ಕಾಂಗ್ರೆಸ್ಸಿಗರೆ ನನ್ನ ಬಳಿ ಬರಬೇಡಿ : ರಾಜ್ಯಪಾಲ
ಹಾಸನ,
ಜು. 5 : ರಾಜ್ಯದಲ್ಲಿ ಯಾವುದೇ ಸಮಸ್ಯೆಗಳು ತಲೆದೋರಿದಾಗ ಮನವಿ ಪತ್ರ ಹಿಡಿದು ರಾಜಭವನದತ್ತ ಬರುವ ಕಾಂಗ್ರೆಸ್ ಮುಖಂಡರ ಬಗ್ಗೆ ರಾಜ್ಯಪಾಲ ಎಚ್ ಆರ್ ಭಾರದ್ವಾಡ್ ತೀವ್ರ ಅಸಮಾದಾನ ವ್ಯಕ್ತಪಡಿಸಿದ್ದಾರೆ. id="toptextpromo">ನಾನು
ರಾಷ್ಟ್ರಪತಿಗಳ ಪ್ರತಿನಿಧಿಯೇ ಹೊರತು ರಾಜಕೀಯ ಪಕ್ಷಗಳ ಪ್ರತಿನಿಧಿಯಲ್ಲ. ರಾಜ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳಾಗಿದ್ದರೆ ಅದರ ಬಗ್ಗೆ ವಿಧಾನಸಭೆಯಲ್ಲಿ ಹೋರಾಟ ನಡೆಸಬೇಕು. ಆದರೆ, ಯಾವ ಕಾರಣಕ್ಕೂ ನನ್ನ ಬಳಿ ಬರಬೇಡಿ ಎಂದು ವಿರೋಧ ಪಕ್ಷದ ಮುಖಂಡರಿಗೆ ರಾಜ್ಯಪಾಲರು ಸೂಚನೆ ನೀಡಿದ್ದಾರೆ. ರಾಜ್ಯದ ಸಂಪತ್ತು ಲೂಟಿ ಆಗುತ್ತಿರುವುದನ್ನು ಮೂಕಪ್ರೇಕ್ಷಕನಂತೆ ನೋಡಲಾರೆ. ಸೂಕ್ತ ಸಮಯದಲ್ಲಿ ಸರಿಯಾದ ನಿರ್ಧಾರ ತೆಗೆದುಕೊಳ್ಳುವ ಜವಾಬ್ದಾರಿ ನನ್ನ ಮೇಲಿದೆ ಎಂದು ರಾಜ್ಯಪಾಲರು ವಿವರಿಸಿದರು. id='are-slot-1' class='oiad oi-axt oiadv'> id='top-searched-articles'>ಬಿಜೆಪಿ
ಸರಕಾರ ಅಧಿಕಾರ ಬಂದ ಕಾಂಗ್ರೆಸ್ ಮುಖಂಡರು ಸಣ್ಣಪುಟ್ಟ ಸಮಸ್ಯೆಗಳಿಗೂ ರಾಜಭವನದತ್ತ ಮುಖ ಮಾಡುವುದು ಹೊಸದೇನಲ್ಲ. ಪಟಾಕಿ ಸಿಡಿದರೂ ಬಿಜೆಪಿ ಸರಕಾರದ ಕೈವಾಡ ಎಂದು ರಾಜಭವನಕ್ಕೆ ತೆರೆಳಿ ಮನವಿ ಸಲ್ಲಿಸಿರುವ ಅನೇಕ ಉದಾಹರಣೆಗಳು ಇವೆ.











Click it and Unblock the Notifications