ರಾಮಮಂದಿರಕ್ಕೆ ವಿರೋಧಿಸುವವರು ಪಾಪಿಗಳು

ಸಂಸ್ಕೃತ ಪ್ರತಿಷ್ಠಾನಂ ಏರ್ಪಡಿಸಿದ್ದ ಒಂದು ದಿನದ ವಿಚಾರ ಸಂಕಿರಣವನ್ನು ಉದ್ಘಾಟಿಸಿದ ತೊಗಾಡಿಯಾ, ರಾಮಮಂದಿರ ನಿರ್ಮಾಣಕ್ಕೆ ಮುಸಲ್ಮಾನರು ಕೂಡಾ ಸಹಕರಿಸಬೇಕೆಂದರು.
ರಾಮಮಂದಿರ ಈ ದೇಶದ ಸಮಸ್ತ ಜನರ ಒಂದು ಆಶಯ. ಇದು ಭಾರತೀಯರ ಭಾವನೆ ಕೂಡಾ. ಭಾರತೀಯರೆಲ್ಲರೂ ಈ ವಿಚಾರದಲ್ಲಿ ಒಮ್ಮತದಿಂದ ರಾಮಮಂದಿರ ನಿರ್ಮಾಣಕ್ಕೆ ಧನಿಗೂಡಿಸಬೇಕಿದೆ. ರಾಮಮಂದಿರ ನಿರ್ಮಾಣ ಆಗಬೇಕೆಂಬುದು ಈ ದೇಶದ ಪ್ರತಿಯೊಬ್ಬ ಭಾರತೀಯ ಬಯಸಿರುವುದು ಸಹಜ. ಈ ಭಾವನೆಗಳನ್ನು ದೇಶದ ಮುಸಲ್ಮಾನರೂ ಗೌರವಿಸಿ ಮಂದಿರ ನಿರ್ಮಾಣಕ್ಕೆ ಮುಂದಾಗಬೇಕಿದೆ.
ಈ ವಿಚಾರದಲ್ಲಿ ಯಾವ ಜಿಜ್ಞಾಸೆ- ಚಿಂತನ- ಮಂಥನಗಳ ಅಗತ್ಯವಿಲ್ಲ. ಅಯೋಧ್ಯೆಯಲ್ಲಿ ರಾಮ ಮಂದಿರ ಬೇಡ ಎನ್ನುವವರು ಹಿಂದೂ ಧರ್ಮಿಯರೇ ಅಲ್ಲ. ಇಂತಹ ನಿಲುವು ತಾಳುವ ವ್ಯಕ್ತಿಗಳು ಜಿಹಾದಿಗಳಲ್ಲದೆ ಬೇರೇನೂ ಆಲ್ಲ ಎಂದು ತೊಗಾಡಿಯಾ ಗುಡುಗಿದರು.
ಸಂಶೋಧಕ ಡಾ. ಚಿದಾನಂದಮೂರ್ತಿ ಮಾತನಾಡಿ, ದೇಶದ ಹಲವಾರು ದೇವಾಲಯಗಳನ್ನು ಧ್ವಂಸಗೊಳಿಸಿ ಹಿಂದೂ ಧರ್ಮೀ ಯರ ಮೇಲೆ ಮುಸಲ್ಮಾನರು ದೌರ್ಜನ್ಯ ನಡೆಸಿರುವುದು ಕರಾಳ ಇತಿಹಾಸ ಎಂದು ಹೇಳಿದರು. ಪ್ರಪಂಚದ ಯಾವ ದೇಶದ ಚರಿತ್ರೆಯಲ್ಲಿಯೂ ಕಂಡರಿಯದ ರೀತಿಯಲ್ಲಿ ಸನಾತನ ಭಾರತೀಯ ಸಂಸ್ಕೃತಿ ಮೇಲೆ ದುರಾಕ್ರಮಣ ನಡೆದಿದೆ ಎಂದು ಅವರು ಪ್ರತಿಪಾದಿಸಿದರು.












Click it and Unblock the Notifications