ್ವಕಪ್‌ನಲ್ಲಿ ಒಟ್ಟು 14 ಗೋಲು ಬಾರಿಸಿದ್ದು, ರೋನಾಲ್ಡೋಗಿಂತ ಒಂದು ಗೋಲಷ್ಟೇ ಕಡಿಮೆ ಇದ್ದಾರೆ. ಬ್ರೆಜಿಲ್‌ನ ಸರ್ವಕಾಲಿಕ ಶ್ರೇಷ್ಠ ಆಟಗಾರ ರೊನಾಲ್ಡೋ ವಿಶ್ವಕಪ್ ನಲ್ಲಿ ಒಟ್ಟು 15 ಗೋಲು ಬಾರಿಸಿದ ದಾಖಲೆ ಹೊಂದಿದ್ದಾರೆ.

ಎರಡು ಹಳದಿ ಕಾರ್ಡ್ ಪಡೆದು ಒಂದು ಪಂದ್ಯದ ನಿಷೇಧ ಪಡೆದಿರುವ ಥಾಮಸ್ ಮುಲ್ಲರ್ ಅನುಪಸ್ಥಿತಿ ವಿಲ್ಲಾಗೆ ವರದಾನವಾಗಬಲ್ಲದು. ಆದರೆ, ಸ್ನೈಡರ್ , ಕ್ಲೋಸ್ ಗೋಲುಗಳಿಕೆಯ ಹಸಿವು ಇನ್ನೂ ನೀಗಿಲ್ಲ.

ಬುಧವಾರ ಡರ್ಬನ್ ನಲ್ಲಿ ಜರ್ಮನಿ ವಿರುದ್ಧ ಸೆಮಿಫೈನಲ್ ಪಂದ್ಯದಲ್ಲಿ ವಿಲ್ಲಾ 64ನೇ ಅಂತಾರಾಷ್ಟ್ರೀಯ ಪಂದ್ಯದಲ್ಲಿ 44 ನೇ ಗೋಲು ಬಾರಿಸಿ, ರೌಲ್ ಅವರ ದಾಖಲೆ ಸರಿಗಟ್ಟುವ ತವಕದಲ್ಲಿದ್ದಾರೆ. ಅದರೆ, ಹೆಚ್ಚು ಗೋಲು ಗಳಿಸುವುದಕ್ಕಿಂತ ತಂಡವನ್ನು ಫೈನಲ್ ಗೆ ಕೊಂಡೊಯ್ಯುವುದು ಮುಖ್ಯ ಎಂದು ವಿಲ್ಲಾ ಹೇಳುತ್ತಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+